Get Updates
Get notified of breaking news, exclusive insights, and must-see stories!

Mahieka Sharma: ಹಾರ್ದಿಕ್ ಪಾಂಡ್ಯ ಕಡಿಮೆ ರನ್‌ಗೆ ವಿಕೆಟ್‌ ಒಪ್ಪಿಸಿದಾಗ ಖುಷಿಯಿಂದ ಚಪ್ಪಾಳೆ ಹೊಡೆದ ಪ್ರೇಯಸಿ ಮಹಿಕಾ ಶರ್ಮಾ

Mahika Sharma Video Viral: ಟಿ20 ವಿಶ್ವಕಪ್‌ 2026 ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಔಟ್ ಆದ ಬಳಿಕ ಅವರ ಪ್ರೇಯಸಿ ಮಹಿಕಾ ಶರ್ಮಾ ಎದ್ದುನಿಂತು ಚಪ್ಪಾಳೆ ಹೊಡೆದ ದೃಶ್ಯ ಗಮನ ಸೆಳೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ ಈ ಬಗ್ಗೆ ನೆಟ್ಟಿಗರು ಹೇಳೋದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 18 ರನ್ ಗಳಿಸಿ ಕ್ಯಾಚ್ ನೀಡಿ ಔಟ್ ಆಗಿ ಪೆವಿಲಿಯನ್‌ನತ್ತ ತೆರಳುತ್ತಿದ್ದರು. ಈ ವೇಳೆ ಮಹಿಕಾ ಶರ್ಮಾ ಚಪ್ಪಾಳೆ ಹೊಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗಳಿ ನಡೆದಿವೆ. ಕೆಲವರು ಕಡಿಮೆ ರನ್‌ಗಳಿಗೆ ಔಟ್‌ ಆಗಿ ಬಂದರೆಂದು ಖುಷಿ ಪಡುತ್ತಿದ್ದೀರಾ? ಇದರ ಅರ್ಥವೇನು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.

Mahieka Sharma s Reaction After Hardik Pandya s Wicket Leaves Sparks Debate During T20 World Cup

ಮಹಿಕಾ ನಡೆಗೆ ಪರ-ವಿರೋಧದ ಚರ್ಚೆಗಳು

ಹೀಗೆ ಕೆಲವರು ಇದನ್ನು ಸಾಮಾನ್ಯ ಕ್ರೀಡಾ ಮನೋಭಾವ ಎಂದು ನೋಡಿದರೆ, ಮತ್ತಿತರರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದೀಗ ಮಹಿಕಾ ಅವರ ಈ ರಿಯಾಕ್ಷನ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಔಟ್ ಆದ ಬಳಿಕ ಈ ಘಟನೆ ನಡೆದಿದೆ.

ಪಾಂಡ್ಯ ಔಟ್‌ ಆಗಿದ್ದಕ್ಕೆ ಚಪ್ಪಾಳೆ ಹೊಡೆದ್ರಾ ಮಹಿಕಾ?

ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು 17 ಎಸೆತಗಳಲ್ಲಿ ಕೇವಲ 18 ರನ್ ಗಳಿಸಿ ಸಾಧಾರಣ ಇನ್ನಿಂಗ್ಸ್ ಆಡಿದರು. ಕೇಶವ್ ಮಹಾರಾಜ್ ಅವರ ಬೌಲಿಂಗ್‌ನಲ್ಲಿ ಬಿಗ್ ಶಾಟ್ ಹೊಡೆಯಲು ಯತ್ನಿಸಿದರು. ಆದರೆ, ಬೌಂಡರಿ ಲೈನ್‌ ಬಳಿ ಟ್ರಿಸ್ಟನ್ ಸ್ಟಬ್ಸ್ ಅವರು ಕ್ಯಾಚ್‌ ಹಿಡಿದು ಪಾಂಡ್ಯ ಅವರನ್ನು ಔಟ್‌ ಮಾಡಿದರು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ವಿಡಿಯೋದಲ್ಲಿ ಮಹಿಕಾ ಶರ್ಮಾ ಚಪ್ಪಾಳೆ ಹೊಡೆಯುತ್ತಿರುವುದು ಕಾಣಿಸಿದ್ದು, ಈ ದೃಶ್ಯ ನೆಟ್ಟಿಗರನ್ನು ಗೊಂದಲಕ್ಕೀಡಾಗಿಸಿದೆ. ಆದರೆ, ಮತ್ತೊಂದೆಡೆ ಇದು ನಿಜವಾದ ವಿಡಿಯೋವೇ ಅಥವಾ ಎಡಿಟ್ ಮಾಡಲಾದದ್ದೇ ಎಂಬುದನ್ನು ದೃಢಪಡಿಸಲಾಗಿಲ್ಲ.

ಟಾಸ್‌ ಜೊತೆ ಪಂದ್ಯ ಸೋತ ಭಾರತ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣನಲ್ಲಿ ನಡೆದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ 76 ರನ್‌ಗಳಿಂದ ಭರ್ಜರಿಗೆ ಗೆಲುವು ದಾಖಲಿಸಿತು. ಆರಂಭದಲ್ಲೇ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ ಬರೋಬ್ಬರಿ 187 ರನ್‌ಹಗಳನ್ನು ಕಲೆಹಾಕಿತು.

ಟೀಂ ಇಂಡಿಯಾ ಪರ ಜಸ್ಪ್ರಿತ್ ಬೂಮ್ರಾ ಬೌಲಿಂಗ್‌ ದಾಳಿಯಿಂದ ಭಾರತ ಉತ್ತಮ ಆರಂಭ ಪಡೆದುಕೊಂಡಿತು. ಅವರು ಕ್ವಿಂಟನ್ ಡಿ ಕಾಕ್ ಹಾಗೂ ರಯಾನ್ ಡೇವಿಡ್ ರಿಕೆಲ್ಟನ್ ಅವರನ್ನು ಕಡಿಮೆ ರನ್‌ಗಳಿಗೆ ಔಟ್ ಮಾಡಿದರು. ಬಳಿಕ ಅರ್ಷದೀಪ್ ಸಿಂಗ್ ಎಯ್ಡ್ ಮಾರ್ಕ್ರಮ್ ಅವರ ವಿಕೆಟ್ ಕಿತ್ತರು. ಈ ಮೂಲಕ ದಕ್ಷಿಣ ಆಫ್ರಿಕಾವ 20 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಆದರೆ, ನಂತರ ಬಂದಂತಹ ಡೇವಿಡ್ ಮಿಲ್ಲರ್ 63(35) ಮತ್ತು ಡೆವಾಲ್ಡ್ ಬ್ರೆವಿಸ್ 45(29) ರನ್‌ಗಳನ್ನು ಕಲೆಹಾಕಿ ತಂಕ್ಕೆ ನೆರವಾದರು. ಇವರ ಜವಾಬ್ದಾರಿಯುತ ಆಟದಿಂದ ದಕ್ಷಿಣ ಆಫ್ರಿಕಾ 7 ವಿಕೆಟ್ ನಷ್ಟಕ್ಕೆ 187 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.

ಬಳಿಕ ಬ್ಯಾಟಿಂಗ್‌ಗೆ ಇಳಿದ ಟೀಂ ಇಂಡಿಯಾವು ದಕ್ಷಿಣ ಆಫ್ರಿಕಾ ನೀಡಿದ ಗುರಿಯನ್ನು ಬೆನ್ನಟ್ಟುವಲ್ಲಿ ಸಂಪೂರ್ಣ ವಿಫಲವಾಯಿತು. ದಕ್ಷಿಣ ಆಫ್ರಿಕಾ ಬೌಲರ್‌ಗಳ ದಾಳಿಗೆ ತತ್ತರಿಸಿದ ಭಾರತ 111 ರನ್‌ಗಳಿಗೆ ಆಲ್‌ಔಟ್ ಆಗಿ ಬರೋಬ್ಬರಿ 75 ರನ್‌ಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿತು. ಈ ಸೋಲಿನಿಂದ ಭಾರತ ತಂಡ ರನ್‌ರೇಟ್‌ನಲ್ಲಿ ತೀವ್ರ ಕುಸಿತ ಕಂಡಿದ್ದು, ಸೆಮಿಫೈನಲ್ ಪ್ರವೇಶಕ್ಕೆ ಸಂಕಷ್ಟ ಎದುರಾಗಿದೆ.

ಈಗ ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಉಳಿದಿರುವ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ವಿರುದ್ಧದ ಕೊನೆಯ ಎರಡು ಪಂದ್ಯಗಳಲ್ಲಿ ಉತ್ತಮ ರನ್‌ ರೇಟ್‌ನೊಂದಿಗೆ ಗೆಲ್ಲಲೇಬೇಕು. ಹೀಗೆ ಆದರೆ ಮಾತ್ರ ಭಾರತ ಸೆಮಿಫೈನಲ್‌ಗೆ ಪ್ರವೇಶ ಮಾಡಲಿದೆ ಎಂದು ಹೇಳಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+