Kiccha Sudeep: ಕ್ಯಾತೆ ತೆಗೆದ ತಮಿಳುನಾಡಿನಲ್ಲೇ ಕನ್ನಡ ಬಾವುಟ ಹಾರಿಸಿದ ನಟ ಕಿಚ್ಚ ಸುದೀಪ್
Kiccha Sudeep: ಅಭಿನಯ ಚಕ್ರವರ್ತಿ ಸುದೀಪ್ ಬೇರೆ ಭಾಷೆಯಲ್ಲಿ ಸಿನಿಮಾಗಳನ್ನು ಮಾಡಬಹುದು. ಆದರೆ, ಕರ್ನಾಟಕ ನೆಲ, ಜಲ, ಭಾಷೆ ಅಂತಾ ಬಂದ್ರೆ ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಹಾಗೆಯೇ ಇದೀಗ ಅವಮಾನ ಆದ ಜಾಗ ತಮಿಳುನಾಡಿನಲ್ಲೇ ಕನ್ನಡ ಬಾವುಟ ಹಾರಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ.
ಹೌದು.. ನಟ ಕಿಚ್ಚ ಸುದೀಪ್ ಅವರು ನಮ್ಮ ನೆಲ, ಜಲ, ಭಾಷೆ ಕುರಿತು ವಿಶೇಷ ಪ್ರೀತಿ, ಅಭಿಮಾನವನ್ನು ಹೊಂದಿದ್ದಾರೆ. ಕರ್ನಾಟಕಕ್ಕೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಅವಮಾನ ಆದರೂ ಅದನ್ನು ಅರು ಸಹಿಸುವುದಿಲ್ಲ. ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಕನ್ನಡವನ್ನು ಕನ್ನಡ್ ಎಂದು ಪರಭಾಷಿಗರು ಹೇಳಿದಾಗ ಅದನ್ನು ತಿದ್ದು ಕೆಲಸ ಮಾಡಿದ್ದರು. ಹಾಗೆಯೇ ಇದೀಗ ಕನ್ನಡ ಬಾವುಟಕ್ಕೆ ಅವಮಾನ ಆದ ಜಾಗದಲ್ಲೇ ನಮ್ಮ ಬಾವುಟ ಹಾರಿಸಿ ಗಮನ ಸೆಳದಿದ್ದಾರೆ.

ಕನ್ನಡ ಬಾವುಟ ತೆಗೆಸಿದ್ದ ತಮಿಳಿಗರು: ಶಬರಿಮಲೆಗೆ ತೆರಳುವ ಮಾರ್ಗದಲ್ಲಿ ಕರ್ನಾಟಕದಿಂದ ತೆರಳುವ ಮಾಲಾಧಾರಿಗೆಳಿಗೆ ಸಮಸ್ಯೆ ಮಾಡಲಾಗಿತ್ತು. ಕರ್ನಾಟಕದ ಬಾವುಟ ಹೊಂದಿರುವ ವಾಹನಗಳಿಗೆ ಅಡ್ಡಗಟ್ಟಿ ಬಾವುಟಗಳನ್ನು ತೆಗೆಸಲಾಗಿತ್ತು. ಇಂತಹ ಘಟನೆಗಳು ಆಗಾಗ ನಡೆಯುತ್ತಲಿದ್ದು, ಇದನ್ನು ಕಂಡಿಸುವ ಕೆಲಸಗಳು ನಡೆಡಿವೆ. ಆದರೂ ಸಹ ತಮಿಳುನಾಡಿನಲ್ಲಿ ಕನ್ನಡ ಬಾವುಟಕ್ಕೆ ತಮಿಳಿಗರು ಅವಮಾನ ಮಾಡಿದ ಆರೋಪ ಕೇಳಿಬಂದಿದ್ದವು.
ತಮಿಳುನಾಡಿಲ್ಲಿ ಕರ್ನಾಟಕದ ಧ್ವಜ ಹಾರಾಟ: ಇನ್ನೂ ಇದೀಗ ಇತ್ತೀಚಿಗೆ ತಮಿಳುನಾಡಿನಲ್ಲಿ ಅಪಮಾನಕ್ಕೆ ಒಳಗಾದ ಅದೇ ಸ್ಥಳದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಬಾಸ್ ಕರ್ನಾಟಕ ಧ್ವಜವನ್ನು ಎತ್ತಿ ಹಿಡಿದಿದ್ದಾರೆ. ಈ ಮೂಲಕ ತಮಿಳಿಗರಿಗೆ ತಿರುಗೇಟು ನೀಡುವ ಕೆಲಸವನ್ನು ಮಾಡಿದ್ದಾರೆ.
ಈ ಘಟನೆ ನಡೆದ ಕೆಲವೇ ವಾರದಲ್ಲಿ ಸುದೀಪ್ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಅವಮಾನ ಆದ ಜಾಗದಲ್ಲೇ ಕನ್ನಡದ ಬಾವುಟ ಹಾರಿಸಿದ್ದಾರೆ. ಜನವರಿ 25ರಂದು ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಭೋಜ್ಪುರಿ ದಬಾಂಗ್ ತಂಡಗಳ ನಡುವೆ ಪಂದ್ಯ ನಡೆದಿದೆ. ಈ ಪಂದ್ಯ ತಮಿಳುನಾಡಿನ ಕೊಯಿಮತ್ತೂರಿನಲ್ಲಿ ನಡೆದಿದ್ದು, ಪಂದ್ಯ ಮುಗಿದ ನಂತರ ಸುದೀಪ್ ಕನ್ನಡ ಬಾವುಟ ಹಾರಿಸಿ ಗಮನ ಸೆಳದಿದ್ದಾರೆ.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ 12ನೇ ಆವೃತ್ತಿ ಆರಂಭ ಆಗಿದೆ. ಕಿಚ್ಚ ಸುದೀಪ್ ನೇತೃತ್ವದ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿದ 3 ಪಂದ್ಯಗಳನ್ನು ಗೆದ್ದ ಕರ್ನಾಟಕ ಬುಲ್ಡೋಜರ್ಸ್ ಸೆಮಿಫೈನಲ್ ಪ್ರವೇಶ ಮಾಡಿದೆ. ಈ ಮೂಲಕ ಕರ್ನಾಟಕ ಬುಲ್ಡೋಜರ್ಸ್ 12 ವರ್ಷಗಳ ನಂತರ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ. ಈ ಬಾರಿಯ ಸಿಸಿಎಲ್ ಟೂರ್ನಿಯಂತೂ ಭಾರೀ ಅಭಿಮಾನಿಗಳಿಗೆ ಭಾರೀ ಮನರಂಜನೆ ನೀಡುತ್ತಿದೆ.
ಈ ನಡುವೆಯೇ ತಮಿಳುನಾಡಿನಲ್ಲಿ ಕಿಚ್ಚ ಸುದೀಪ್ ಅವರು ಕನ್ನಡ ಬಾವುಟ ಹಾರಾಡಿಸಿದ್ದು, ಇದರಿಂದ ಕನ್ನಡ ಅಭಿಮಾನಿಗಳು ಸಂತೋಷಗೊಂಡಿದ್ದಾರೆ. ಕೆಲವು ವಾರಗಳ ಹಿಂದೆ ಶಬರಿಮಲೆಗೆ ಹೋಗುವ ಭಕ್ತರ ವಾಹನಗಳಲ್ಲಿದ್ದ ಕನ್ನಡ ಬಾವುಟಗಳನ್ನು ತೆಗೆಸಿ ಅವಮಾನ ಮಾಡಲಾಗಿತ್ತು. ಇದೀಗ ಅದೇ ತಮಿಳುನಾಡಿನ ನೆಲದಲ್ಲಿ ನಿಂತು ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಸುದೀಪ್ ಕನ್ನಡ ಬಾವುಟ ಹಾರಿಸಿ ಕನ್ನಡ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದ್ದಾರೆ.
ಇತ್ತೀಚಿಗೆ ತಮಿಳುನಾಡಿನಲ್ಲಿ ಅಪಮಾನಕ್ಕೊಳಗಾದ ಅದೇ ಸ್ಥಳದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಬಾಸ್ ಕರ್ನಾಟಕ ಧ್ವಜವನ್ನು ಎತ್ತಿ ಹಿಡಿದಿದ್ದಾರೆ..🔥💛❤️🌟
— Kichchana Hudugaru Jayanagara (@Team_KHJ_) January 25, 2026
Pride of Kannada Cenima ❤️🔥@KicchaSudeep 👑#KicchaSudeep #KarnatakaBulldozers #CCL2026 #BRBFirstBlood #CCL pic.twitter.com/OZjgVnHulq
ಕಳೆದ ಕೆಲವು ವರ್ಷಗಳಿಂದ ತಮಿಳುನಾಡು ಮಾರ್ಗದ ಮೂಲಕ ಶಬರಿಮಲೆಗೆ ಪ್ರಯಾಣ ಮಾಡುತ್ತಿದ್ದ ಭಕ್ತರ ವಾಹನಗಳ ಮೇಲೆ ಕನ್ನಡ ಧ್ವಜಗಳನ್ನು ಹಾರಿಸುವುದಕ್ಕೆ ಕೆಲವು ತಮಿಳುಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪ್ರಯಾಣ ಮಾಡುತ್ತಿದ್ದ ಟಿಟಿ ವಾಹನದ ಮೇಲೆ ಇದ್ದ ಕನ್ನಡ ಬಾವುಟವನ್ನು ಬಿಚ್ಚಿಸುವಂತೆ ಹೇಳಿ ಕಿರಿಕ್ ಮಾಡಿದ್ದರು.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು?












Click it and Unblock the Notifications