RCB vs CSK: ಮೊದಲು ಸುರಿದ ಮಳೆ, ಆರ್‌ಸಿಬಿ ಹರಿಸಿತು ರನ್‌ ಹೊಳೆ: ಬೌಂಡರಿ, ಸಿಕ್ಸರ್‌ಗಳ ಸುರಿಮಳೆ

ಶನಿವಾರ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಐಪಿಎಲ್‌ 2024ರ ಮಹತ್ವದ ಪಂದ್ಯದಲ್ಲಿ ಬೆಂಗಳೂರು ತಂಡದ ಬ್ಯಾಟರ್‌ಗಳು ಅಬ್ಬರಿಸಿದ್ದಾರೆ. ಫಾಫ್‌ ಡುಪ್ಲೇಸಿಸ್‌ ಅರ್ಧಶತಕ ಬಾರಿಸಿ ಮಿಂಚಿದರೆ, ವಿರಾಟ್ ಕೊಹ್ಲಿ, ರಜತ್‌ ಪಟಿದಾರ್‌ ಭರ್ಜರಿ ಕಾಣಿಕೆ ನೀಡಿ ತಂಡಕ್ಕೆ ನೆರವಾದರು. ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 218 ರನ್‌ ಸೇರಿಸಿತು.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಭರ್ಜರಿ ಆರಂಭವನ್ನು ಪಡೆಯಿತು. ಈ ಪಂದ್ಯದ ಆರಂಭಕ್ಕೆ ಮಳೆ ಅಡ್ಡಿ ಪಡಿಸಿತು. ಆದರೆ ಬೆಂಗಳೂರು ತಂಡದ ಬ್ಯಾಟರ್‌ಗಳ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಅಂಗಳದಲ್ಲಿ ಬೌಂಡರಿ ಸಿಕ್ಸರ್‌ಗಳ ಸುರಿ ಮಳೆ ಗೈದರು.

Kohli and Patidar Miss Half-Centuries as RCB Posts 218 5 against CSK

ಭರ್ಜರಿ ಆರಂಭ ಪಡೆದ ಆರ್‌ಸಿಬಿ ತಂಡದ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್‌ ಡುಪ್ಲೇಸಿಸ್ ಜೋಡಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿತು. ಈ ಜೋಡಿ ಸಿಎಸ್‌ಕೆ ತಂಡದ ಬೌಲರ್‌ಗಳ ಸವಾಲನ್ನು ಮೆಟ್ಟಿನಿಂತು ರನ್‌ ಕಲೆ ಹಾಕುತ್ತಾ ಸಾಗಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಮಿಚೆಲ್‌ ಸ್ಯಾಂಟ್ನರ್‌ ಸಫಲರಾದರು. ವಿರಾಟ್ ಕೊಹ್ಲಿ ಪಂದ್ಯದ 9.4ನೇ ಓವರ್‌ನಲ್ಲಿ ಲಾಂಗ್‌ ಆನ್‌ ನಲ್ಲಿ ಸಿಕ್ಸರ್‌ ಬಾರಿಸಲು ಹೋಗಿ ಡ್ಯಾರಿಲ್‌ ಮಿಚೆಲ್‌ಗೆ ಕ್ಯಾಚ್‌ ನೀಡಿದರು. ಮಿಚೆಲ್‌ ಸೊಗಸಾದ ಕ್ಯಾಚ್‌ ಹಿಡಿದು ಮಿಂಚಿದರು. ವಿರಾಟ್ ಕೊಹ್ಲಿ ಔಟ್ ಆಗುವ ಮುನ್ನ 29 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 47 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು.

ಭರ್ಜರಿ ಅರ್ಧಶತಕ

ಆರ್‌ಸಿಬಿ ತಂಡದ ನಾಯಕ ಫಾಫ್‌ ಡುಪ್ಲೇಸಿಸ್‌ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 39 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 54 ರನ್‌ ಸಿಡಿಸಿ, ದುರಾದಷ್ಟವಶಾತ ರನೌಟ್‌ ಆದರು.

ಮನಮೋಹಕ ಇನ್ನಿಂಗ್ಸ್‌

ಐಪಿಎಲ್‌ 2024ರಲ್ಲಿ ಅಬ್ಬರದ ಆಟಕ್ಕೆ ಹೆಸರುವಾಸಿಯಾಗಿರುವ ರಜತ್ ಪಟಿದಾರ್‌ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಕೇವಲ 23 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್‌ ಸಹಾಯದಿಂದ 41 ರನ್ ಬಾರಿಸಿ ಔಟ್ ಆದರು.

Kohli and Patidar Miss Half-Centuries as RCB Posts 218 5 against CSK

ಮಧ್ಯಮ ಕ್ರಮಾಂಕದಲ್ಲಿ ಭರವಸೆಯ ಆಟಗಾರ ಕ್ಯಾಮರೂನ್‌ ಗ್ರೀನ್‌ ಸೊಗಸಾದ ಆಟದ ಪ್ರದರ್ಶನ ನೀಡಿದರು. ಇವರು 17 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 38 ರನ್‌ ಸಿಡಿಸಿ ತಂಡಕ್ಕೆ ನೆರವಾದರು. ದಿನೇಶ್‌ ಕಾರ್ತಿಕ್‌ 14, ಗ್ಲೇನ್‌ ಮ್ಯಾಕ್ಸ್‌ವೆಲ್‌ 16 ರನ್‌ ಬಾರಿಸಿ ತಂಡಕ್ಕೆ ನೆರವಾದರು.

ಸಿಎಸ್‌ಕೆ ತಂಡದ ಪರ ಶಾರ್ದೂಲ್ ಠಾಕೂರ್‌ 2, ತುಷಾರ್ ದೇಶಪಾಂಡೆ, ಮಿಚೆಲ್ ಸ್ಯಾಂಟ್ನರ್‌ ತಲಾ ಒಂದು ವಿಕೆಟ್‌ ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+