ಟೀಮ್ ಇಂಡಿಯಾ ಅಭಿಮಾನಿಗಳಿಗೆ ಖುಷಿ ಸುದ್ದಿ: ಅಭ್ಯಾಸ ಆರಂಭಿಸಿದ ಪೇಸರ್

ಟೀಮ್ ಇಂಡಿಯಾ ಅಭಿಮಾನಿಗಳಿಗೆ ಖುಷಿ ಸುದ್ದಿ. ಟೀಮ್ ಇಂಡಿಯಾ ಸ್ಟಾರ್ ಆಟಗಾರ ಒಬ್ಬ ಸದ್ಯದಲ್ಲಿ ಮೈದಾನಕ್ಕೆ ಮರಳುವ ಸೂಚನೆ ನೀಡಿದ್ದಾರೆ. ಈ ಪ್ಲೇಯರ್‌ ಟೀಮ್ ಇಂಡಿಯಾವನ್ನು ಸೇರಿಕೊಂಡರೆ, ಭಾರತ ತಂಡ ಇನ್ನು ಬಲಿಷ್ಠವಾಗಲಿದೆ. ಬಹು ದಿನಗಳಿಂದ ಗಾಯದಿಂದ ಬಳಲುತ್ತಿದ್ದ ಸ್ಟಾರ್‌ ಪ್ಲೇಯರ್‌ ಅಂಗಳದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

ಭಾರತದಲ್ಲಿ ನಡೆದ ಏಕದಿನ 2023ರ ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ಪರ ಆಡಿ ಅಬ್ಬರಿಸಿದ್ದ ಸ್ಟಾರ್‌ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಕಮ್ ಬ್ಯಾಕ್‌ ಮಾಡಲು ಸಿದ್ಧತೆ ನಡೆಸಿದ್ದಾರೆ. ಮೈದಾನದಲ್ಲಿ ಅವರು ಬೆವರು ಹರಿಸುತ್ತಿದ್ದಾರೆ. ಸದ್ಯ ಇನ್ನು ಶಮಿ ಫುಲ್ ಫಿಟ್ ಆಗಿಲ್ಲವಾದರೂ, ಮೈದಾನದಲ್ಲಿ ನಿಧಾನವಾಗಿ ಬೌಲಿಂಗ್ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ತಾಣದಲ್ಲಿ ಲಭ್ಯವಾಗಿವೆ. ಟೀಮ್ ಇಂಡಿಯಾದ ಅಭಿಮಾನಿಗಳಿಗೆ ಇದು ಒಳ್ಳೆಯ ಸುದ್ದಿ ಏಕೆಂದರೆ ಈ ಗಾಯದಿಂದಾಗಿ ಅವರು ಈ ವರ್ಷ ಐಪಿಎಲ್ ಮತ್ತು ಟಿ 20 ವಿಶ್ವಕಪ್ ಆಡಲು ಸಾಧ್ಯವಾಗಲಿಲ್ಲ.

Mohammed Shami returns to bowling poised for imminent comeback with Team India

ಭಾರತದಲ್ಲಿ ನಡೆದ 2023ರ ವಿಶ್ವಕಪ್‌ ಫೈನಲ್‌ ಬಳಿಕ ಮೈದಾನದಿಂದ ದೂರ ಸರಿದ ಶಮಿ ಗಾಯಕ್ಕೆ ತುತ್ತಾಗಿದ್ದರು. ಅಲ್ಲದೆ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದರು. ಮೊಹಮ್ಮದ್ ಶಮಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ತರಬೇತಿ ಪಡೆಯುತ್ತಿರುವುದನ್ನು ಕಾಣಬಹುದು. ವಿಶ್ವಕಪ್ ವೇಳೆ ಶಮಿ ಹಿಮ್ಮಡಿ ಗಾಯಕ್ಕೆ ಒಳಗಾಗಿದ್ದರು. ಈ ಗಾಯದಿಂದಾಗಿ ಅವರು ಸುಮಾರು 6 ತಿಂಗಳಿನಿಂದ ಕ್ರಿಕೆಟ್ ಕ್ಷೇತ್ರದಿಂದ ದೂರ ಉಳಿದಿದ್ದರು.

ಈ ವರ್ಷದ ಫೆಬ್ರವರಿಯಲ್ಲಿಯೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅವರು ತಮ್ಮ ಫಿಟ್ನೆಸ್ ಅನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರ ಬಾಲ್ಯದ ಕೋಚ್ ಬದ್ರುದ್ದೀನ್ ಸಿದ್ದಿಕಿ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ, 'ಶಮಿ ಬೌಲಿಂಗ್ ಪ್ರಾರಂಭಿಸಿದ್ದಾರೆ. ಅವರು ಇದೀಗ ಪೂರ್ಣ ರನ್ ಅಪ್ ಜೊತೆಗೆ ಬೌಲಿಂಗ್ ಮಾಡುತ್ತಿಲ್ಲ. ಅವರು ಈಗಷ್ಟೇ ಚೆಂಡನ್ನು ನೆಟ್ಸ್‌ನಲ್ಲಿ ಎಸೆಯಲು ಪ್ರಾರಂಭಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಶೀಘ್ರದಲ್ಲೇ ರನ್‌ ಅಪ್‌ ನೊಂದಿಗೆ ಬೌಲ್ ಮಾಡಬಹುದು ಎಂದು ತಿಳಿಸಿದ್ದಾರೆ.

Mohammed Shami returns to bowling poised for imminent comeback with Team India

ಶಮಿ ಕಮ್‌ಬ್ಯಾಕ್‌ಗೆ ಸಂಬಂಧಿಸಿದಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಮರಳಬಹುದು ಎಂದು ಹೇಳಿದ್ದರು. ಭಾರತ ಈ ವರ್ಷ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಬೇಕಿದೆ. ಆಸ್ಟ್ರೇಲಿಯಾದಲ್ಲಿ ಭಾರತ 5 ಪಂದ್ಯಗಳ ಸರಣಿಯನ್ನು ಆಡಬೇಕಿದೆ. ಈ ಸರಣಿಯಲ್ಲಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ಧಾವಂತ ನಿರ್ಧಾರವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+