Nandini: ಸ್ಕಾಟ್ಲೆಂಡ್ ತಂಡಕ್ಕೆ ನಂದಿನಿ ಪ್ರಾಯೋಜಕತ್ವ; ಆಟಗಾರರ ತೋಳಿನಲ್ಲಿ 'ಕನ್ನಡ'
ಟಿ20 ವಿಶ್ವಕಪ್‌ನಲ್ಲಿ ಕೆಎಂಎಫ್ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಕ್ಕೆ ಪ್ರಾಯೋಕತ್ವ ನೀಡಿದೆ. ನಂದಿನಿ ಲೋಗೋ ಹೊಂದಿರುವ ಜೆರ್ಸಿಯಲ್ಲಿ ಈ ಎರಡೂ ತಂಡಗಳ ಆಟಗಾರರು ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
ಸ್ಕಾಟ್ಲೆಂಡ್ ತಂಡ ಟಿ20 ವಿಶ್ವಕಪ್ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ವಿಶೇಷ ಎಂದರೆ ಸ್ಕಾಂಟ್ಲೆಂಡ್ ತಂಡದ ಆಟಗಾರರ ತೋಳಿನಲ್ಲಿ ಕನ್ನಡದಲ್ಲೇ ನಂದಿನಿ ಲೋಗೊ ಇರಲಿದೆ. ಇದನ್ನು ನೋಡಿದ ಕನ್ನಡಿಗರು ಸಂಭ್ರಮ ಹೆಚ್ಚಾಗಿದೆ.

ಜೆರ್ಸಿ ಬಿಡುಗಡೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ರಿಕೆಟ್ ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿ, "ನಮ್ಮ ತಂಡ ಮತ್ತು ಬೆಂಬಲಿಗರಿಗೆ ಟಿ20 ವಿಶ್ವಕಪ್‌ನಲ್ಲಿ ನಂದಿನಿಯೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ." ಎಂದು ಹೇಳಿದೆ.
ನಂದಿನಿ ಬ್ರಾಂಡ್ ಬಗ್ಗೆ ಮೆಚ್ಚುಗೆ
ನಮ್ಮ ಕ್ರಿಕೆಟ್ ತಂಡವು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಲು ಹೋಗುತ್ತಿದ್ದು, ವಿಶ್ವದ ಅತ್ಯುತ್ತಮ ಆಟಗಾರ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇವೆ. ಈ ವೇದಿಕೆಯಲ್ಲಿ ಉತ್ತಮ ಬ್ರ್ಯಾಂಡ್ ಅನ್ನು ಬೆಂಬಲಿಸುವುದು ಅದ್ಭುತವಾಗಿದೆ ಎಂದು ಹೇಳಿದೆ.
"ನಂದಿನಿ ಅವರ ಬ್ರ್ಯಾಂಡ್ ಮತ್ತು ಸ್ಕಾಟಿಷ್ ಕ್ರಿಕೆಟ್ ಅನ್ನು ಮತ್ತಷ್ಟು ಪ್ರಚಾರ ಮಾಡಲು ನಾವು ಒಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ವಿಶ್ವಕಪ್‌ನಲ್ಲಿ ಇಂಗ್ಲೆಂಡ್, ನಮೀಬಿಯಾ, ಓಮನ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಆಡಲಿದ್ದು, ಸ್ಕಾಟ್ಲೆಂಡ್ ಜೆರ್ಸಿಯಲ್ಲಿ ನಂದಿನಿ ಲಾಂಛನ ಇರುವುದು ಹೆಮ್ಮೆ" ಎಂದು ಹೇಳಿದೆ.
ಕೆಎಂಎಫ್ ನಿರ್ದೇಶಕರ ಸಂತಸ
ನಂದಿನಿಯ ಮಾತೃ ಸಂಸ್ಥೆಯಾದ ಕರ್ನಾಟಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಪ್ರತಿಕ್ರಿಯೆ ನೀಡಿ, "ಸ್ಕಾಟ್ಲೆಂಡ್ ಪುರುಷರ ಕ್ರಿಕೆಟ್ ತಂಡದ ಟಿ20 ವಿಶ್ವಕಪ್ ಅಭಿಯಾನಕ್ಕಾಗಿ ಪಾಲುದಾರರಾಗಲು ನಾವು ತುಂಬಾ ಉತ್ಸುಕರಾಗಿದ್ದೇವೆ. ನಂದಿನಿಯು ಶ್ರೇಷ್ಠತೆ ಮತ್ತು ಶುದ್ಧತೆಯನ್ನು ಪ್ರತಿನಿಧಿಸುತ್ತದೆ ಮತ್ತು ಕಳೆದ ನಲವತ್ತು ವರ್ಷಗಳಲ್ಲಿ ನಾವು ಜಾಗತಿಕ ಬ್ರಾಂಡ್ ಆಗಿ ಬೆಳೆದಿದ್ದೇವೆ." ಎಂದು ಹೇಳಿದ್ದಾರೆ.
ಸ್ಕಾಟ್ಲೆಂಡ್ ಜೊತೆ ಪಾಲುದಾರಿಕೆಯು ನಂದಿನಿ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ತಲುಪಿಸಲು ಸಹಾಯ ಮಾಡುತ್ತದೆ. ನಮ್ಮ ಬ್ರ್ಯಾಂಡ್ ಅನ್ನು ವಿಶ್ವದಾದ್ಯಂತ ಹೆಚ್ಚಿನ ದೇಶಗಳಿಗೆ ಕೊಂಡೊಯ್ಯುವಲ್ಲಿ ಇದು ಮೊದಲ ಹೆಜ್ಜೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಎರಡನೇ ಅತಿ ದೊಡ್ಡ ಡೈರಿ ಬ್ರ್ಯಾಂಡ್ ಆಗಿ, ಭಾರತ ಮತ್ತು ಜಗತ್ತಿಗೆ ಪೌಷ್ಟಿಕ ಮತ್ತು ಗುಣಮಟ್ಟದ ಡೈರಿ ಉತ್ಪನ್ನಗಳನ್ನು ಪೂರೈಸಲು ಉತ್ಸುಕರಾಗಿದ್ದೇವೆ ಎಂದಿದ್ದಾರೆ.












Click it and Unblock the Notifications