Ind vs Ban: ಭಾರತವನ್ನು ಸೋಲಿಸಿದರೆ...! ಬಾಂಗ್ಲಾದೇಶ ತಂಡಕ್ಕೆ ಪಾಕಿಸ್ತಾನದ ನಟಿ ಕೊಟ್ಟ ಆಫರ್ ಏನು?

ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಏಕದಿನ ವಿಶ್ವಕಪ್‌ನಲ್ಲಿ 8ನೇ ಬಾರಿ ಭಾರತ ಸತತವಾಗಿ ಪಾಕಿಸ್ತಾನ ತಂಡವನ್ನು ಸೋಲಿಸಿ ಸಾಧನೆ ಮಾಡಿದೆ.

ಇಂದು (ಗುರುವಾರ) ಭಾರತ ತಂಡ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಈ ಬೆನ್ನಲ್ಲೇ ಪಾಕಿಸ್ತಾನ ನಟಿಯೊಬ್ಬರು ಬಾಂಗ್ಲಾದೇಶ ತಂಡಕ್ಕೆ ಭರ್ಜರಿ ಆಫರ್ ಕೊಟ್ಟಿದ್ದಾರೆ. ಪಾಕಿಸ್ತಾನದ ಸೋಲಿಗೆ ಸೇಡು ತೀರಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.

 Pakistani Actress Bold Promise: Date with a Bangladeshi Cricketer if They Beat India

ಸೆಹರ್ ಶಿನ್ವಾರಿ ಎಂಬ ಹೆಸರಿನ ಪಾಕಿಸ್ತಾನದ ನಟಿ, ವಿಶ್ವಕಪ್ ಘರ್ಷಣೆಯಲ್ಲಿ ಭಾರತವನ್ನು ಸೋಲಿಸಲು ಯಶಸ್ವಿಯಾದರೆ ಬಾಂಗ್ಲಾದೇಶ ಕ್ರಿಕೆಟಿಗನೊಂದಿಗೆ ಡೇಟಿಂಗ್‌ಗೆ ಹೋಗುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹೇಳಿದ್ದಾರೆ

ಟ್ವೀಟ್‌ ಮಾಡಿರುವ ಅವರು, "ಇನ್ಶಾ ಅಲ್ಲಾಹ್ ನನ್ನ ಬಾಂಗಾಲಿ ತಂಡ ಮುಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುತ್ತಾರೆ. ಅವರ ತಂಡವು ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ ನಾನು ಢಾಕಾಗೆ ಹೋಗಿ ಬಂಗಾಲಿ ಹುಡುಗುನ ಜೊತೆ ಮೀನು ಭೋಜನ ಡೇಟ್ ಮಾಡುತ್ತೇನೆ" ಎಂದು ಹೇಳಿದ್ದಾರೆ.

ಈ ಮೊದಲು ಟ್ವೀಟ್ ಮಾಡಿದ್ದ ನಟಿ

ಸೆಹರ್ ಶಿನ್ವಾರಿ ಭಾರತ ಪಾಕಿಸ್ತಾನ ಪಂದ್ಯಕ್ಕೆ ಮುನ್ನ ಹಲವು ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಪಾಕಿಸ್ತಾನದ ವಿರುದ್ಧ ಭಾರತ ಗೆದ್ದರೆ ಇನ್ನುಮುಂದೆ ಭಾರತ ಮತ್ತು ಬಿಜೆಪಿ ಬಗ್ಗೆ ಟ್ವೀಟ್ ಮಾಡಲ್ಲ ಎಂದು ಹೇಳಿದ್ದರು. ಅದೇ ಟ್ವೀಟ್ ಅನ್ನು ಇಟ್ಟುಕೊಂಡು ಅನೇಕ ಭಾರತದ ಕ್ರಿಕೆಟ್ ಅಭಿಮಾನಿಗಳು ನಟಿಯ ಕಾಲೆಳದಿದ್ದಾರೆ.

ಭಾರತದ ವಿರುದ್ಧ ಪಾಕಿಸ್ತಾನ ಸೋತ ನಂತರ ಆಕ್ರೋಶ ವ್ಯಕ್ತಪಡಿಸಿದ್ದ ಅವರು, ಪಾಕಿಸ್ತಾನದಲ್ಲಿ ಕ್ರಿಕೆಟ್ ಬ್ಯಾನ್ ಮಾಡುವಂತೆ ಮನವಿ ಮಾಡಿದ್ದರು. ಈ ಆಟ ನಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದೆ ಎಂದು ಪಾಕಿಸ್ತಾನದ ಸೋಲಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಪಾಕಿಸ್ತಾನದ ಖ್ಯಾತೆ

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅನೇಕ ವಿಷಯಗಳ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಔಪಚಾರಿಕ ಪ್ರತಿಭಟನೆಯನ್ನು ಸಲ್ಲಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪಾಕಿಸ್ತಾನಿ ಪತ್ರಕರ್ತರಿಗೆ ವೀಸಾ ವಿಳಂಬ ಮತ್ತು ನಡೆಯುತ್ತಿರುವ ವಿಶ್ವಕಪ್ 2023 ಗಾಗಿ ಪಾಕಿಸ್ತಾನ ಅಭಿಮಾನಿಗಳಿಗೆ ವೀಸಾ ನೀತಿಯ ಅನುಪಸ್ಥಿತಿಯ ಬಗ್ಗೆ ಐಸಿಸಿಗೆ ಮತ್ತೊಂದು ಔಪಚಾರಿಕ ಪ್ರತಿಭಟನೆಯನ್ನು ಸಲ್ಲಿಸಿದೆ. ಭಾರತದ ಅಭಿಮಾನಿಗಳ ಅನುಚಿತ ವರ್ತನೆಯ ಬಗ್ಗೆ ದೂರು ದಾಖಲಿಸಿದೆ.

ಭಾರತ ಇಂದು ಬಾಂಗ್ಲಾದೇಶ ತಂಡವನ್ನು ಎದುರಿಸಲಿದ್ದು ಗೆಲುವು ಸಾಧಿಸಿದರೆ ಸೆಮಿಫೈನಲ್ ಹಾದಿ ಸುಲಭವಾಗಲಿದೆ. ಪಾಕಿಸ್ತಾನ ತಂಡ ಶುಕ್ರವಾರದಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+