India vs Pakistan: ಮೊದಲು ವಿರಾಟ್ ಕೊಹ್ಲಿ ಬಗ್ಗೆ ಮಾತನಾಡೋಣ! ಅಭಿಮಾನಿಗಳ ಮನಗೆದ್ದ ಪಾಕಿಸ್ತಾನದ ನಾಯಕ

ಫೆಬ್ರವರಿ 23ರ ಭಾನುವಾರ ದುಬೈನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ 82ನೇ ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದು ಅಭಿಮಾನಿಗಳ ಸಂಭ್ರಮವನ್ನು ಡಬಲ್ ಮಾಡಿದೆ. ಕೊಹ್ಲಿ ಆಟವನ್ನು ಭಾರತೀಯರು ಮಾತ್ರವಲ್ಲ ಪಾಕಿಸ್ತಾನದ ಅಭಿಮಾನಿಗಳು ಕೂಡ ಮೆಚ್ಚಿಕೊಂಡಿದ್ದಾರೆ. ಪಂದ್ಯದ ಬಳಿಕ ಪಾಕಿಸ್ತಾನ ನಾಯಕ ಮೊಹಮ್ಮದ್ ರಿಜ್ವಾನ್ ಆಡಿರುವ ಮಾತುಗಳು ವಿರಾಟ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಪಂದ್ಯದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮೊಹಮ್ಮದ್ ರಿಜ್ವಾನ್ ವಿರಾಟ್ ಕೊಹ್ಲಿಯನ್ನು ಆಡಿ ಹೊಗಳಿದರು. ಅವರ ಕ್ಲಾಸಿಕ್ ಬ್ಯಾಟಿಂಗ್‌ ಮಾತ್ರವಲ್ಲದೆ, 36 ವರ್ಷವಾದರೂ ವಿರಾಟ್ ಕೊಹ್ಲಿ ಫಿಟ್‌ನೆಸ್ ಕಂಡು ರಿಜ್ವಾನ್ ದಂಗಾಗಿದ್ದಾರೆ. ತಮ್ಮ ತಂಡದ ಕೆಟ್ಟ ಪ್ರದರ್ಶನದ ಬಗ್ಗೆ ಮಾತನಾಡುವ ಮುನ್ನ ಅವರು ವಿರಾಟ್ ಕೊಹ್ಲಿ ಆಟವನ್ನು ಹೊಗಳಲು ನಿರ್ಧರಿಸಿದರು.

Mohammad rizwan said this about virat kohli india pakistan champions trophy

"ಮೊದಲು ವಿರಾಟ್ ಕೊಹ್ಲಿ ಬಗ್ಗೆ ಮಾತನಾಡೋಣ. ಅವರ ಕಠಿಣ ಪರಿಶ್ರಮ ನೋಡಿ ನನಗೆ ಅಚ್ಚರಿಯಾಯಿತು. ವಿರಾಟ್ ಕೊಹ್ಲಿ ತುಂಬಾ ಕಠಿಣ ಅಭ್ಯಾಸ ಮಾಡಿರಬೇಕು. ಅವರು ಫಾರ್ಮ್‌ನಲ್ಲಿಲ್ಲ ಎಂದು ಹೇಳಲಾಗುತ್ತದೆ. ಆದರೆ ಅವರು ದೊಡ್ಡ ಪಂದ್ಯಗಳಲ್ಲಿ ಫಾರ್ಮ್‌ಗೆ ಬರುತ್ತಾರೆ, ಸುಲಭವಾಗಿ ರನ್ ಗಳಿಸುತ್ತಾರೆ. ನಾವು ಅವರಿಗೆ ರನ್ ಕೊಡಲು ಇಷ್ಟಪಡುವುದಿಲ್ಲ, ಆದರೆ ಕೊಹ್ಲಿ ಆಡುತ್ತಾರೆ, ಪಂದ್ಯವನ್ನು ನಮ್ಮಿಂದ ದೂರ ಮಾಡುತ್ತಾರೆ" ಎಂದು ಮೊಹಮ್ಮದ್ ರಿಜ್ವಾನ್ ಕೊಹ್ಲಿಯ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಬೌಲಿಂಗ್, ಫೀಲ್ಡಿಂಗ್ ಬಗ್ಗೆ ಬೇಸರ

ಕೊಹ್ಲಿಯ ಆಟವನ್ನು ಹೊಗಳಿದ ಬಳಿಕ ಮೊಹಮ್ಮದ್ ರಿಜ್ವಾನ್ ತಮ್ಮ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದರು. "ಪಂದ್ಯದಲ್ಲಿ ಸೋತಿದ್ದು ನಿರಾಸೆ ಮೂಡಿಸಿದೆ. ಸೋತಾಗ ವಿಷಯ ಕಷ್ಟವಾಗುತ್ತದೆ. ಹಲವು ಪ್ರಶ್ನೆಗಳು ಬರುತ್ತವೆ, ಅಬ್ರಾರ್ ಅವರನ್ನು ಹೊರತುಪಡಿಸಿ ಯಾವುದೇ ವಿಭಾಗದಲ್ಲಿ ಉತ್ತಮವಾಗಿ ಆಡಲಿಲ್ಲ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಸುಧಾರಿಸಿಕೊಳ್ಳಬೇಕಿದೆ" ಎಂದು ಹೇಳಿದರು.

ಚಾಂಪಿಯನ್ಸ್ ಟ್ರೋಫಿ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್ ಅಂತರದಲ್ಲಿ ಸೋತಿದ್ದ ಪಾಕಿಸ್ತಾನ ಭಾರತದ ವಿರುದ್ಧ ಕೂಡ ಸೋತಿದ್ದು ಬಹುತೇಕ ಚಾಂಪಿಯನ್ಸ್ ಟ್ರೋಫಿಯಿಂದಲೇ ಹೊರಬಿದ್ದಿದೆ. ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದ್ದು ಗೆದ್ದರೂ ಸೆಮಿಫೈನಲ್ ತಲುಪುವುದು ಅಸಾಧ್ಯವಾಗಿದೆ.

ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ಅದ್ಭುತ ಪ್ರದರ್ಶನ ಮುಂದುವರೆಸಿದ್ದಾರೆ. ಇದು ಪಾಕಿಸ್ತಾನದ ವಿರುದ್ಧ ಕೊಹ್ಲಿ ಅವರ ನಾಲ್ಕನೇ ಶತಕವಾಗಿದೆ. ಏಕದಿನ ಮಾದರಿಯಲ್ಲಿ 51ನೇ ಶತಕವಾಗಿದ್ದು, ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮೀರಿದ್ದಾರೆ. ಅಲ್ಲದೆ ಇದೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 14,000 ರನ್‌ ಗಳಿಸಿದ ದಾಖಲೆ ಕೂಡ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+