Neeraj Chopra: ನೀರಜ್‌ ಚೋಪ್ರಾ ಮುಡಿಗೆ ಮತ್ತೊಂದು ಸ್ವರ್ಣ ಗರಿ

ಭಾರತದ ಸ್ಟಾರ್‌ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತೊಮ್ಮೆ ಪೋಡಿಯಂ ಏರುವಲ್ಲಿ ಸಫಲರಾಗಿದ್ದಾರೆ. ಇವರು ತಮ್ಮ ಅಮೋಘ ಫಾರ್ಮ್‌ನ್ನು ಮುಂದುವರೆಸಿದ್ದಾರೆ. ಪ್ಯಾರೀಸ್‌ ಡ್ಯಾಮಂಡ್‌ ಲೀಗ್‌ನಲ್ಲಿ ಸ್ವರ್ಣ ಸಾಧನೆ ಮಾಡಿದ್ದರು. ಇದೇ ಸಾಧನೆಯನ್ನು ನೀರಜ್‌ ಗೋಲ್ಡನ್ ಸ್ಪೈಕ್ ಮೀಟ್ 2025ನಲ್ಲೂ ಮುಂದುವರೆಸಿದ್ದಾರೆ. ಕೇವಲ ನಾಲ್ಕು ದಿನಗಳ ಅಂತರದಲ್ಲಿ 2 ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದು ನೀರಜ್ ಬೀಗಿದ್ದಾರೆ.

ನೀರಕ್‌ ಚೋಪ್ರಾ ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಭಾಗವಹಿಸಿ ಅಮೋಘ ಸಾಧನೆ ಮಾಡಿದರು. ಈ ಸ್ಪರ್ಧೆಯು ವಿಶ್ವ ಅಥ್ಲೆಟಿಕ್ಸ್ ಸಬ್ ಕಾಂಟಿನೆಂಟಲ್ ಟೂರ್‌ನ ಪಂದ್ಯಾವಳಿ, ಇದರಲ್ಲಿ 9 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಟೂರ್ನಿಯಲ್ಲಿ ನೀರಜ್‌ ಮೊಟ್ಟ ಮೊದಲ ಬಾರಿಗೆ ಅಂಗಳಕ್ಕೆ ಇಳಿದಿದ್ದರು. ತಾವು ಆಡಿದ ಮೊದಲ ಪ್ರಯತ್ನದಲ್ಲಿ ನೀರಜ್‌ ಚಿನ್ನದ ಸಾಧನೆ ಮಾಡಿದರು. ಪ್ಯಾರೀಸ್‌ನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ನೀರಜ್‌ ಜಾವೆಲಿನ್‌ನ್ನು 85.29 ಮೀಟರ್ ದೂರ ಎಸೆದು ಚಿನ್ನದ ಪದಕಕ್ಕೆ ಕೊರಳು ಒಡ್ಡಿದ್ದರು.

Neeraj Chopra Continues Golden Streak with Two Wins in Four Days

ನೀರಜ್‌ ಚೋಪ್ರಾ ಕಳೆದ ಎರಡು ಋತುಗಳಲ್ಲಿ ಫಿಟ್ನೆಸ್‌ ಸಮಸ್ಯೆಯನ್ನು ಎದುರಿಸುತ್ತಿದ್ದರು. ಹೀಗಾಗಿ ಇವರು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ. ಈಗ ಮತ್ತೆ ನೀರಜ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಕೋಚ್‌ 27 ವರ್ಷದ ನೀರಜ್ ಚೋಪ್ರಾ ಈ ಋತುವಿನಲ್ಲಿ ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ.

ನೀರಜ್‌ ಸಾಧನೆ

ಗೋಲ್ಡನ್ ಸ್ಪೈಕ್ ಮೀಟ್‌ನಲ್ಲಿ ನೀರಜ್‌ ಬಂಗಾರದ ಸಾಧನೆಯನ್ನು ಮಾಡಿದರು. ಇನ್ನು ರಷ್ಯಾದ ಡೌ ಸ್ಮಿತ್ 84.12 ಮೀಟರ್ ಜಾವೆಲಿನ್ ಎಸೆದು ಬೆಳ್ಳಿ ಪಡೆದರು. ಜರ್ಮನಿಯ ಆಂಡರ್ಸನ್ ಪೀಟರ್ಸ್ 83.63 ದೂರ ಎಸೆದು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ನೀರಜ್‌ ಚೋಪ್ರಾ ಪ್ರಸಕ್ತ ವರ್ಷದ ಆರಂಭದಲ್ಲಿ ನಡೆದಿದ್ದ ದೋಹಾ ಡೈಮಂಡ್‌ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಅಲ್ಲದೆ ತಮ್ಮ ಕನಸಿನ 90 ಮೀಟರ್‌ ಮಾರ್ಕ್‌ನ್ನು ದಾಟಿ ಸಾಧನೆ ಮಾಡಿದ್ದರು. ಆದರೆ ಈ ಸ್ಪರ್ಧೆಯಲ್ಲಿ ಅವರು ಚಿನ್ನವನ್ನು ತಪ್ಪಿಸಿಕೊಂಡಿದ್ದರು. ಒಂದೇ ವಾರದಲ್ಲಿ ನೀರಜ್‌ ಹಿಂದಿನ ನಿರಾಸೆಗಳೆನ್ನು ಮರೆಸುವಂತೆ ಪ್ರದರ್ಶನ ನೀಡಿದ್ದಾರೆ. ನೀರಜ್‌ ಪ್ಯಾರೀಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಪೋಡಿಯಂ ಫಿನಿಶ್ ಮಾಡಿದ್ದ ನೀರಜ್‌, ತನ್ನ ಇದೇ ಅಮೋಘ ಲಯವನ್ನು ಮುಂದುವರೆಸಿದ್ದಾರೆ. ಪರಿಣಾ, ಪ್ಯಾರಿಸ್ ಡೈಮಂಡ್ ಲೀಗ್ ಮತ್ತು ಗೋಲ್ಡನ್ ಸ್ಪೈಕ್ ಮೀಟ್ ಪ್ರಶಸ್ತಿ ಗೆದ್ದು ಬೀಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+