Lakshya Sen: ಸೆಮಿಫೈನಲ್‌ನಲ್ಲಿ ಸೋತ ಲಕ್ಷ್ಯ ಸೇನ್; ಇನ್ನೂ ಇದೆ ಪದಕ ಗೆಲ್ಲುವ ಅವಕಾಶ
ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿದ ಶಟ್ಲರ್ ಲಕ್ಷ್ಯ ಸೇನ್ ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ್ದಾರೆ. ಈ ಮೂಲಕ ಚಿನ್ನ ಮತ್ತು ಬೆಳ್ಳಿ ಪದಕ ಗೆಲ್ಲುವ ಅವರ ಕನುಸು ಭಗ್ನಗೊಂಡಿದೆ.
ಸೆಮಿಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸೆನ್ 22-20, 21-14 ನೇರ ಸೆಟ್‌ಗಳಿಂದ ಲಕ್ಷ್ಯ ಸೇನ್ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದರು. ಆರಂಭದಲ್ಲಿ ಲಕ್ಷ್ಯ ಸೇನ್ ಅತ್ಯುತ್ತಮ ಪ್ರದರ್ಶನ ನೀಡಿದರೂ ಬಳಿಕ ಒತ್ತಡಕ್ಕೆ ಒಳಗಾದಂತೆ ಕಂಡು ಬಂದಿತು.

ಮೊದಲನೇ ಸೆಟ್ ಗೆಲ್ಲುವ ಸನಿಹದಲ್ಲಿದ್ದ ಅವರು ಬಳಿಕ ಸತತವಾಗಿ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟರು. ಮೊದಲನೇ ಸೆಟ್ ಸೋತ ಬಳಿಕ ಎರಡನೇ ಸೆಟ್‌ನಲ್ಲಿ ಲಕ್ಷ್ಯಸೇನ್ ಉತ್ತಮ ಆರಂಭ ಪಡೆದರು ಒಂದು ಹಂತದಲ್ಲಿ 7-0 ಅಂತರದಲ್ಲಿ ಮುಂದಿದ್ದ ಲಕ್ಷ್ಯ ಸೇನ್ ಬಳಿಕ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟರು. ಅಮೋಘ ಪ್ರದರ್ಶನ ನೀಡಿದ ವಿಕ್ಟರ್ ಆಕ್ಸೆಲ್ಸೆನ್ ಆಕ್ರಮಣಕಾರಿ ಹೊಡೆತಗಳ ಮೂಲಕ ಲಕ್ಷ್ಯ ಸೇನ್‌ರನ್ನು ಒತ್ತಡಕ್ಕೆ ತಳ್ಳಿದರು. ಎರಡು ಸೆಟ್‌ಗಳನ್ನು ಸತತವಾಗಿ ಗೆದ್ದ ವಿಕ್ಟರ್ ಫೈನಲ್‌ಗೆ ಪ್ರವೇಶಿಸಿದರು.
ಕಂಚು ಗೆಲ್ಲುವ ಅವಕಾಶ
ಸೆಮಿಫೈನಲ್‌ನಲ್ಲಿ ಸೋತರೂ ಲಕ್ಷ್ಯಸೇನ್‌ಗೆ ಒಲಿಂಪಿಕ್ ಪದಕ ಗೆಲ್ಲುವ ಅವಕಾಶ ಇನ್ನೂ ಇದೆ. ಕಂಚಿನ ಪದಕಕ್ಕಾಗಿ ಲಕ್ಷ್ಯ ಸೇನ್ ಮತ್ತು ಲೆ ಲಿ ಜಿಯಾ ಹೋರಾಡಲಿದ್ದು, ಈ ಪಂದ್ಯದಲ್ಲಿ ಲಕ್ಷ್ಯ ಸೇನ್ ಗೆದ್ದರೆ ಭಾರತಕ್ಕೆ ಮತ್ತೊಂದು ಪದಕ ಸಿಗಲಿದೆ.












Click it and Unblock the Notifications