King with Princess: ಅಮ್ಮ ಮಗನೊಂದಿಗೆ ಅಪ್ಪ ಮಗಳೊಂದಿಗೆ ಎಂದ ವಿರಾಟ್ ಕೊಹ್ಲಿ ಫ್ಯಾನ್ಸ್
ಲಂಡನ್ನ ಕೆಫೆಯೊಂದರಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಪುತ್ರಿ ವಾಮಿಕಾ ಕೊಹ್ಲಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ಫೋಟೋದಲ್ಲಿ ವಾಮಿಕಾ ಹಾಗೂ ವಿರಾಟ್ ಕೊಹ್ಲಿ ಇಬ್ಬರು ಊಟ ಮಾಡುತ್ತಿರುವುದು ಕಾಣಬಹುದು.
ವಿರಾಟ್ ಕೊಹ್ಲಿ ಹಾಗೂ ಮಗಳು ವಾಮಿಕಾ ಇಬ್ಬರು ಜೊತೆಯಲ್ಲಿ ಕುಳಿತು ಊಟ ಮಾಡುತ್ತಿರುವ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಕಿಂಗ್ ಜೊತೆ ಪ್ರಿನ್ಸಸ್ ಎಂದು ಕರೆಯುವ ಮೂಲಕ ಖುಷಿ ಪಟ್ಟಿದ್ದಾರೆ. ಜೊತೆಗೆ ಅಮ್ಮ ಮಗನೊಂದಿಗೆ ಅಪ್ಪ ಮಗಳೊಂದಿಗೆ ಎಂದು ಕರೆದಿದ್ದಾರೆ.

ಸದ್ಯ ಅನುಷ್ಕಾ ಶರ್ಮಾ ಮನೆಯಲ್ಲಿ ಸಂತಸದ ವಾತಾವರಣವಿದೆ. ನಟಿ ಇತ್ತೀಚೆಗೆ ಮಗನಿಗೆ ಜನ್ಮ ನೀಡಿದ್ದಾರೆ. ಅನುಷ್ಕಾ ಲಂಡನ್‌ನಲ್ಲಿ ಮಗನಿಗೆ ಜನ್ಮ ನೀಡಿದರೆ ಅವರ ಇಡೀ ಕುಟುಂಬ ಅವರೊಂದಿಗಿದೆ. ಈ ನಡುವೆ ಇತ್ತೀಚೆಗಷ್ಟೇ ಲಂಡನ್‌ನಿಂದ ವಿರಾಟ್ ಕೊಹ್ಲಿಯ ಮತ್ತೊಂದು ಫೋಟೋ ವೈರಲ್ ಆಗುತ್ತಿದ್ದು, ಇದರಲ್ಲಿ ತಂದೆ-ಮಗಳು ಊಟ ಮಾಡುತ್ತಿರುವುದು ಕಂಡು ಬಂದಿದೆ. ವಾಮಿಕಾ ಮತ್ತು ವಿರಾಟ್ ರೆಸ್ಟೋರೆಂಟ್ ಒಂದರಲ್ಲಿ ಕುಳಿತಿರುವ ಫೋಟೋ ವೈರಲ್ ಆಗಿದೆ.
ಮಗನನ್ನು ಅನುಷ್ಕಾ ಶರ್ಮಾ ನೋಡಿಕೊಳ್ಳುತ್ತಿದ್ದರೆ, ಮಗಳು ವಾಮಿಕಾಳನ್ನು ವಿರಾಟ್ ನೋಡಿಕೊಳ್ಳುತ್ತಿದ್ದಾರೆ. ಈ ತಂದೆ-ಮಗಳ ಬಾಂಧವ್ಯವನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ. ತಂದೆ ಮಗಳನ್ನು ಅವರಿಬ್ಬರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ತುಂಬಾ ಸಂತೋಷಪಟ್ಟಿದ್ದಾರೆ. ಅಲ್ಲದೆ ವಾಮಿಕಾಳನ್ನು ನೋಡಿ ಜನ ಎಷ್ಟು ಬೇಗ ಬೆಳೆದಿದ್ದಾಳೆ ಎನ್ನುತ್ತಿದ್ದಾರೆ.

ವೈರಲ್ ಆಗುತ್ತಿರುವ ಫೋಟೋದಲ್ಲಿ ವಿರಾಟ್ ಮತ್ತು ವಾಮಿಕಾ ರೆಸ್ಟೋರೆಂಟ್‌ನಲ್ಲಿ ಕುಳಿತು ಆಹಾರ ಸೇವಿಸುತ್ತಿದ್ದಾರೆ. ಇಬ್ಬರೂ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಕಿಂಗ್ ವಿತ್ ಪ್ರಿನ್ಸೆಸ್ ಎಂದು ಕೆಲವರು ಹೇಳಿದರೆ ಮತ್ತೂ ಕೆಲವರು ವಾಮಿಕಾ ಮತ್ತು ವಿರಾಟ್ ಕೊಹ್ಲಿಯ ಸುಂದರವಾದ ಫೋಟೋ ಇದು ಎಂದು ಖುಷಿ ಪಟ್ಟಿದ್ದಾರೆ.
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿಗೆ ಫೆಬ್ರವರಿ 15 ರಂದು ಮಗನ ಜನನವಾಗಿದೆ. ಅವರು ತಮ್ಮ ಮಗನ ಜನನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ. ' ಫೆಬ್ರವರಿ 15 ರಂದು ನಾವು ನಮ್ಮ ಮಗ ಅಕಾಯ್ ಹಾಗೂ ವಾಮಿಕಾ ಅವರ ಕಿರಿಯ ಸಹೋದರನನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ಎಲ್ಲರಿಗೂ ಹೇಳಲು ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಜೀವನದ ಈ ಸುಂದರ ಕ್ಷಣದಲ್ಲಿ ನಿಮ್ಮ ಪ್ರಾರ್ಥನೆ ಮತ್ತು ಶುಭ ಹಾರೈಕೆಗಳನ್ನು ನಾವು ಬಯಸುತ್ತೇವೆ. ದಯವಿಟ್ಟು ಈ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸುವಂತೆ ನಾವು ವಿನಂತಿಸುತ್ತೇವೆ' ಎಂದು ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು.
ಕೆಲಸದ ಮುಂಭಾಗದ ಬಗ್ಗೆ ಮಾತನಾಡುವುದಾದರೆ, ಅನುಷ್ಕಾ ಶರ್ಮಾ ಶಾರುಖ್ ಖಾನ್ ಅವರೊಂದಿಗೆ ಝೀರೋ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಈ ಚಿತ್ರದ ನಂತರ ಅವರು ನಟನೆಯಿಂದ ವಿರಾಮ ತೆಗೆದುಕೊಂಡರು. ಅದರ ನಂತರವೇ ಅನುಷ್ಕಾ ಮಗಳು ವಾಮಿಕಾಗೆ ಜನ್ಮ ನೀಡಿದರು. ಝೀರೋ ಚಿತ್ರದ ನಂತರ ಅನುಷ್ಕಾ ಸಿನಿಮಾಕ್ಕೆ ಕಮ್ ಬ್ಯಾಕ್ ಮಾಡಿಲ್ಲ.












Click it and Unblock the Notifications