Rohit Sharma: ವಾಂಖೆಡೆಯಲ್ಲಿ ರೋಹಿತ್‌ ಶರ್ಮಾ ಬೆನ್ನು ಬಿದ್ದ ಅಭಿಮಾನಿ-ಮುಂದೇನಾಯ್ತು?

Rohit Sharma: ವಾಂಖೆಡೆ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂ​ನಲ್ಲಿ ಸೋಮವಾರ (ಏಪ್ರಿಲ್ 01) ಮುಂಬೈ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಐಪಿಎಲ್‌ ಪಂದ್ಯ ನಡೆದಿದ್ದು, ಈ ವೇಳೆ ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್‌ 20 ಓವರ್‌​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 125 ರನ್‌ ಗಳಿಸಲಷ್ಟೇ ಸುಸ್ತು ಹೊಡೆದಿತು. ಈ ರನ್‌ಗಳನ್ನು ರಾಜಸ್ಥಾನ ರಾಯಲ್ಸ್‌ ಓವರ್‌ ಟೇಕ್‌ ಮಾಡುತ್ತಿರುವಾಗ ಅಭಿಮಾನಿಯೊಬ್ಬರು ಮೈದಾನಕ್ಕೆ ನುಗ್ಗಿ ಫೀಲ್ಡಿಂಗ್‌ ಮಾಡುತ್ತಿದ್ದ ರೋಹಿತ್‌ ಶರ್ಮಾ ಅವರ ಬೆನ್ನು ಬಿದ್ದಿದ್ದರು.

ವಾಂಖೆಡೆ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂ​ನಲ್ಲಿ ರಾಜಸ್ಥಾನ ಮತ್ತು ಮುಂಬೈ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ ಅಭಿಮಾನಿಯೊಬ್ಬರು ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಅವರ ಬೆನ್ನು ಬಿದ್ದಿದ್ದರು. ಹಾಗಾದರೆ ಮುಂದೇನಾಯ್ತು ಎಂದು ಇಲ್ಲಿ ತಿಳಿಯಿರಿ.

MI vs RR A fan came to near Rohit Sharma during IPL match video viral

ಇದೀಗ ಮುಂಬೈ ತಂಡದ ನಾಯಕ ಸ್ಥಾನ ಬದಲಾವಣೆ ಆಗಿದ್ದು, ಇದಕ್ಕೆ ರೋಹಿತ್‌ ಶರ್ಮಾ ಅಭಿಮಾನಿಗಳಿಂದ ತೀವ್ರ ಆಕ್ರೋಶಗಳು ಭುಗಿಲೆದ್ದಿವೆ. ಇನ್ನು ತಂಡದ ನಾಯಕ ಸ್ಥಾನ ವಹಿಸಿಕೊಂಡಿರುವ ಹಾರ್ದಿಕ್‌ ಪಾಂಡ್ಯ ವಿರುದ್ಧ ಘೋಷಣೆಳನ್ನು ನಿನ್ನೆ ವಾಂಖೆಡೆಯಲ್ಲಿ ಕೋಗಿದ್ದಾರೆ. ಈ ವೇಳೆ ರೋಹಿತ್‌ ಶರ್ಮಾ ತಮ್ಮ ಅಭಿಮಾನಿಗಳನ್ನು ಹಾಗೆ ಕೂಗಬಾರದು, ಪಾಂಡೆ ಅವರಿಗೂ ಒಂದು ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾರೆ. ಆದರೂ ಈ ನಡುವೆಯೇ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ರೋಹಿತ್‌ ಬೆನ್ನು ಬಿದ್ದ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಅವರ ಬೆನ್ನು ಬಿದ್ದ ಅಭಿಮಾನಿಯನ್ನು ಅಲ್ಲಿನ ಭದ್ರತಾ ಸಿಬ್ಬಂದಿ ಕರೆದುಕೊಂಡು ಹೋಗಿರುವುದು ಈ ದೃಶ್ಯದಲ್ಲಿ ಸೆರೆಯಾಗಿದೆ. ಹಾಗೆಯೇ ಇತ್ತೀಚೆಗಷ್ಟೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಪಂದ್ಯ ನಡೆದಿದ್ದು, ಈ ವೇಳೆ ಅಭಿಮಾನಿಯೊಬ್ಬರು ಮೈದಾನಕ್ಕೆ ನುಗ್ಗಿ ಅಭಿಮಾನದಿಂದ ವಿರಾಟ್‌ ಕೋಹ್ಲಿ ಅವರ ಕಾಲಿಗೆ ಬೀಳಲು ಮುದಾಗಿದ್ದರು. ಆದರೆ ನಂತರ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆ ಅಭಿಮಾನಿಯನ್ನು ಕರೆದುಕೊಂಡು ಹೋಗಿದ್ದಲ್ಲದೆ, ಕಾಲಿನಲ್ಲಿ ಥಳಿಸಿದ್ದರು ಎನ್ನುವ ಆಕ್ರೋಶಗಳು ಭುಗಿಲೆದ್ದಿದ್ದವು.

ಒಟ್ಟಿನಲ್ಲಿ ನಿಯಮದ ಪ್ರಕಾರ ತೀರ್ಪುಗಾರರು, ಆಟಗಾರರನ್ನು ಹೊರತುಪಡಿಸಿ ಮೈದಾನಕ್ಕೆ ಯಾರು ಎಂಟ್ರಿ ಕೊಡುವಂತಿಲ್ಲ. ಆದರೂ ಕೆಲವೊಬ್ಬ ಅಭಿಮಾನಿಗಳು ಮಾತ್ರ ಇದನ್ನೆಲ್ಲ ಮೀರಿ ತಮ್ಮ ನೆಚ್ಚಿನ ಆಟಗಾರರನ್ನು ಭೇಟಿ ಮಾಡಲು ಮೈದಾನಕ್ಕೆ ನುಗ್ಗಿಬಿಡುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಇವರನ್ನು ತಡೆಯಲು ತಕ್ಷಣ ಅಲ್ಲಿನ ಸಿಬ್ಬಂದಿ ಆಗಮಿಸಿಬಿಡುತ್ತಾರೆ. ಆದರೂ ಮೊನ್ನೆ ಆರ್‌ಸಿಬಿ ಪಂದ್ಯದ ವೇಳೆ ಸಿಬ್ಬಂದಿ ಕೊಹ್ಲಿ ಅಭಿಮಾನಿಯನ್ನು ಹೊರಗೆ ಕಳುಹಿಸಿದ್ದರು. ಇದನ್ನು ಒಪ್ಪಿಕೊಳ್ಳೋಣ. ಆದರೆ ಅಲ್ಲಿನ ಸೆಕ್ಯೂರಿಟಿ ಸಿಬ್ಬಂದಿ ಆ ಅಭಿಮಾನಿಗೆ ಕಾಲಿನಲ್ಲಿ ಥಳಿಸಿಬಿಟ್ಟಿದ್ದಾರೆ.

ಇನ್ನು ಸೆಕ್ಯೂರಿಟಿ ಸಿಬ್ಬಂದಿ ಕೊಹ್ಲಿ ಅಭಿಮಾನಿಗೆ ಕಾಲಲ್ಲಿ ಥಳಿಸಿರುವ ವಿಡಿಯೋ ಎಲ್ಲಡೆ ವೈರಲ್‌ ಆಗಿದ್ದು, ಇದಕ್ಕೆ ಆಕ್ರೋಶಗಳು ಭುಗಿಲೆದ್ದಿದ್ದವು. ಇನ್ನು ನಿನ್ನೆ (ಏಪ್ರಿಲ್‌ 1) ಪಂದ್ಯ ನಡೆಯುವ ವೇಳೆ ವಾಂಖಡೆ ಮೈದಾನಕ್ಕೆ ನುಗ್ಗಿ ರೋಹಿತ್‌ ಶರ್ಮಾನ ಬಳಿ ಬಂದ ಅಭಿಮಾನಿಯನ್ನು ಅಲ್ಲಿನ ಭದ್ರತಾ ಸಿಬ್ಬಂದಿ ತಡೆದು ಸಮಾಧಾನದಿಂದ ಹೊರಗಡೆ ಕಳುಹಿಸಿದ್ದಾರೆ.

ಮೊದಲು ಬ್ಯಾಟ್‌ ಮಾಡಿದ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 125 ರನ್‌ಗಳನ್ನು ಕಲೆಹಾಕಿದೆ. ಇನ್ನು ಈ ರನ್‌ಗಳನ್ನು ಓವರ್‌ಟೇಕ್‌ ಮಾಡಿದ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಮುಂಬೈ ಇಂಡಿಯನ್ಸ್ ನೀಡಿದ ಸಾಧಾರಣ ಮೊತ್ತದ ಗುರಿ ಓವರ್ ಟೇಕ್‌ ಮಾಟಿದ ರಾಜಸ್ಥಾನ್ ರಾಯಲ್ಸ್ ತಂಡವು ಕೇವಲ 15.3 ಓವರ್‌ಗಳಲ್ಲಿ 127 ರನ್​ ಗಳಿಸುವ ಮೂಲಕ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+