Mike Tyson:20 ವರ್ಷಗಳ ಬಳಿಕ ಬಾಕ್ಸಿಂಗ್ ಅಖಾಡಕ್ಕೆ ಮರಳಿದ ಮೈಕ್ ಟೈಸನ್
ಬಾಕ್ಸಿಂಗ್ ಲೋಕದ ಲೆಜೆಂಡ್ ಮೈಕ್ ಟೈಸನ್ ಮತ್ತೆ ಬಾಕ್ಸಿಂಗ್ ಅಖಾಡಕ್ಕೆ ಬಂದಿದ್ದಾರೆ. 20 ವರ್ಷಗಳ ಬಳಿಕ ಮೊದಲ ಬಾರಿಗೆ ಮತ್ತೆ ಬಾಕ್ಸಿಂಗ್ ರಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಟೆಕ್ಸಾಸ್‌ನ ಆರ್ಲಿಂಗ್ಟನ್‌ನಲ್ಲಿರುವ ಎಟಿ&ಟಿ ಸ್ಟೇಡಿಯಂನಲ್ಲಿ ಫೈಟರ್ ಜೇಕ್ ಪಾಲ್ ಅವರ ಜೊತೆ ಬಾಕ್ಸಿಂಗ್ ಅಖಾಡದಲ್ಲಿ ಸೆಣೆಸಾಡಲಿದ್ದಾರೆ. ಇಬ್ಬರ ವಯಸ್ಸಿನ ಅಂತರವನ್ನು ಕೇಳಿದರೆ ಅಭಿಮಾನಿಗಳು ಅಚ್ಚರಿಯಾಗುವುದು ಸತ್ಯ, ಇಬ್ಬರ ವಯಸ್ಸಿನ ಅಂತರ ಬರೀ 31 ವರ್ಷ ಅಷ್ಟೇ!
58 ವರ್ಷದ ಮಾಜಿ ವಿಶ್ವ ಹೆವಿವೇಯ್ಟ್ ಚಾಂಪಿಯನ್ ಮೈಕ್ ಟೈಸನ್ ಮತ್ತು 27 ವರ್ಷದ ಯುವ ಬಾಕ್ಸರ್ ಜೇಕ್ ಪಾಲ್ ನಡುವಿನ ಫೈನಲ್ ಪಂದ್ಯಕ್ಕೆ ಮುನ್ನವೇ ವಿವಾದ ಶುರುವಾಗಿದೆ. ಪಂದ್ಯದ ಸಾಂಪ್ರದಾಯಿಕ ತೂಕ ಪರೀಕ್ಷೆ ನಂತರ ಇಬ್ಬರು ಮುಖಾಮುಖಿಯಾಗಿದ್ದು, ಈ ಸಂದರ್ಭದಲ್ಲಿ ಮೈಕ್ ಟೈಸನ್ ಜೇಕ್ ಪಾಲ್ ಅವರ ಮುಖಕ್ಕೆ ಹೊಡೆದಿದ್ದು ಪಾಲ್ ಸಿಟ್ಟಿಗೆದ್ದಿದ್ದಾರೆ.

ಹೆವಿವೇಯ್ಟ್ ಬಾಕ್ಸಿಂಗ್‌ನಲ್ಲಿ ಎರಡು ನಿಮಿಷಗಳ ಎಂಟು ಸುತ್ತುಗಳಿರುತ್ತವೆ. ಬಾಕ್ಸರ್ ಗಳು 14 ಔನ್ಸ್ ತೂಕದ ಕೈಗವಸುಗಳನ್ನು ಬಳಸುತ್ತಾರೆ. ಹೆವಿ ವೈಟ್ ಬಾಕ್ಸರ್ ಗಳು ಹೊಡೆತದ ತೀವ್ರತೆಯನ್ನು ಕಡಿಮೆ ಮಾಡಲು 19 ಔನ್ಸ್ ಕೈಗವಸುಗಳನ್ನು ಬಳಸುತ್ತಾರೆ.
ಮೈಕ್ ಟೈಸನ್ ಮತ್ತು ಜೇಕ್ ಪಾಲ್ ನಡುವಿನ ವಯಸ್ಸಿನ ಅಂತರವು ವಿಶ್ವ ಬಾಕ್ಸಿಂಗ್‌ನಲ್ಲಿ ಹೊಸ ದಾಖಲೆ ಬರೆದಿದೆ. ಇಬ್ಬರ ವಯಸ್ಸಿನ ಅಂತರ 31 ವರ್ಷಗಳಾಗಿದ್ದು, 1962 ರಲ್ಲಿ ಆರ್ಚಿ ಮೂರ್ (49) ಮತ್ತು ಮೈಕ್ ಡಿಬಿಯಾಸ್ (25) ನಡುವಿನ 24 ವರ್ಷಗಳ ದಾಖಲೆಯನ್ನು ಮೀರಿ ಹೊಸ ದಾಖಲೆ ಬರೆದಿದೆ.
ನೆಟ್‌ಫ್ಲಿಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮೈಕ್ ಟೈಸನ್ ಕಡ್ಡಾಯ ತೂಕ ಪರೀಕ್ಷೆ ಪೂರ್ಣಗೊಳಿಸಿದ ಬಳಿಕ ಎದುರಾಗಿ ಬಂದ ಪೌಲ್ ಕಪಾಳಕ್ಕೆ ಬಾರಿಸಿದ್ದಾರೆ. ಬಳಿಕ ಮಾತು ಮುಗಿದಿದೆ ಎಂದು ಜೋರಾಗಿ ಹೇಳಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೌಲ್, ಟೈಸನ್ ವೈಯಕ್ತಿಕ ದ್ವೇಷದಿಂದ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೈಸನ್ ವಿಶ್ವ ಹೆವಿವೇಯ್ಟ್ ಚಾಂಪಿಯನ್ ಆಟಗಾರ. 50 ಪ್ರೋ ಬಾಕ್ಸಿಂಗ್‌ನಲ್ಲಿ ಅವರು 44 ಬಾರಿ ಗೆಲುವು ಸಾಧಿಸಿದ್ದು, 6 ಬಾರಿ ಮಾತ್ರ ಸೋತಿದ್ದಾರೆ. 2003ರಲ್ಲಿ ಮೈಕ್ ಟೈಸನ್ ಕೊನೆಯದಾಗಿ ಪಂದ್ಯವನ್ನು ಗೆದ್ದಿದ್ದರು. 2004 ಮತ್ತು 2005ರಲ್ಲಿ ಸೋಲನುಭವಿಸಿದ ಬಳಿಕ ಬಾಕ್ಸಿಂಗ್‌ನಿಂದ ದೂರವುಳಿದಿದ್ದರು. 20 ವರ್ಷಗಳ ಬಳಿಕ ಅವರು ಮತ್ತೆ ಬಾಕ್ಸಿಂಗ್‌ಗೆ ಮರಳುತ್ತಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಭಾರತೀಯ ಕಾಲಮಾನ ನವೆಂಬರ್ 16ರಂದು ಬೆಳಗ್ಗೆ 9.30ಕ್ಕೆ ಬಾಕ್ಸಿಂಗ್ ಆರಂಭವಾಗಲಿದೆ.












Click it and Unblock the Notifications