Manu Bhaker: ಭಾರತದ ನ್ಯೂ ಪೋಸ್ಟರ್ ಗರ್ಲ್ ಹಿಂದೆ ಬಿದ್ದಿರುವ ಜಾಹಿರಾತು ಕಂಪನಿಗಳು
ಭಾರತದ ಭರವಸೆಯ ಬೆಳಕು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ವಿಜೇತೆ ಮನು ಭಾಕರ್ ಹಿಂದೆ ಈಗ ಜಾಹೀರಾತು ಕಂಪನಿಗಳು ಕ್ಯೂ ನಿಂತಿವೆ. ಹೀಗಾಗಿ ಭಾರತದ ನ್ಯೂ ಪೋಸ್ಟರ್ ಗರ್ಲ್ ಬ್ರ್ಯಾಂಡ್ ವ್ಯಾಲ್ಯೂ ಸಹ ಹೆಚ್ಚಾಗಿದೆ.
ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತದ ಮನು ಭಾಕರ್, ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕ ಗೆದ್ದು, ಮೂರನೇ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಶನಿವಾರ ನಡೆದ ಮಹಿಳೆಯರ 25 ಮೀಟರ್ ಪಿಸ್ತೂಲ್ ಈವೆಂಟ್‌ನಲ್ಲಿ ಮನು ಕೂದಲೆಳೆಯ ಅಂತರದಲ್ಲಿ ಪದಕವನ್ನು ತಪ್ಪಿಸಿಕೊಂಡರು. ಆದರೂ ಅವರ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

ಡಬಲ್ ಪದಕ ಸಂಭ್ರಮ
22 ವರ್ಷದ ಮನು ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಸ್ವಾತಂತ್ರ್ಯ ಭಾರತದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ಅಥ್ಲಿಟ್ ಎರಡು ಪದಕವನ್ನು ಬಾಚಿಕೊಂಡು ಹೆಮ್ಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೀಗಾಗಿಯೇ ಅವರ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಾಗುತ್ತಲೇ ಇದೆ.
ಬ್ರ್ಯಾಂಡ್ ಮೌಲ್ಯ ಹೆಚ್ಚಳ
ವರದಿಯ ಪ್ರಕಾರ ಮನು ಅವರನ್ನು ತಮ್ಮ ಬ್ರ್ಯಾಂಡ್‌ಗೆ ಸೇರಿಸಿಕೊಳ್ಳಲು ಸುಮಾರು 40ಕ್ಕೂ ಹೆಚ್ಚು ಕಂಪನಿಗಳು ತುದಿಗಾಲಿನಲ್ಲಿ ನಿಂತಿವೆ. ಇನ್ನು ದೇಶದಲ್ಲಿ ತಮ್ಮ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ಸ್ಟಾರ್ ಶೂಟರ್ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಸದ್ಯ ಅವರು ತಮ್ಮ ಬ್ರ್ಯಾಂಡ್ ವ್ಯಾಲ್ಯೂ 6 ಪಟ್ಟು ಹೆಚ್ಚು ಮಾಡಿಕೊಂಡಿದ್ದಾರೆ ಎಂದು ತಿಳಿದು ಬರುತ್ತಿದೆ.

ಮನು ಒಂದು ಜಾಹಿರಾತಿಗೆ ಪಡೆಯುವ ಸಂಭಾವನೆ ಎಷ್ಟು?
ಪ್ಯಾರೀಸ್‌ನಲ್ಲಿ ಮನು ಒಂದು ಕಂಪನಿ ರಾಯಭಾರಿ ಆಗಲು ಸುಮಾರು 20 ಲಕ್ಷ ಚಾರ್ಜ್ ಮಾಡುತ್ತಿದ್ದರು. ಆದರೆ ಈಗ ಅವರು ತಮ್ಮ ತಮ್ಮ ಬ್ರ್ಯಾಂಡ್ ವ್ಯಾಲ್ಯೂ 1.5 ಕೋಟಿಗೆ ಹೆಚ್ಚಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮನು ಅವರು ಈ ಹಿಂದೆ ಪದಕ ಗೆದ್ದಾಗ 150ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು, ತಮ್ಮ ಬ್ರ್ಯಾಂಡ್ ಲೋಗೋ ಬಳಸಿ ಮನು ಅವರ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದವು. ಹೀಗಾಗಿ ಮನು ಭಾಕರ್ ಅವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಜಾಹಿರಾತುಗಳ ಕ್ಯೂ
ಮನು ಅವರ ಮ್ಯಾನೇಜಿಂಗ್ ಏಜೆನ್ಸಿ ಹೇಳುವ ಪ್ರಕಾರ, ಕಳೆದ ಎರಡು ಮೂರು ದಿನಗಳಲ್ಲಿ ನಮ್ಮನ್ನು 40ಕ್ಕೂ ಹೆಚ್ಚು ಕಂಪನಿಗಳು ಸಂಪರ್ಕ ಮಾಡಿವೆ. ಇಷ್ಟೇ ಅಲ್ಲದೆ ಹಲವು ಕಂಪನಿಗಳ ಜೊತೆ ಈಗಾಗಲೇ ಒಪ್ಪಂದವನ್ನು ಪುರ್ಣಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.












Click it and Unblock the Notifications