Get Updates
Get notified of breaking news, exclusive insights, and must-see stories!

ಗ್ರೌಂಡ್‌ನಲ್ಲಿ ಪಂತ್ ಅಬ್ಬರ, ಗ್ಯಾಲರಿಯಲ್ಲಿ ತಿರುಪತಿ ತಿಮ್ಮಪ್ಪನಿಗೆ ಗೋಯೆಂಕಾ ಪ್ರಾರ್ಥನೆ; ವೈರಲ್

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ 2026ರ 10ನೇ ಪಂದ್ಯದಲ್ಲಿ ಎಸ್‌ಆರ್‌ಎಚ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಎಲ್‌ಎಸ್‌ಜಿ ಗೆಲುವಿನ ಖಾತೆ ತೆರೆದಿದೆ. ಈ ಸಂಭ್ರಮದ ನಡುವೆ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರ ಭಾವನಾತ್ಮಕ ಪ್ರತಿಕ್ರಿಯೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದ್ದು, ಚರ್ಚೆಗೆ ಕಾರಣವಾಗಿದೆ.

ಟಾಸ್‌ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಇಶಾನ್ ಕಿಶನ್ ನಾಯಕತ್ವದ ಸನ್ ರೈಸರ್ಸ್‌ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 156 ರನ್‌ಗಳನ್ನು ಕಲೆಹಾಕಿ ಎಸ್‌ಎಸ್‌ಜಿಗೆ ಸಾಧಾರಣ ಗುರಿ ನೀಡಿತು. ಈ ಗುರಿಯನ್ನು ಲಕ್ನೋ 20 ಓವರ್‌ ಮುಕ್ತಾಯಕ್ಕೆ ಇನ್ನೊಂದು ಬಾಲ್‌ ಇರುವಂತೆ ಮುಟ್ಟಿ ಗೆಲುವಿನ ಖಾತೆ ತೆರೆಯಿತು.

LSG Beat Sunrisers Hyderabad in IPL 2026 Thriller Sanjiv Goenka s Emotional Reaction Goes Viral

ಎಸ್‌ಆರ್‌ಎಚ್‌ ವಿರುದ್ಧ ಎಲ್‌ಎಸ್‌ಜಿ ಗೆಲುವು

ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡ 5 ವಿಕೆಟ್‌ಗಳ ರೋಚಕ ಜಯ ದಾಖಲಿಸಿತು. ನಾಯಕ ರಿಷಬ್ ಪಂತ್ ಅಜೇಯ 68 ರನ್ (50 ಎಸೆತ) ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಬೌಲಿಂಗ್ ವಿಭಾಗದಲ್ಲಿ ಎಲ್‌ಎಸ್‌ಜಿ ಪರ ಮೊಹಮ್ಮದ್ ಶಮಿ 4 ಓವರ್ ಬೌಲಿಂಗ್ ಎಸೆದು ಕೇವಲ 9 ರನ್‌ ನೀಡಿ 2 ವಿಕೆಟ್‌ ಕಬಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಇವರು ಆರಂಭಿಕ ಹಂತದಲ್ಲಿ ಎಸ್‌ಆರ್‌ಎಚ್‌ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಮೂಲಕ ಎದುರಾಳಿ ತಂಡವನ್ನು 156 ರನ್‌ಗಳಿಗೆ ಕಟ್ಟಿಹಾಕುವಲ್ಲಿ ನೆರವಾದರು.

ವೈರಲ್ ಆದ ಗೋಯೆಂಕಾ ಪ್ರತಿಕ್ರಿಯೆ

ಪಂದ್ಯದ ವೇಳೆ ಸಂಜೀವ್ ಗೋಯೆಂಕಾ ಅವರು ಗ್ಯಾಲರಿಯಲ್ಲಿ ಕುಳಿತು ತಂಡವನ್ನು ಹುರಿದುಂಬಿಸುತ್ತಿದ್ದರು. ಈ ವೇಳೆ ಅವರು ನೀಡಿದ ಎರಡು ಪ್ರಮುಖ ಪ್ರತಿಕ್ರಿಯೆಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ. ಪಂದ್ಯದ ಆರಂಭಿಕ ಹಂತದಲ್ಲಿ ಹೈದರಾಬಾದ್ ತಂಡದ ವಿಕೆಟ್‌ಗಳು ಉರುಳುತ್ತಿದ್ದಾಗ, ಗೋಯೆಂಕಾ ಅವರು ತಮ್ಮ ಜೇಬಿನಿಂದ ತಿರುಪತಿ ವೆಂಕಟೇಶ್ವರ ಫೋಟೋ ತೆಗೆದು ಪ್ರಾರ್ಥಿಸುತ್ತಿರುವುದು ಕಂಡುಬಂದಿತು. ಈ ದೃಶ್ಯ ಇದೀಗ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

ಗೋಯೆಂಕಾ ಭಾವನಾತ್ಮಕ ವಿಡಿಯೋ ಭಾರಿ ವೈರಲ್

ರಿಷಬ್ ಪಂತ್ ಆಕ್ರಮಣಕಾರಿ ಆಟ ಆಡಿ ತಂಡದ ಗೆಲುವಿಗೆ ಕಾರಣರಾದಾಗ, ಗೋಯೆಂಕಾ ಅವರು ಅತ್ಯಂತ ಭಾವನಾತ್ಮಕವಾಗಿ ಕಣ್ಣೀರು ಹಾಕುತ್ತಿರುವಂತೆ ಕಂಡುಬಂದಿತು. ಕಳೆದ ಪಂದ್ಯದ ಸೋಲಿನ ನಂತರ ಪಂತ್ ಮತ್ತು ಗೋಯೆಂಕಾ ನಡುವಿನ ಕಟು ಸಂಭಾಷಣೆಯ ವಿಡಿಯೋ ವೈರಲ್ ಆಗಿತ್ತು. ಆದರೆ, ಈ ಬಾರಿ ಗೋಯೆಂಕಾ ಅವರು ಪಂತ್‌ ಅವರನ್ನು ಅಪ್ಪಿಕೊಂಡು ಅಭಿನಂದಿಸಿದ್ದು, ಈ ದೃಶ್ಯ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಮತ್ತೊಂದೆಡೆ, ನೆಟ್ಟಿಗರಿಂದ ಈ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ನೆಟ್ಟಿಗರು ಹೇಳೋದೇನು?

"ಗೋಯೆಂಕಾ ಅವರು ಕೇವಲ ಒಬ್ಬ ಉದ್ಯಮಿಯಲ್ಲ, ಅವರು ಕ್ರಿಕೆಟ್ ಮತ್ತು ತಮ್ಮ ತಂಡದ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಗೆದ್ದಾಗ ಕಣ್ಣೀರು ಹಾಕುವುದು ಅವರ ಪ್ರಾಮಾಣಿಕ ಭಾವನೆಯನ್ನು ತೋರಿಸುತ್ತದೆ," ಎಂದು ಅನೇಕ ಅಭಿಮಾನಿಗಳು ಬೆಂಬಲಿಸಿದ್ದಾರೆ.

ಕಳೆದ ಪಂದ್ಯದಲ್ಲಿ ಪಂತ್ ಮತ್ತು ಗೋಯೆಂಕಾ ನಡುವೆ ನಡೆದ ಕಟು ಸಂಭಾಷಣೆಯ ವಿಡಿಯೋ ವಿವಾದಕ್ಕೆ ಕಾರಣವಾಗಿತ್ತು. ಆದರೆ, ಈ ಪಂದ್ಯದ ನಂತರ ಪಂತ್‌ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡಿದ್ದನ್ನು ನೋಡಿ, "ಇದು ಕ್ರೀಡಾ ಮನೋಭಾವ, ಹಳೆಯ ಕಹಿ ಮರೆತು ತಂಡದ ಗೆಲುವನ್ನು ಸಂಭ್ರಮಿಸುತ್ತಿರುವುದು ಸಂತಸದ ವಿಷಯ," ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟೀಕೆ ಮತ್ತು ಅಸಮಾಧಾನ

ಕೆಲವು ನೆಟ್ಟಿಗರು ಗೋಯೆಂಕಾ ಅವರ ವರ್ತನೆಯನ್ನು ಟೀಕಿಸಿದ್ದಾರೆ. "ಮಾಲೀಕರು ಅತಿಯಾಗಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದು ಹಾಗೂ ಕೋಪ ತೋರಿಸುವುದರಿಂದ ಆಟಗಾರರ ಮೇಲೆ ಒತ್ತಡ ಹೇರಿದಂತಾಗುತ್ತದೆ. ಗೆದ್ದಾಗ ಅಳುವ ಮತ್ತು ಸೋತಾಗ ಆಟಗಾರರನ್ನು ಬೈಯುವ ಸ್ವಭಾವ ಸರಿಯಲ್ಲ. ಸೋಲು, ಗೆಲುವನ್ನ ಸಾಮಾನವಾಗಿ ಸ್ವೀಕಾರ ಮಾಡಬೇಕು ಎಂದು ಇನ್ನೂ ಕೆಲ ನೆಟ್ಟಿಗರು ಹೇಳಿದ್ದಾರೆ. ಒಟ್ಟಿನಲ್ಲಿ ಗೋಯಾಂಕ ಅವರ ಈ ನಡೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆ ಹುಟ್ಟುಹಾಕಿದೆ.

ಕೆಲವರು ಇದು "ಕ್ಯಾಮರಾ ಮುಂದೆ ಮಾಡುವ ಪ್ರದರ್ಶನ" ಎಂದು ಲೇವಡಿ ಮಾಡಿದ್ದಾರೆ. ಆಟಗಾರರಿಗೆ ಮೈದಾನದಲ್ಲಿ ಸ್ವಾತಂತ್ರ್ಯ ನೀಡಬೇಕು ಮತ್ತು ಮಾಲೀಕರು ತೆರೆಯ ಮರೆಯಲ್ಲಿದ್ದರೆ ಚೆಂದ ಅಂತಲೂ ವಾದ ಮಾಡಿದ್ದಾರೆ. ಪಂದ್ಯದ ನಿರ್ಣಾಯಕ ಹಂತದಲ್ಲಿ ಗೋಯೆಂಕಾ ಅವರು ದೇವರ ಫೋಟೋ ಹಿಡಿದು ಪ್ರಾರ್ಥಿಸುತ್ತಿದ್ದ ದೃಶ್ಯಕ್ಕೆ, "ಕ್ರಿಕೆಟ್‌ನಲ್ಲಿ ಪ್ರತಿಭೆಯಷ್ಟೇ ಅದೃಷ್ಟವೂ ಮುಖ್ಯ ಎಂದು ಅವರು ನಂಬಿದ್ದಾರೆ," ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು "ಇದು ಕೇವಲ ಒಂದು ಆಟ, ಇಷ್ಟೊಂದು ಭಾವೋದ್ರೇಕ ಬೇಕಿಲ್ಲ," ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಗೋಯೆಂಕಾ ಅವರ ಈ ನಡೆ ಐಪಿಎಲ್ 2026ರ ಅತ್ಯಂತ ಚರ್ಚಿತ ವಿಷಯಗಳಲ್ಲಿ ಒಂದಾಗಿ ಉಳಿದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+