ವಿರಾಟ್ ಕೊಹ್ಲಿ ನಿರ್ಮಿಸಿದ ಈ ದಾಖಲೆಗಳನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ!
ವಿರಾಟ್ ಕೊಹ್ಲಿ ಹೆಸರಲ್ಲೇ ದಾಖಲೆಗಳು ಬೆರೆತು ಹೋಗಿವೆ ಅಂತಾ ಕಾಣುತ್ತೆ, ಯಾಕಂದ್ರೆ ಕಡು ಬಡತನದಲ್ಲಿ ಕಷ್ಟಪಟ್ಟು ಮುಂದೆ ಬಂದ ಈ ಯುವ ಕ್ರಿಕೆಟಿಗ ಇದೀಗ ಕೋಟ್ಯಂತರ ಅಭಿಮಾನಿಗಳ ಕಿಂಗ್. ಅಷ್ಟೇ ಅಲ್ಲ ಶತಕೋಟಿ ಭಾರತೀಯರಿಗೆ ಮಾದರಿ. ಕೇವಲ ಕ್ರೀಡಾ ಲೋಕ ಮಾತ್ರವಲ್ಲದೆ, ಸಮಾಜಮುಖಿ ಕೆಲಸ ಮಾಡುತ್ತಿರುವ ವಿರಾಟ್ ಕೊಹ್ಲಿ ಹಲವಾರು ದಾಖಲೆ ಮಾಡಿದ್ದಾರೆ. ಅದರಲ್ಲಿ ಕೆಲವು ದಾಖಲೆಗಳನ್ನ ಯಾರೂ ಮುರಿಯಲು ಸಾಧ್ಯವೇ ಇಲ್ಲ, ಆ ಪಟ್ಟಿ ಇಲ್ಲಿದೆ.
ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ನಿಂತರೆ ಮುಗಿಯಿತು ರನ್ ಹೊಳೆ ಗ್ಯಾರಂಟಿ. ಆಗಲೋ ಈಗಲೋ ಒಮ್ಮೆಮ್ಮೊ ಕೊಹ್ಲಿ ಬೇಗನೆ ಔಟಾಗಿ ತೆರಳಿದ್ದಾರೆ. ಇದನ್ನು ಬಿಟ್ಟರೆ ವಿರಾಟ್‌ಗೆ, ವಿರಾಟ್ ಸಾಟಿ ಎಂಬಂತೆ ಬ್ಯಾಟ್ ಬೀಸುತ್ತಾರೆ ನಮ್ಮ ಕೊಹ್ಲಿ. ಅದರಲ್ಲೂ ಕೊಹ್ಲಿ ತಮ್ಮ ಹೆಸರಲ್ಲಿ ಬರೆದುಕೊಂಡಿರುವ ಈ ದಾಖಲೆಗಳನ್ನು ಮೀರಿಸುವುದು ಬಿಡಿ, ಅದರ ಹತ್ತಿರಕ್ಕೆ ಕೂಡ ಸುಳಿಯಲು ಆಗುವುದಿಲ್ಲ. ಹಾಗಾದ್ರೆ ಯಾವುವು ಆ ದಾಖಲೆಗಳು? ಬನ್ನಿ ಆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ, ತಿಳಿಯೋಣ.

ವಿರಾಟ್ ಕೊಹ್ಲಿ ವೀರಾವೇಶ!
| 1 | ಅತಿಹೆಚ್ಚು ಶತಕ ಗಳಿಸಿದ 2ನೇ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಗಿದ್ದು, ಕೊಹ್ಲಿ ಒಟ್ಟು 78 ಸೆಂಚ್ಯುರಿ ಗಳಿಸಿ ಸಚಿನ್ ದಾಖಲೆಗೆ ಹತ್ತಿರವಿದ್ದಾರೆ |
| 2 | ಒಂದೇ ದಶಕ ಅಂದ್ರೆ 10 ವರ್ಷದಲ್ಲಿ 20,000 ಅಂತಾರಾಷ್ಟ್ರೀಯ ರನ್ ಗಳಿಸಿದ ಏಕೈಕ ಕ್ರಿಕೆಟಿಗ ಅಂದರೆ ಅದು ಕಿಂಗ್ ಕೊಹ್ಲಿ ಮಾತ್ರ |
| 3 | ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿರುವ ಹೆಗ್ಗಳಿಕೆ ವಿರಾಟ್ ಕೊಹ್ಲಿಗೆ ಇದ್ದು, 115 ಪಂದ್ಯ ಆಡಿ 4,008 ರನ್ ಗಳಿಸಿದ್ದಾರೆ ಕೊಹ್ಲಿ |
| 4 | ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ದ್ವಿಶತಕ ಗಳಿಸಿದ ಆಟಗಾರರಲ್ಲಿ ವಿರಾಟ್ ಕೊಹ್ಲಿ 5ನೇ ಸ್ಥಾನ ಪಡೆದಿದ್ದು, 7 ಡಬಲ್ ಸೆಂಚ್ಯುರಿ ಗಳಿಸಿದ್ದಾರೆ |
| 5 | ಸಚಿನ್ ದಾಖಲೆ ಮುರಿದಿರುವ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 10,000 ರನ್ ಗಳಿಕೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ |
| 6 | ಕೊಹ್ಲಿ 2018ರಲ್ಲಿ ಕ್ರಿಕೆಟ್‌ನ 3 ವಿಭಾಗದಲ್ಲೂ ಐಸಿಸಿ ನೀಡುವ 3 ಪ್ರಶಸ್ತಿ ಪಡೆದರು, ಈ ದಾಖಲೆ ಮಾಡಿದ ಏಕೈಕ ಕ್ರಿಕೆಟಿಗ ಕೊಹ್ಲಿ |
| 7 | ವಿರಾಟ್ ಕೊಹ್ಲಿ ಭಾರತದ ಪರ ಒಟ್ಟು 514 ಪಂದ್ಯ ಆಡಿದ್ದು, ಈ ಪೈಕಿ ಭಾರತದ 308 ಗೆಲುವಿನಲ್ಲಿ ಸಾಕ್ಷಿಯಾಗಿದ್ದಾರೆ |
| 8 | ಟೆಸ್ಟ್ ನಾಯಕನಾಗಿ ವೇಗದ 4000 ರನ್ ಗಳಿಕೆ ದಾಖಲೆ ಕೂಡ ಕೊಹ್ಲಿ ಹೆಸರಿನಲ್ಲೇ ಇದೆ, ಹಿಂದೆ ಬ್ರಿಯಾನ್ ಲಾರಾ ಹೆಸರಲ್ಲಿ ಇತ್ತು |
| 9 | ವಿರಾಟ್ ಕೊಹ್ಲಿ ಅಂದರೆ ಆಸ್ಟ್ರೇಲಿಯಾಗೆ ಭಯ, ಯಾಕಂದ್ರೆ ಇದೇ ಕೊಹ್ಲಿ ಆಸಿಸ್ ವಿರುದ್ಧ ಒಟ್ಟು 16 ಶತಕ ಸಿಡಿಸಿದ್ದಾರೆ |
| 10 | ಕೊಹ್ಲಿ ನಾಯಕನಾಗಿ ಭಾರತದ 71 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದು ಕೊಟ್ಟರು |
ಕೊಹ್ಲಿ ಫ್ಯಾನ್ಸ್‌ಗೆ ಡಬಲ್ ಧಮಾಖ
ಹೀಗೆ ವಿರಾಟ್ ಕೊಹ್ಲಿ ಅತಿ ಚಿಕ್ಕ ವಯಸ್ಸಿಗೆ ಭಾರತ ಕ್ರಿಕೆಟ್ ತಂಡಕ್ಕೆ ಬಂದು, ಶತಕೋಟಿ ಭಾರತೀಯರ ಕನಸು ನನಸು ಮಾಡ್ತಿದ್ದಾರೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕೊಹ್ಲಿ, ವಿಶ್ವಕಪ್ ಗೆಲ್ಲಿಸಿಕೊಡುವ ಆಸೆಯಲ್ಲಿದ್ದಾರೆ. ಹೀಗಾಗಿ ಇಡೀ ಕ್ರಿಕೆಟ್ ಜಗತ್ತು ಈಗ, ವಿರಾಟ್ ಕೊಹ್ಲಿ ಆಟದ ಮೇಲೆ ಗಮನ ಇಟ್ಟು ಕಾಯುತ್ತಾ ಇದೆ. 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಣೆಸಾಡಲಿವೆ. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರ ಹುಟ್ಟುಹಬ್ಬ ಕೂಡ ಬಂದಿದ್ದು, ಅಭಿಮಾನಿಗಳಿಗೆ ಡಬಲ್ ಧಮಾಖ ಸಿಕ್ಕಂತಾಗಿದೆ.

ಭಾರತ ಕ್ರಿಕೆಟ್ ತಂಡ 2023 ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹೀಗೆ ಇಂದು ಕೂಡ ಹರಿಣಗಳು ಅಂದರೆ, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಹೆಡೆಮುರಿ ಕಟ್ಟಿ, ಅಜೇಯವಾಗಿ ಸೆಮಿಫೈನಲ್ ಪ್ರವೇಶ ಮಾಡುವ ನಿರೀಕ್ಷೆಯಲ್ಲಿದೆ ನಮ್ಮ ಭಾರತ ತಂಡ. ಇದಕ್ಕೆ ಭಾರತ ತಂಡದ ಆಟಗಾರರು ಭರ್ಜರಿ ತಯಾರಿಯನ್ನು ನಡೆಸಿದ್ದು, ದಕ್ಷಿಣ ಆಫ್ರಿಕಾ ತಂಡ ಕೂಡ ಭಯದಲ್ಲೇ ಅಖಾಡಕ್ಕೆ ಎಂಟ್ರಿ ಕೊಡುತ್ತೆ ಅಂತಾ ಭಾರತದ ಅಭಿಮಾನಿಗಳು ಮಾತನಾಡುತ್ತಿದ್ದಾರೆ.












Click it and Unblock the Notifications