Virat Kohli: ಪಾಕ್ ಅಭಿಮಾನಿಗಳು ಹ್ಯಾರೀಸ್ ರೌಫ್ ಇನ್ನೂ ಮರೆತಿಲ್ಲ ವಿರಾಟ್ ಕೊಹ್ಲಿ ಆ ಇನ್ನಿಂಗ್ಸ್
ವಿರಾಟ್ ಕೊಹ್ಲಿ, ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್.. ವಿಶ್ವದಲ್ಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಬ್ಯಾಟರ್.. ಈ ಸೂಪರ್ ಸ್ಟಾರ್ ಆಟ ಎಂತಹದ್ದು ಎಂದು ಈಡೀ ಜಗತ್ತಿಗೆ ತಿಳಿದಿದೆ. ಅದ್ರಲ್ಲೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಅಂತೂ ಎಂದೂ ಮರೆಯಲು ಸಾಧ್ಯವೇ ಇಲ್ಲ.
ಬರೀ ವಿರಾಟ್ ಕೊಹ್ಲಿ ಏಕದಿನ ಹಾಗೂ ಟೆಸ್ಟ್ ಪ್ಲೇಯರ್ ಎಂದೇ ಜಗತ್ತು ಒಂದು ರೀತಿಯಾಗಿ ಭಾವಿಸಿತ್ತು. ಆದರೆ 2022ರ ಟಿ20 ವಿಶ್ವಕಪ್‌ನಲ್ಲಿ ಇವರು ಆಡಿದ ಧಾಟಿಯನ್ನು ನೋಡಿದ ಟೀಕಾಕಕರು ಸಹ ಇವರು ಯಾವುದೇ ಫಾರ್ಮೆಟ್‌ಗೂ ಆಡಬಲ್ಲ ಆಟಗಾರ ಎಂದು ತಿಳಿಸಿದ್ದರು. ಅಬ್ಬಾ ವಿರಾಟ್ ಆಟವನ್ನು ಕಂಡು ಕ್ರಿಕೆಟ್ ಜಗತ್ತು ಸಲಾಂ ಎಂದಿತ್ತು.

ಮೆಲ್ಬೋರ್ನ್‌ನಲ್ಲಿ ಮೈಚಳಿ ಬಿಡಿಸಿದ್ದ ವಿರಾಟ್
ವಿರಾಟ್ ನಿಜಕ್ಕೂ ಒಬ್ಬ ಬೆಸ್ಟ್ ಪ್ಲೇಯರ್. ಎಲ್ಲ ಮಾದರಿಯ ಕ್ರಿಕೆಟ್‌ಗೆ ಹೊಂದಿಕೊಳ್ಳುವ ಆಟಗಾರ. ಇತ್ತೀಚಿಗೆ ಐಪಿಎಲ್‌ನಲ್ಲಿ ವಿರಾಟ್ ತಮ್ಮ ಅಪ್‌ಡೇಟ್ ವರ್ಷನ್‌ನ್ನು ಅನಾವರಣ ಮಾಡಿದರು. ತಮ್ಮ ಮೇಲೆ ಇದ್ದ ಟೀಕೆಗಳಿಗೆ ವಿರಾಟ್ ಭರ್ಜರಿಯಾಗಿ ಉತ್ತರ ನೀಡಿದ್ದರು. ಸ್ಟ್ರೈಕ್ ರೇಟ್ ಇಂಪ್ರೂ ಮಾಡಿಕೊಂಡು, ಬಿಗ್ ಇನಿಂಗ್ಸ್ ಕಟ್ಟುವುತ್ತ ಚಿತ್ತ ನೆಟ್ಟಿದ್ದರು. ವಿರಾಟ್ ಕ್ಲಾಸಿಕ್ ಆಟ ಕಂಡು ಫ್ಯಾನ್ಸ್ ಫುಲ್ ಖುಷ್ ಆಗಿದ್ದರು.
ಕಳೆದ ಟಿ20 ವಿಶ್ವಕಪ್‌ನಲ್ಲಿ ಭಾರತ- ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿದ್ದ ಪಾಕ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಸೋಲಿನ ದವಡೆಯಿಂದ ಪಾರು ಮಾಡಿದ ಕೀರ್ತಿ ವಿರಾಟ್ ಅವರಿಗೆ ಸಲ್ಲುತ್ತದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಕೊನೆಯ ಮೂರು ಓವರ್‌ಗಳಲ್ಲಿ 48 ರನ್ ಅವಶ್ಯಕತೆ ಇತ್ತು. ಆಗ ಕೊಹ್ಲಿ ತಮ್ಮ ವಿರಾಟ್ ರೂಪ ಪ್ರದರ್ಶಿಸಿದರು.
ಕ್ಲಾಸಿಕ್ ಸಿಕ್ಸ್
18.5 ಓವರ್‌ನಲ್ಲಿ ಹ್ಯಾರಿಸ್ ರೌಫ್ ಎಸೆತದ ಲೆಂತ್ ಎಸೆತವನ್ನು ಸ್ಟ್ರೆಟ್ ಬೌಂಡರಿ ಲೈನ್ ಗೆರೆ ದಾಟಿಸಿದ ವಿರಾಟ್ ಶಾಟ್ ಕಂಡು ಇಡಿ ವಿಶ್ವ ಕ್ರಿಕೆಟ್ ಸ್ಟನ್ ಆಗಿತ್ತು. ಹ್ಯಾರಿಸ್ ರೌಫ್ ಹಾಕಿದ ಆ ಚೆಂಡು ಕೆಟ್ಟದ್ದಾಗಿರಲಿಲ್ಲ. ಆದರೆ ಅದನ್ನು ಮೆಟ್ಟಿ ನಿಂತು ವಿರಾಟ್ ಬ್ಯಾಟ್ ಮಾಡಿದ್ದರು. ಹ್ಯಾರೀಸ್ ರೌಫ್ ಇಂದಿಗೂ ಆ ಶಾಟ್ ನೆನಪಿಸಿಕೊಳ್ಳುತ್ತಾರೆ.

ಈ ಶಾಟ್‌ನ್ನು ಐಸಿಸಿ ಶತಮಾನದ ಶಾಟ್ ಎಂದು ರೇಟಿಂಗ್ ನೀಡಿದೆ. ವಿರಾಟ್ ಕೊಹ್ಲಿ ಈ ಶಾಟ್ ಕಂಡು ಟಿ20 ಕ್ರಿಕೆಟ್ ಫ್ಯಾನ್ಸ್ ಇವರಿಗೆ ಫಿದಾ ಆಗಿದ್ದಾರೆ. ವಿರಾಟ್ ಕೊಹ್ಲಿ ಇಂತಹದ್ದೇ ಮತ್ತೊಂದು ಕರಾಮತ್ತನ್ನು ಮಾಡುವ ಕಾಲ ಕೂಡಿ ಬಂದಿದೆ. ಆದರೆ ಈ ಬಾರಿ ಆಸ್ಟ್ರೇಲಿಯಾದಲ್ಲಿ ಅಲ್ಲ, ಈ ಬಾರಿ ವಿರಾಟ್ ಅಮೆರಿಕದಲ್ಲಿ ಇಂತಹದ್ದೇ ಆಟವನ್ನು ಪಾಕ್ ವಿರುದ್ಧ ಆಡಬೇಕಿದೆ.
ವಿರಾಟ್ VS ಹ್ಯಾರೀಸ್
ವಿರಾಟ್ ಕೊಹ್ಲಿ ಹಾಗೂ ಹ್ಯಾರೀಸ್ ರೌಫ್ ಈಗಾಗಲೇ ಹಲವು ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದಾರೆ. ಈ ವೇಳೆ ಹ್ಯಾರಿಸ್ ಅವರ 32 ಎಸೆತಗಳನ್ನು ಎದುರಿಸಿರುವ ವಿರಾಟ್ 42 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಬೌಂಡರಿ, 3 ಸಿಕ್ಸರ್ ಸೇರಿವೆ.












Click it and Unblock the Notifications