Paris Olympics: ಆಸ್ಟ್ರೇಲಿಯಾ ಮಣಿಸಿದ ಭಾರತ: ಪದಕದ ಆಸೆಯನ್ನು ಚಿಗುರಿಸಿದ ಹಾಕಿ ತಂಡ

1972 ಒಲಿಂಪಿಕ್ಸ್‌ ಬಳಿಕದ ಇದೇ ಮೊದಲ ಬಾರಿಗೆ ಭಾರತ ಪುರುಷರ ಹಾಕಿ ತಂಡ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದೆ.

ಶುಕ್ರವಾರ ನಡೆದ ಗುಂಪು ಹಂತದ ಪಂದ್ಯದಲ್ಲಿ ಭಾರತ 3-2 ರಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಟೀಮ್ ಇಂಡಿಯಾ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಮುನ್ನ ಹೊಸ ಉತ್ಸಾಹವನ್ನು ಪಡೆಯಿತು.

Paris Olympics India beat Australia The hockey team is eager for a medal

ಆರಂಭದಲ್ಲೇ ಅಬ್ಬರಿಸಿದ ಭಾರತ

ಭಾರತ ಆಸ್ಟ್ರೇಲಿಯಾ ವಿರುದ್ಧ ಅಮೋಘ ಜಯ ಸಾಧಿಸುವ ಮೂಲಕ ಅಂಕಗಳಿಕೆಯನ್ನು ಹೆಚ್ಚಿಸಿಕೊಂಡರು. ಆಡಿದ ಐದು ಪಂದ್ಯಗಳಲ್ಲಿ 3 ಜಯ ಹಾಗೂ 1 ಡ್ರಾ, 1 ಸೋಲು ಕಂಡಿದ್ದು 10 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಸದ್ಯಕ್ಕೆ ಎರಡನೇ ಸ್ಥಾನದಲ್ಲಿದೆ.

ಆರಂಭದಲ್ಲಿ ಅಮೋಘ ಆಟದ ಪ್ರದರ್ಶನ ನೀಡಿದ ಭಾರತದ ಆಟಗಾರರು, ಆಸೀಸ್‌ ಆಟಗಾರರ ರಕ್ಷಣಾ ವಿಭಾಗವನ್ನು ಮಣ್ಣು ಮುಕ್ಕಿಸಿದರು. ಅಲ್ಲದೆ ಮೊದಲಾವಧಿಯಲ್ಲಿ ಭಾರತ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿತು. ಪಂದ್ಯದ 12ನೇ ನಿಮಿಷದಲ್ಲಿ ಗೋಲು ಪೆಟ್ಟಿಗೆಯ ಬಲಗಡೆಯಿಂದ ಬಂದ ಚೆಂಡಿಗೆ ಅಭಿಷೇಕ್‌ ಗೋಲು ಪೆಟ್ಟಿಗೆಯ ದರ್ಶನ ಮಾಡಿಸುವಲ್ಲಿ ಸಫಲರಾದರು. ಈ ಮೂಲಕ ಭಾರತಕ್ಕೆ ಮುನ್ನಡೆ ದೊರಕಿಸಿಕೊಟ್ಟರು.

ಈ ಗೋಲು ದಾಖಲಾದ ಕೇವಲ ಒಂದೇ ನಿಮಿಷದ ಅಂತರದಲ್ಲಿ ಹರ್ಮನ್‌ ಪ್ರೀತ್‌ ಸಿಂಗ್ ಅಮೋಘ ಆಟದ ಪ್ರದರ್ಶನ ನೀಡಿ ತಂಡಕ್ಕೆ ಗೋಲಿನ ಉಡುಗೊರೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+