Get Updates
Get notified of breaking news, exclusive insights, and must-see stories!

MS Dhoni: ಮಾಜಿ ಉದ್ಯಮಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಎಂಎಸ್ ಧೋನಿ: 15 ಕೋಟಿಗೂ ಹೆಚ್ಚು ವಂಚನೆ ಆರೋಪ!

ರಾಂಚಿ ಜನವರಿ 5: ಆರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ಮಿಹಿರ್ ದಿವಾಕರ್ ಮತ್ತು ಸೌಮ್ಯ ವಿಶ್ವಶ್ ವಿರುದ್ಧ ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ರಾಂಚಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ದಿವಾಕರ್ ಅವರು 2017 ರಲ್ಲಿ ಎಂಎಸ್‌ಡಿಯೊಂದಿಗೆ ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ, ದಿವಾಕರ್ ಅವರು ಒಪ್ಪಂದದಲ್ಲಿ ವಿವರಿಸಿರುವ ಷರತ್ತುಗಳನ್ನು ಅನುಸರಿಸಲು ವಿಫಲರಾಗಿದ್ದಾರೆ. ಆರ್ಕಾ ಸ್ಪೋರ್ಟ್ಸ್ ಫ್ರಾಂಚೈಸ್ ಶುಲ್ಕವನ್ನು ಪಾವತಿಸಲು ಮತ್ತು ಒಪ್ಪಂದದ ನಿಯಮಗಳ ಪ್ರಕಾರ ಲಾಭವನ್ನು ಹಂಚಿಕೊಳ್ಳಲು ಬದ್ಧವಾಗಿರದೆ ಅದನ್ನು ಗೌರವಿಸಲಾಗಿಲ್ಲ ಎಂದು ಧೋನಿ ದೂರಿದ್ದಾರೆ.

MS Dhoni has filed a criminal case against former businessmen

ಹಲವಾರು ಪ್ರಯತ್ನಗಳ ಹೊರತಾಗಿಯೂ, ಒಪ್ಪಂದದಲ್ಲಿ ನಿರ್ದಿಷ್ಟಪಡಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಕಡೆಗಣಿಸಲಾಗಿದೆ. ಪರಿಣಾಮವಾಗಿ ಧೋನಿ ಆಗಸ್ಟ್ 15, 2021 ರಂದು ಆರ್ಕಾ ಸ್ಪೋರ್ಟ್ಸ್‌ಗೆ ನೀಡಲಾದ ಅಧಿಕಾರ ಪತ್ರವನ್ನು ಹಿಂತೆಗೆದುಕೊಂಡರು. ಆ ಮೂಲಕ ಹಲವಾರು ಕಾನೂನು ಸೂಚನೆಗಳನ್ನು ಕಳುಹಿಸಲಾಯಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಧೋನಿ ದೂರಿನಲ್ಲಿ ತಿಳಿಸಿದ್ದಾರೆ.

ವಿಧಿ ಅಸೋಸಿಯೇಟ್ಸ್ ಮೂಲಕ ಎಂಎಸ್ ಧೋನಿಯನ್ನು ಪ್ರತಿನಿಧಿಸುತ್ತಿರುವ ದಯಾನಂದ್ ಸಿಂಗ್ ಅವರು ಆರ್ಕಾ ಸ್ಪೋರ್ಟ್ಸ್‌ನಿಂದ ವಂಚನೆಗೊಳಗಾಗಿದ್ದಾರೆ ಮತ್ತು ಮೋಸ ಹೋಗಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಇದರಿಂದಾಗಿ ಅವರಿಗೆ 15 ಕೋಟಿ ರೂಪಾಯಿ ವಂಚನೆ ಆಗಿದೆ ಎಂದು ಹೇಳಿದ್ದಾರೆ.

ಎಂಎಸ್ ಧೋನಿ ಆಸ್ತಿ

ವಿಶ್ವ ಕಂಡ ಅತ್ಯುತ್ತಮ ಕ್ಯಾಪ್ಟನ್‌ ಅಂದ್ರೆ ಅದು ಧೋನಿ. ಇವರ ನಾಯಕತ್ವದಲ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ T20 ವಿಶ್ವಕಪ್, ODI ವಿಶ್ವಕಪ್ ಮತ್ತು ICC ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಎಲ್ಲಾ ಮೂರು ಪ್ರಮುಖ ICC ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

Knowledge.com ವೆಬ್‌ಸೈಟ್ ಪ್ರಕಾರ, 'ರಾಂಚಿಯ ರಾಜಕುಮಾರ' ಧೋನಿ 1070 ಕೋಟಿಗಳ ಒಡೆಯ. ಧೋನಿ ಅವರ ಮಾಸಿಕ ಆದಾಯ 4 ಕೋಟಿಗಿಂತ ಹೆಚ್ಚಿದ್ದರೆ ಒಂದು ವರ್ಷದಲ್ಲಿ ಅವರು 50 ಕೋಟಿಗೂ ಹೆಚ್ಚು ಗಳಿಸುತ್ತಾರೆ. ಧೋನಿ ಅವರ ಒಂದು ಸೀಸನ್‌ ಐಪಿಎಲ್ ಸಂಭಾವನೆ 12 ಕೋಟಿ. ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರಬಹುದು ಆದರೆ ಅವರು ಇನ್ನೂ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ತಮ್ಮ 39ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ 15 ಆಗಸ್ಟ್ 2020 ರಂದು ತಮ್ಮ ನಿವೃತ್ತಿಯನ್ನು ಘೋಷಿಸಿದರು. ಧೋನಿ ರಾಂಚಿಯಲ್ಲಿ ನೆಲೆಸಿದ್ದಾರೆ. ರಾಂಚಿಯಲ್ಲಿ ಧೋನಿ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಮುಂಬೈನಲ್ಲೂ ಧೋನಿ ಬಂಗಲೆ ಹೊಂದಿದ್ದಾರೆ. ಇಷ್ಟೇ ಅಲ್ಲ, ಮಹಿ 2011ರಲ್ಲಿ ಡೆಹ್ರಾಡೂನ್‌ನಲ್ಲಿ 17 ಕೋಟಿಗೂ ಹೆಚ್ಚು ಮೊತ್ತಕ್ಕೆ ಬಂಗಲೆಯನ್ನು ಖರೀದಿಸಿದ್ದರು.

ಚೆನ್ನೈ ಸೂಪರ್‌ಕಿಂಗ್ಸ್‌ನ ನಾಯಕ ಧೋನಿ ಬಳಿ ವಿಶ್ವದ ಐಷಾರಾಮಿ ಕಾರುಗಳಿವೆ. ಅದರಲ್ಲಿ ಹಮ್ಮರ್, ಪೋರ್ಷೆ 911, ಆಡಿ, ಮರ್ಸಿಡಿಸ್, ಮಿತ್ಸುಬಿಷಿ ಪಜೆರೊ, ರೇಂಜ್ ರೋವರ್ ಮತ್ತು ಇನ್ನೂ ಅನೇಕ ವಾಹನಗಳು ಅವರ ಗ್ಯಾರೇಜ್ ಅನ್ನು ಅಲಂಕರಿಸುತ್ತಿವೆ. ಇದಷ್ಟೇ ಅಲ್ಲ, ಹಾರ್ಲೆ ಡೇವಿಡ್‌ಸನ್ ಫ್ಯಾಟ್ ಬಾಯ್, ಕವಾಸಕಿ ನಿಂಜಾ ಹೆಚ್2 ಮತ್ತು ಕಾನ್ಫೆಡರೇಟ್ ಹೆಲ್‌ಕ್ಯಾಟ್ ಎಕ್ಸ್32 ಬೈಕ್‌ಗಳನ್ನು ಹೊಂದಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಒಡೆತನದ 7 ಐಷಾರಾಮಿ ವಾಹನಗಳ ಬೆಲೆ ಸುಮಾರು 12. 5 ಕೋಟಿ. ಹಲವೆಡೆ ಸುಮಾರು 620 ಕೋಟಿ ಹೂಡಿಕೆಯನ್ನೂ ಮಾಡಿದ್ದಾರೆ. ಇದಲ್ಲದೆ, ಅವರ ಟಿ20 ಪಂದ್ಯದ ಶುಲ್ಕ 2 ಲಕ್ಷ ಮತ್ತು ರಿಟೈನರ್ ಶುಲ್ಕ 1 ಕೋಟಿ. ಐಪಿಎಲ್ ಸಂಭಾವನೆ 12 ಕೋಟಿ. ಒಟ್ಟಾರೆ, ಅವರ ನಿವ್ವಳ ಮೌಲ್ಯ 1070 ಕೋಟಿ.

ಜುಲೈ 7, 1981 ರಂದು ರಾಂಚಿಯಲ್ಲಿ ಜನಿಸಿದ ಧೋನಿ ಜಾಹೀರಾತುಗಳ ಮೂಲಕ ಕೋಟಿಗಟ್ಟಲೆ ಸಂಪಾದಿಸುತ್ತಾರೆ. ಟಿವಿ ಜಾಹೀರಾತಿಗೆ ಅವರು 3.5 ಕೋಟಿಯಿಂದ 6 ಕೋಟಿವರೆಗೆ ಚಾರ್ಜ್ ಮಾಡುತ್ತಾರೆ. ಧೋನಿ ರಿತಿ ಸ್ಪೋರ್ಟ್ಸ್ ಎಂಬ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಪಾಲನ್ನು ಖರೀದಿಸಿದ್ದಾರೆ. ಇದಲ್ಲದೇ ಮಾಹಿ ಬಟ್ಟೆ ಮತ್ತು ಪಾದರಕ್ಷೆಗಳ ಬ್ರಾಂಡ್ ಕಂಪನಿಯನ್ನು ಸಹ ಹೊಂದಿದ್ದಾರೆ. ಫುಡ್ ಬೆವರೇಜಸ್ ನಲ್ಲೂ ಹೂಡಿಕೆ ಮಾಡಿದ್ದಾರೆ. ಮಾಹಿ ಹಾಕಿ ಮತ್ತು ಫುಟ್ಬಾಲ್ ತಂಡದಲ್ಲಿ ಪಾಲನ್ನು ಖರೀದಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+