Nitish Kumar Reddy: ಬಾಂಗ್ಲಾದೇಶ ವಿರುದ್ಧ ಅಬ್ಬರಿಸಿದ ನಿತೀಶ್ ರೆಡ್ಡಿ; ಆರ್‌ಸಿಬಿ ಸೇರಲು ಬಯಸಿದ್ದ ಆಲ್‌ರೌಂಡರ್!

ನಿತೀಶ್ ಕುಮಾರ್ ರೆಡ್ಡಿ, ಐಪಿಎಲ್ 2024ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತರ ಮಿಂಚಿದ್ದ ಬ್ಯಾಟಿಂಗ್ ಆಲ್‌ರೌಂಡರ್, ಬಾಂಗ್ಲಾದೇಶದ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ತಮ್ಮ ಎರಡನೇ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲೇ ಅಬ್ಬರಿಸಿದ ಅವರು, ಅಮೋಘ ಅರ್ಧಶತಕ ಗಳಿಸಿದ್ದಲ್ಲದೆ, 2 ವಿಕೆಟ್ ಪಡೆದು ಮಿಂಚಿದರು.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ 41 ವಿಕೆಟ್ ಆಗುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ನಿತೀಶ್ ರೆಡ್ಡಿ, ರಿಂಕು ಸಿಂಗ್ ಬಾಂಗ್ಲಾದೇಶ ಬೌಲಿಂಗ್ ಪಡೆಗೆ ಬೆವರಿಳಿಸಿದರು. ನಾಲ್ಕನೇ ವಿಕೆಟ್‌ಗೆ ಈ ಜೋಡಿ 108 ರನ್‌ಗಳನ್ನು ಕಲೆಹಾಕಿತು.

Nitish Reddy promising allrounder wants to Join RCB

ನಿತೀಶ್ ಕುಮಾರ್ ರೆಡ್ಡಿ 27 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. 34 ಎಸೆತಗಳಲ್ಲಿ 74 ರನ್ ಗಳಿಸಿದ ಅವರು ಔಟಾದರು. ತಮ್ಮ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 7 ಸಿಕ್ಸರ್ ಮತ್ತು 4 ಬೌಂಡರಿ ಗಳಿಸಿದರು. ಸ್ಪಿನ್ನರ್ ಮತ್ತು ವೇಗಿಗಳಿಗೆ ಸಿಕ್ಸರ್ ಸಿಡಿಸಿದ ನಿತೀಶ್ ಕುಮಾರ್ ರೆಡ್ಡಿ ಭಾರತಕ್ಕೆ ಮತ್ತೊಬ್ಬ ಸ್ಟಾರ್ ಆಲ್‌ರೌಂಡರ್ ಆಗುವ ಭರವಸೆ ಮೂಡಿಸಿದ್ದಾರೆ.

ಹಲವು ದಾಖಲೆಗಳ ನಿರ್ಮಾಣ

ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಸ್ಪಿನ್‌ ವಿರುದ್ಧ ಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದರು. ಅಭಿಷೇಕ್ ಶರ್ಮಾ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ ಗಳಿಗೆ 65 ರನ್ ಗಳಿಸಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ. ಬಾಂಗ್ಲಾದೇಶ ವಿರುದ್ಧ 54 ರನ್ ಗಳಿಸಿದ ನಿತೀಶ್ ರೆಡ್ಡಿ ಐದನೇ ಸ್ಥಾನ ಪಡೆದಿದ್ದಾರೆ. ಯುವರಾಜ್ ಸಿಂಗ್, ರುತುರಾಜ್ ಗಾಯಕ್ವಾಡ್ ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಟಿ20ಯಲ್ಲಿ ಅರ್ಧಶತಕ ಸಿಡಿಸಿದ ನಾಲ್ಕನೇ ಕಿರಿಯ ಆಟಗಾರ ಎನ್ನುವ ದಾಖಲೆ ಮಾಡಿದ್ದಾರೆ. ರೋಹಿತ್ ಶರ್ಮಾ 2007ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅರ್ಧಶತಕ ಸಿಡಿಸಿದಾಗ 20 ವರ್ಷ 143 ದಿನ ಆಗಿದ್ದರಿಂದ ಭಾರತದ ಪರ ಅರ್ಧಶತಕ ಸಿಡಿಸಿದ ಕಿರಿಯ ಕ್ರಿಕೆಟಿಗ ಎನ್ನುವ ದಾಖಲೆ ಹೊಂದಿದ್ದಾರೆ. ತಿಲಕ್ ವರ್ಮಾ, ರಿಷಬ್ ಪಂತ್ ಬಳಿಕ ನಿತೀಶ್ ರೆಡ್ಡಿ ನಾಲ್ಕನೇ ಕಿರಿಯ ಆಟಗಾರ ಎನ್ನುವ ದಾಖಲೆ ಮಾಡಿದ್ದಾರೆ.

ಆರ್‌ಸಿಬಿ, ಕೊಹ್ಲಿ ಅಭಿಮಾನಿ ನಿತೀಶ್ ರೆಡ್ಡಿ

ನಿತೀಶ್ ಕುಮಾರ್ ರೆಡ್ಡಿ, ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಆಡಿದ್ದರೂ, ಆರ್ ಸಿಬಿ ತಂಡ ಸೇರುವ ಕನಸು ಕಂಡಿದ್ದರು. ವಿರಾಟ್ ಕೊಹ್ಲಿ ಅವರ ದೊಡ್ಡ ಅಭಿಮಾನಿಯಾಗಿರುವ ನಿತೀಶ್ ರೆಡ್ಡಿ, ಆರ್ ಸಿಬಿ ತಂಡಕ್ಕೆ ಹರಾಜಿಗೆ ಮುನ್ನ ಟ್ರಯಲ್ಸ್‌ಗೆ ಕೂಡ ಹಾಜರಾಗಿದ್ದರು. ಆದರೆ ಹರಾಜಿನಲ್ಲಿ ಆರ್ ಸಿಬಿ ನಿತೀಶ್ ಕುಮಾರ್ ಅವರ ಖರೀದಿಗೆ ಆಸಕ್ತಿ ತೋರಿಸಿರಲಿಲ್ಲ. ಅಂತಿಮವಾಗಿ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+