Mohammed Shami: ಮಾಡಬಾರದ ಆರೋಪ ಮಾಡಿದ್ದ ಪತ್ನಿ, 7 ವಿಕೆಟ್ ಪಡೆದು ತಲೆ ಮೇಲೆ ಚೆಂಡು ಇಟ್ಟು ತಿರುಗಿಸಿದ ಮೊಹಮ್ಮದ್ ಶಮಿ!
ಭಾರತ ಕ್ರಿಕೆಟ್ ಟೀಂ ಐಸಿಸಿ ವಿಶ್ವಕಪ್ ಅಖಾಡದಲ್ಲಿ ಫೈನಲ್ ಪ್ರವೇಶಿಸಿದ್ದು ಆಸ್ಟ್ರೇಲಿಯಾ ವಿರುದ್ಧ ಫೈನಲ್ ಪಂದ್ಯ ಆಡಿ ಕಪ್ ಗೆಲ್ಲಲು ಸಜ್ಜಾಗಿದೆ. ಅದ್ರಲ್ಲೂ ಭಾರತದ ಪರ ಬೆಂಕಿ ಬೌಲರ್ ಮೊಹಮ್ಮದ್ ಶಮಿ ತಮ್ಮ ರಿಯಲ್ ತಾಕತ್ ಏನು? ಅಂತ ಇಡೀ ಕ್ರಿಕೆಟ್ ಜಗತ್ತಿಗೆ ತೋರಿಸಿದ್ದಾರೆ. ಆದರೆ ತನ್ನ ಬಗ್ಗೆ ಪದೇ ಪದೆ ಮಾಡಬಾರದ ಆರೋಪಗಳನ್ನೇ ಮಾಡುತ್ತಾ ಟಾರ್ಗೆಟ್ ಮಾಡ್ತಿದ್ದ ತನ್ನ ಮಾಜಿ ಹೆಂಡತಿಗೆ, ಶಮಿ ಬಾಲ್ ಮೂಲಕ ಉತ್ತರಿಸಿದ್ದು ಹೇಗೆ ಗೊತ್ತಾ?
ಮೊಹಮ್ಮದ್ ಶಮಿ ಅವರ ಸಂಸಾರ ತುಂಬಾ ಚೆನ್ನಾಗಿ ಇತ್ತು, ಗಂಡ & ಹೆಂಡತಿ ಇಬ್ಬರೂ ನೆಮ್ಮದಿಯಾಗಿ ಬದುಕುತ್ತಿದ್ದರು. ಆಗ ಮೊಹಮ್ಮದ್ ಶಮಿ ಕೂಡ ಉತ್ತಮವಾಗಿ ಆಟವಾಡಿ ಜಗತ್ತಿನಾದ್ಯಂತ ಗಮನ ಸೆಳೆದಿದ್ದರು. ಆದರೆ ದಿಢೀರ್ ಏನಾಯ್ತೋ ಏನೋ.. ಮೊಹಮ್ಮದ್ ಶಮಿ ಸಂಸಾರದಲ್ಲಿ ಬಿರುಕು ಮೂಡಿತ್ತು. ಶಮಿ ಹೆಂಡತಿ ತನ್ನ ಗಂಡನ ವಿರುದ್ಧವೇ ಸಾಲು ಸಾಲು ಗಂಭೀರ ಆರೋಪ ಹೊರಿಸಿದ್ದರು. ಹೀಗೆ ಹೊತ್ತಿಕೊಂಡ ಕಿಚ್ಚು, ಹಲವು ವರ್ಷಗಳ ಕಾಲ ಹಾಗೇ ಉಳಿದಿದೆ. ಮೊನ್ನೆ ಮೊನ್ನೆಯಷ್ಟೆ ಮತ್ತೊಮ್ಮೆ ಶಮಿ ಕುರಿತು ಮಾತನಾಡಿದ್ದ ಶಮಿ ಪತ್ನಿ ಹಸಿನ್ ಜಹಾನ್, ಮೊಹಮ್ಮದ್ ಶಮಿ ಪಿತ್ತ ನೆತ್ತಿಗೇರಿಸಿದ್ದರು.

7 ವಿಕೆಟ್ ಪಡೆದು ಗಂಡನ ರಿವೇಂಜ್!
ಹೆಂಡತಿ ತನ್ನ ವಿರುದ್ಧ ಆರೋಪ ಮಾಡಿದ ಕೆಲ ಗಂಟೆಗಳಲ್ಲೇ ಗಂಡ ಕ್ರಿಕೆಟ್ ಅಂಗಳದಲ್ಲೇ ಉತ್ತರ ನೀಡಿದ್ದ. ಅದು ಭಾರತ VS ನ್ಯೂಜಿಲೆಂಡ್ ಮಧ್ಯೆ ನಡೆದ 2023ರ ಐಸಿಸಿ ವಿಶ್ವಕಪ್ ಮೊದಲ ಸೆಮಫೈನಲ್ ಪಂದ್ಯದಲ್ಲಿ. ಹೀಗೆ, ಈ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ಪಡೆಗೆ 398 ರನ್‌ಗಳ ಬೃಹತ್ ಗುರಿ ನೀಡಿದ್ದರೂ ಅದನ್ನು ಅರಗಿಸಿಕೊಳ್ಳಲು ಆಗಲೇ ಇಲ್ಲ. ಇನ್ನೇನು ನ್ಯೂಜಿಲೆಂಡ್ ತಂಡ 398 ರನ್‌ಗಳ ಗುರಿ ತಲುಪಿ ಭಾರತಕ್ಕೆ ಸೋಲು ತೋರಿಸುತ್ತೆ ಅನ್ನುವಾಗಲೇ ಬೆಂಕಿಯ ಉಂಡೆಯಂತೆ ಎಂಟ್ರಿ ಕೊಟ್ಟಿದ್ದರು ಮೊಹಮ್ಮದ್ ಶಮಿ!
ನ್ಯೂಜಿಲೆಂಡ್ ಹೆಡೆಮುರಿ ಕಟ್ಟಿದ್ದ ಶಮಿ
ಹೌದು, ಮೊನ್ನೆಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಆರಂಭದಲ್ಲೇ 40 ರನ್‌ಗಳ ಒಳಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಆಗ ಕಿವೀಸ್ ಪಡೆಯ ನಾಯಕ ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಜೋಡಿ ನೀಡಿದ್ದ 181 ರನ್ ಕೊಡುಗೆ ಭಾರತದ ಆಟಗಾರರಿಗೆ ಮತ್ತು ಅಭಿಮಾನಿಗಳಿಗೆ ಭಯ ತರಿಸಿತ್ತು. ಅಲ್ದೆ ದಿಢೀರ್ ಕ್ರೀಡಾಂಗಣದಲ್ಲಿ ಸೋಲಿನ ವಾತಾವರಣ ಸೃಷ್ಟಿಸಿತ್ತು. ಹೀಗಿದ್ದಾಗಲೇ ಮೊಹಮ್ಮದ್ ಶಮಿಗೆ ಬಾಲ್ ನೀಡಿದ ನಾಯಕ ರೋಹಿತ್ ಶರ್ಮಾ, ಅಂತಿಮವಾಗಿ ನ್ಯೂಜಿಲೆಂಡ್ ಸ್ಕೋರ್ 220 ರನ್ ಆಗಿದ್ದಾಗ 3ನೇ ವಿಕೆಟ್ ಬೀಳಿಸುವಲ್ಲಿ ಯಶಸ್ವಿಯಾದ್ರು. ಅದನ್ನ ಉರುಳಿಸಿದ್ದು ಇದೇ ಶಮಿ. ಅಲ್ಲಿಂದ ವಿಕೆಟ್ ಸರಣಿ ಶುರು ಮಾಡಿದ ಶಮಿ 7 ವಿಕೆಟ್ ಪಡೆದು ಅಬ್ಬರಿಸಿದರು.

9.5 ಓವರ್ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಶಮಿ 57 ರನ್ ನಿಡಿ 7 ವಿಕೆಟ್ ಪಡೆದರು. ಈ ಮೂಲಕ ತಮ್ಮ ತಾಕತ್ ಏನು? ಅನ್ನೋದನ್ನ ಇಡೀ ಕ್ರಿಕೆಟ್ ಜಗತ್ತಿಗೆ ತೋರಿಸಿದ ಬೌಲರ್ ಮೊಹಮ್ಮದ್ ಶಮಿ, ಈ ಸಮಯದಲ್ಲೇ ತನ್ನ ರಿವೇಂಜ್ ಕೂಡ ತೆಗೆದುಕೊಂಡರು. ಹೆಂಡತಿ ಮಾಡಿದ ಆರೋಪಗಳಿಗೆ ತಲೆ ಮೇಲೆ ಬಾಲ್ ಇಟ್ಟುಕೊಳ್ಳುವ ಮೂಲಕ ಉತ್ತರ ನೀಡಿದ್ದಾರೆ ಅಂತಾ ಫ್ಯಾನ್ಸ್ ಈಗ ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೆ ಮೊಹಮ್ಮದ್ ಶಮಿ ಅವರ ಪತ್ನಿ ಮಾಡಿದ್ದ ಆರೋಪಗಳಿಗೆ ಮೊಹಮ್ಮದ್ ಶಮಿ ಅಭಿಮಾನಿ ಬಳಗ ಫುಲ್ ಗರಂ ಆಗಿದೆ. ಈ ಮೂಲಕ 2023 ಐಸಿಸಿ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕಿಚ್ಚು ಹೊತ್ತಿದೆ. ಇಡೀ ಟೂರ್ನಿಯಲ್ಲಿ ಭಾರತದ ಪರ ಮಿಂಚಿರುವ ಮೊಹಮ್ಮದ್ ಶಮಿ, ಫೈನಲ್ ಪಂದ್ಯದಲ್ಲೂ ಆಸ್ಟ್ರೇಲಿಯಾದ ಹೆಡೆಮುರಿ ಕಟ್ಟಲು ಸಜ್ಜಾಗಿದ್ದಾರೆ.












Click it and Unblock the Notifications