5,394 ರನ್ ಬಾರಿಸಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಿವೃತ್ತಿಗೆ... Virat Kohli
ಭಾರತೀಯ ಕ್ರಿಕೆಟ್ ಲೋಕದಲ್ಲಿ ಹೊಸ ಅಲೆ ಎಬ್ಬಿಸಿದ್ದ ಮಹೇಂದ್ರ ಸಿಂಗ್ ಧೋನಿ, ಭಾರತ ಕ್ರಿಕೆಟ್ ತಂಡಕ್ಕೆ 2ನೇ ಏಕದಿನ ವರ್ಲ್ಡ್ ಕಪ್ ಗೆದ್ದು ಕೊಟ್ಟಿದ್ದರು. ಅಲ್ಲದೆ ಟಿ20 & ಚಾಂಪಿಯನ್ಸ್ ಟ್ರೋಫಿ ಕಪ್ ಕೂಡ ಗೆದ್ದು ಕೊಟ್ಟಿದ್ದರು. ಸತತವಾಗಿ ಚೆನ್ನೈ ತಂಡದ ಪರ ಆಡುತ್ತಿರುವ & ನೂರಾರು ದಾಖಲೆ ಬರೆದಿರುವ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಇತ್ತೀಚೆಗೆ ಭಾರಿ ಆಕ್ರೋಶ ಸ್ಫೋಟಗೊಂಡಿತ್ತು. ಹೀಗಿದ್ದಾಗಲೇ, 5,394 ರನ್ ಬಾರಿಸಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಿವೃತ್ತಿಗೆ...
ಧೋನಿ ಇತ್ತೀಚೆಗೆ ಆಡುತ್ತಿರುವ ರೀತಿ ಸ್ವತಃ ಅವರ ಅಭಿಮಾನಿಗಳಿಗೆ ಬೇಸರ ತರಿಸಿದ್ದು, ಈ ಕಾರಣಕ್ಕೆ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಚೆನ್ನೈ ಫ್ಯಾನ್ಸ್ ಕೂಡ ಗರಂ ಆಗಿದ್ದಾರೆ. ಹಾಗೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ 2025ರ ಐಪಿಎಲ್ ಟೂರ್ನಿಯಿಂದಲೇ ಹೊರಗಡೆ ಬಿದ್ದಿದ್ದು, ಅಭಿಮಾನಿಗಳ ಎದೆಯಲ್ಲಿ ಕಾಡ್ಗಿಚ್ಚು ಹೊತ್ತಿಕೊಳ್ಳುವಂತೆ ಮಾಡಿದೆ. ಇಷ್ಟೆಲ್ಲದರ ನಡುವೆ ಮಹೇಂದ್ರ ಸಿಂಗ್ ಧೋನಿ ವಿರೋಧಿಗಳು ಕೂಡ ಒಗ್ಗಟ್ಟಾಗಿ, ಸಿಕ್ಕಾಪಟ್ಟೆ ದೊಡ್ಡದಾಗಿ ಬಿರುಗಾಳಿ ಎದ್ದಿದೆ!

ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಿವೃತ್ತಿಗೆ...
ಐಪಿಎಲ್-2025 ಇನ್ನೇನು ಪ್ಲೇಆಫ್ ಹಂತಕ್ಕೆ ತಲುಪುತ್ತಿದೆ, ಹೀಗಿದ್ದರೂ ಚೆನ್ನೈ ತಂಡ ಮಾತ್ರ ಗೆಲುವು ಕಾಣಲು ಒದ್ದಾಡುತ್ತಿದೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಸಾಲು ಸಾಲು ಸೋಲು ಕಂಡ ಹಿನ್ನೆಲೆ ಅಭಿಮಾನಿಗಳ ಆಕ್ರೋಶದ ಕಹಳೆ ಮೊಳಗಿದ್ದು, ಮಹೇಂದ್ರ ಸಿಂಗ್ ಧೋನಿ ಆಡುತ್ತಿರುವ ರೀತಿ ಬಗ್ಗೆಯು ಕಮೆಂಟ್ ಶುರುವಾಗಿದೆ. ಹೀಗಿದ್ದಾಗಲೇ, 5394 ರನ್ ಬಾರಿಸಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಿವೃತ್ತಿಗೆ...
ಧೋನಿ ವಿರುದ್ಧ ತೀವ್ರ ಆಕ್ರೋಶ!
ಮಹೇಂದ್ರ ಸಿಂಗ್ ಧೋನಿ ಕಳೆದ 18 ವರ್ಷಗಳಿಂದ ಕೂಡ ಐಪಿಎಲ್ ಟೂರ್ನಿ ಆಡುತ್ತಿದ್ದು, ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಅತಿಹೆಚ್ಚು ಬಾರಿ ಆಡಿದ್ದಾರೆ. ಕೋಟಿ ಕೋಟಿ ಅಭಿಮಾನಿಗಳು ಧೋನಿ ಬೆನ್ನಿಗೆ ನಿಂತಿದ್ದರೂ ಕಳಪೆ ಆಟವೇ ಮುಂದುವರಿದು ಬೇಸರ ಮೂಡಿಸಿದೆ.
ಹೀಗಿದ್ದಾಗ ಮಹೇಂದ್ರ ಸಿಂಗ್ ಧೋನಿ ಇತ್ತೀಚಿನ ದಿನಗಳಲ್ಲಿ ಲಯ ಕಳೆದುಕೊಂಡು ಬ್ಯಾಟಿಂಗ್ & ಕೀಪಿಂಗ್ ಎರಡರಲ್ಲೂ ಸೋತು ಹೋಗಿದ್ದಾರೆ. ಈ ಕಾರಣಕ್ಕೆ ಇದೀಗ, ಒಟ್ಟು 5394 ರನ್ ಬಾರಿಸಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಿವೃತ್ತಿಗೆ ಒತ್ತಾಯ ಮಾಡಲಾಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕೂಡ ಈ ಕುರಿತು ಚರ್ಚೆ ಜೋರಾಗಿದೆ. ಮಹೇಂದ್ರ ಸಿಂಗ್ ಧೋನಿ ಈ ಸಮಯದಲ್ಲಿ ನಿವೃತ್ತಿ ಪಡೆದರೆ ಒಳ್ಳೆಯದು ಎಂಬ ಸಲಹೆ ಕೂಡ ಕೇಳಿ ಬರ್ತಾ ಇದೆ.












Click it and Unblock the Notifications