ಐಸಿಸಿ ವಿಶ್ವಕಪ್: ಪಾಕಿಸ್ತಾನ ಕ್ರಿಕೆಟ್ ತಂಡದ ಹೀನಾಯ ಸೋಲಿಗೆ ಆಯ್ಕೆ ಸಮಿತಿ ಸದಸ್ಯರನ್ನೇ ಒದ್ದೋಡಿಸಿದ ಪಿಸಿಬಿ!

ಭಾರತ ಕ್ರಿಕೆಟ್ ಲೋಕದ ನಕ್ಷತ್ರ ಎಂಬ ಮಾತನ್ನು, ಮತ್ತೆ ಸಾಬೀತು ಮಾಡುತ್ತಿದೆ. ಆದರೆ ಇದೇ ಸಮಯದಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಕ್ರಿಕೆಟ್ ಜಗತ್ತಿನಲ್ಲಿ ತನ್ನ ಹೀನಾಯ ಪ್ರದರ್ಶನ ಮುಂದುವರಿಸಿದೆ. ಹಲವು ಹೀನಾಯ ಸೋಲಿನ ಬಳಿಕ ಈಗ, ಪಾಕ್ ಕ್ರಿಕೆಟ್ ಟೀಂ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಅಖಾಡದಿಂದ ಭೀಕರವಾಗಿ ಹೊರಬಿದ್ದಿದೆ. ಇದೇ ಸಮಯದಲ್ಲಿ ರೊಚ್ಚಿಗೆದ್ದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಡಿದ್ದು ಏನು ಗೊತ್ತಾ?

ಪಾಕಿಸ್ತಾನ ಕ್ರಿಕೆಟ್ ಇತಿಹಾಸವೇ ಹೀಗೆ, ವಿವಾದ ಇಲ್ಲದ ದಿನವೇ ಇಲ್ಲ. ಒಂದಲ್ಲ ಒಂದು ಕಾರಣಕ್ಕೆ ಪಾಕಿಸ್ತಾನದ ಕ್ರಿಕೆಟ್ ಟೀಕೆಗೆ ಗುರಿಯಾಗುತ್ತಿರುತ್ತೆ. ಹೀಗೆ 2023ರಲ್ಲಿ ಕೂಡ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಅಖಾಡದಿಂದ, ಹೀನಾಯ ಸೋಲಿನ ಮೂಲಕ ಹೊರಬಿದ್ದಿತ್ತು ಪಾಕ್ ತಂಡ. ಇಂತಹ ತಂಡ ತವರು ನೆಲಕ್ಕೆ ಹೋದರೆ ಜನ ಸುಮ್ಮನೆ ಇರ್ತಾರಾ ಹೇಳಿ? ಇಲ್ಲ, ಇಲ್ಲ ಸಾಧ್ಯವೇ ಇಲ್ಲ. ಇದೀಗ ಪಾಕಿಸ್ತಾನ ಕ್ರಿಕೆಟ್ ಟೀಂ ತನ್ನ ದೇಶಕ್ಕೆ ವಾಪಸ್ಸಾದ ನಂತರ ಪರಿಸ್ಥಿತಿ ಭೀಕರವಾಗಿದೆ. ಆಕ್ರೋಶದ ರಣಕಹಳೆ ಮೊಳಗಿದ್ದು ಪಾಕಿಸ್ತಾನ ಕ್ರಿಕೆಟ್‌ನ ಉಸ್ತುವಾರಿ ನೋಡಿಕೊಳ್ಳುವ 'ಪಿಸಿಬಿ' ಮಂಡಳಿ, ಕ್ರಿಕೆಟ್ ಅಭಿಮಾನಿಗಳ ಈ ಆಕ್ರೋಶಕ್ಕೆ ಮಣಿದು ಅತ್ಯಂತ ಕಠಿಣ ನಿರ್ಣಯ ಕೈಗೊಂಡಿದೆ.

pakistan-cricket-board-taken-this-strong-decision

ಯಾರದ್ದೋ ತಪ್ಪು.. ಇನ್ಯಾರೋ ಉಡೀಸ್!

ಹೌದು, 2023ರ ಐಸಿಸಿ ವಿಶ್ವಕಪ್ ಅಖಾಡದಲ್ಲಿ ಭಾರತ ಅಬ್ಬರಿಸುತ್ತಿದೆ. ಈಗಾಗಲೇ ಲೀಗ್ ಹಂತದಲ್ಲಿ ಭಾರತ ತಂಡ ಆಡಿದ 9ಕ್ಕೆ 9 ಪಂದ್ಯವನ್ನೂ ಗೆದ್ದು, ಸೆಮಿಫೈನಲ್‌ಗೆ ಪ್ರವೇಶ ಪಡೆದು ಕಿವೀಸ್ ತಂಡದ ಕಿವಿ ಹಿಂಡಲು ಸಜ್ಜಾಗಿದೆ. ಆದರೆ ಈ ಸಮಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಪಾಕಿಸ್ತಾನ ರಾಜಕೀಯ ವ್ಯವಸ್ಥೆ ರೀತಿ, ಅಲ್ಲಿನ ಕ್ರಿಕೆಟ್ ವ್ಯವಸ್ಥೆ ಕೂಡ ಗಬ್ಬೆದ್ದು ಹೋಗಿದೆ. ಪಾಕ್ ಟೀಂ ಹೀನಾಯವಾಗಿ ಸೋತ ಕೋಪಕ್ಕೆ ಆಯ್ಕೆ ಸಮಿತಿಯನ್ನೇ ಉಡೀಸ್ ಮಾಡಿದೆ ಪಿಸಿಬಿ. ಹೀಗೆ ಪಾಕ್ ಕ್ರಿಕೆಟ್ ಬೋರ್ಡ್ ಕೈಗೊಂಡ ಕ್ರಮ ಚರ್ಚೆಗೆ ಗ್ರಾಸವಾಗಿದೆ.

ಆರಂಭದಲ್ಲಿ ಚೆನ್ನಾಗಿಯೇ ಆಡಿದ್ದ ಪಾಕ್

ವಿಶ್ವಕಪ್ ಆರಂಭದಲ್ಲಿ ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ್ದ ಪಾಕಿಸ್ತಾನ ಬಳಿಕ ಭಾರತದ ವಿರುದ್ಧ ಹೀನಾಯ ಸೋಲು ಕಂಡಿತ್ತು. ಅಲ್ಲಿಂದ ಶುರುವಾದ ಪಾಕ್‌ ಟೀಂನ ಹೀನಾಯ ಪ್ರದರ್ಶನ ನಿಲ್ಲಲೇ ಇಲ್ಲ. ಅದರಲ್ಲೂ ಅಫ್ಘಾನಿಸ್ತಾನ ವಿರುದ್ಧ ಕೂಡ ಹೀನಾಯ ಸೋಲು ಕಂಡಿತ್ತು. ಹೀಗಾಗಿ, 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲೇ ಪಾಕಿಸ್ತಾನ ನಿರ್ಗಮಿಸುವುದು ಪಕ್ಕಾ ಆಗಿತ್ತು. ಆದರೂ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ, ನ್ಯೂಜಿಲೆಂಡ್ ವಿರುದ್ಧ ಗೆದ್ದು ಬೀಗಿದ್ದ ಹಿನ್ನೆಲೆ ಪಾಕಿಸ್ತಾನದ ಆಸೆ ಜೀವಂತವಾಗಿತ್ತು. ಕೊನೆಗೆ ಇಂಗ್ಲೆಂಡ್ ವಿರುದ್ಧ ಕೊನೇ ಪಂದ್ಯವನ್ನ ಹೀನಾಯವಾಗಿ ಸೋತು ಮನೆಗೆ ಹೋಗಿತ್ತು ಪಾಕ್.

pakistan-cricket-board-taken-this-strong-decision

ಸ್ಪಿನ್ ಪಿಚ್‌ನಲ್ಲೂ ಹೀನಾಯ ಪ್ರದರ್ಶನ

ಒಟ್ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ತನಗೆ ಸಿಕ್ಕಿದ್ದ ಅತ್ಯದ್ಭುತ ಅವಕಾಶವನ್ನೂ ಕೈಚೆಲ್ಲಿಬಿಟ್ಟಿದೆ. ಭಾರತ ನೆಲದಲ್ಲಿ ನಡೆಯುತ್ತಿರುವ 2023 ಐಸಿಸಿ ಕ್ರಿಕೆಟ್ ವಿಶ್ವಕಪ್ ಅಖಾಡದಲ್ಲಿ ಕಮ್ಮಿ ಕಮ್ಮಿ ಅಂದ್ರು ಸೆಮಿಫೈನಲ್‌ಗೆ ಹೋಗಬಹುದಿತ್ತು. ಯಾಕಂದ್ರೆ ಭಾರತದ ಪಿಚ್‌ಗಳು ಸ್ಪಿನ್ನರ್ಸ್‌ಗೆ ಸಹಕಾರಿ, ಪಾಕಿಸ್ತಾನದ ಆಟಗಾರರು ಸ್ಪಿನ್ ಅಖಾಡದಲ್ಲಿ ಮಿಂಚುವ ಶಕ್ತಿ ಹೊಂದಿದ್ದಾರೆ. ಹೀಗಿದ್ದರೂ ಪಾಕಿಸ್ತಾನ ಹೀನಾಯವಾಗಿ ಸೋತು ವಿಶ್ವಕಪ್ ಅಖಾಡದಿಂದ ನಿರ್ಗಮಿಸಿದೆ. ಕೊನೆಗೆ ಮನೆಗೆ ಹೋದರೂ ನೆಮ್ಮದಿ ಇಲ್ಲವಾಗಿದೆ.

ಹೀಗೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎನ್ನುವಂತೆ ಪಾಕಿಸ್ತಾನದ ಆಟಗಾರರ ಹೀನಾಯ ಪ್ರದರ್ಶನಕ್ಕೆ, ಆಯ್ಕೆ ಸಮಿತಿ ಸದಸ್ಯರ ತಲೆದಂಡವಾಗಿದೆ. ಇನ್ನೊಂದು ಕಡೆ, ತರಬೇತುದಾರರ ಕೆಲಸದ ಮೇಲೂ ಈಗ ತೂಗುಗತ್ತಿ ನೇತಾಡುತ್ತಿದೆ. ಹೀಗಾಗಿ ವಿಶ್ವಕಪ್‌ನ ಸೋಲು ಪಾಕಿಸ್ತಾನ ಕ್ರಿಕೆಟ್ ಲೋಕದಲ್ಲಿ ಪ್ರಳಯ ಸೃಷ್ಟಿ ಮಾಡಿದ್ದು, ಇದೇ ಪ್ರಳಯದಲ್ಲಿ ಇನ್ನು ಯಾರೆಲ್ಲಾ ಜಾಗ ಖಾಲಿ ಮಾಡ್ತಾರೋ ಗೊತ್ತಿಲ್ಲ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+