Get Updates
Get notified of breaking news, exclusive insights, and must-see stories!

ಐರ್ಲೆಂಡ್‌ ಟಿ-20 ವಿಶ್ವಕಪ್‌ ಕ್ರಿಕೆಟ್‌‌ ಜೆರ್ಸಿಯಲ್ಲಿ ಮಿಂಚುತ್ತಿರುವ ನಮ್ಮ ಕನ್ನಡದ ಪ್ರಸಿದ್ಧ "ನಂದಿನಿ" ಬ್ರಾಂಡ್‌

Nandini Brand: ನಂದಿನಿ ಕರ್ನಾಟಕದ ಹೆಮ್ಮೆಯ ಉತ್ನನ್ನವಾಗಿದ್ದು, ಮೊದಲು ಇದರ ರಾಯಭಾರಿಯಾಗಿ ಡಾ.ಪುನೀತ್ ರಾಜ್‌ಕುಮಾರ್ ಇದ್ದರು. ಬಳಿಕ ಇದರ ಜವಾಬ್ದಾರಿಯನ್ನು ನಟ ಶಿವರಾಜ್‌ ಕುಮಾರ್ ವಹಿಸಿಕೊಂಡಿದ್ದಾರೆ.

ಇದೀಗ ಇನ್ನೂ ಕಲವೇ ದಿನಗಳಲ್ಲಿ ಟಿ-20 ವಿಶ್ವಕಪ್ ವಿಶಕ್ವಕಪ್‌‌ ನಡೆಯಲಿರುವ ಹಿನ್ನೆಲೆ ಬಹುತೇಕ ತಂಡಗಳು ಅತ್ಯಾಕರ್ಷಕ ಜೆರ್ಸಿಯನ್ನು ಬಿಡುಗಡೆ ಮಾಡಿವೆ. ಅದರಲ್ಲೂ ಐರ್ಲೆಂಡ್ ತಂಡವು ಕರ್ನಾಟಕದ ಪ್ರಸಿದ್ಧ ನಂದಿನಿ ಬ್ರಾಂಡ್‌ವುಳ್ಳ ಲೋಗೋವನ್ನು ತಮ್ಮ ಜೆರ್ಸಿಯಲ್ಲಿ ಹೊಂದಿರುವುದು ತುಂಬಾ ವಿಶೇಷವಾಗಿದೆ.

Karnataka s famous brand Nandini logo in Ireland t-20 world cup men Cricket Jersey

ಜೂನ್‌ನಲ್ಲಿ ಆರಂಭವಾಗುವ ಟಿ-20 ವಿಶ್ವಕಪ್‌ಗೆ ಐರ್ಲೆಂಡ್‌ ಪುರುಷರ ಕ್ರಿಕೆಟ್‌ ತಂಡಕ್ಕೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ನಂದಿನಿ ಬ್ರಾಂಡ್‌ ಪ್ರಾಯೋಜಕತ್ವ ವಹಿಸಿದೆ. ಈ ಬಗ್ಗೆ ಕ್ರಿಕೆಟ್‌ ಐರ್ಲೆಂಡ್‌ ಸೋಮವಾರ (ಮೇ 20) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಘೋಷಣೆ ಮಾಡಿದೆ. "ವೆಲ್‌ಕಂ ನಂದಿನಿ," ಎಂದು ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ. ಅಲ್ಲದೆ, ಜೆರ್ಸಿ ಮೇಲೆ ನಂದಿನಿ ಲೋಗೋ ಇರುವ ಚಿತ್ರವನ್ನೂ ಪ್ರದರ್ಶನ ಮಾಡಿದ್ದು, ಇದೀಗ ಈ ವಿಚಾರ ಎಲ್ಲೆಡೆ ವೈರಲ್‌ ಆಗುತ್ತಿದೆ.

"ಕರ್ನಾಟಕ ಹಾಲು ಒಕ್ಕೂಟವನ್ನು ಹೊಸ ಪಾಲುದಾರರಾಗಿ ಸ್ವಾಗತಿಸಲು ನಮಗೆ ಸಂತೋಷ ಆಗುತ್ತಿದೆ. ಟಿ-20 ವಿಶ್ವಕಪ್‌ ಐರ್ಲೆಂಡ್‌ ಪುರುಷರ ತಂಡದ ಅಧಿಕೃತ ಪ್ರಾಯೋಜಕರಾಗಿ ನಂದಿನಿಯನ್ನು ಘೋಷಿಸಲು ಸಂತೋಷ ಆಗುತ್ತಿದೆ" ಎಂದು ಕ್ರಿಕೆಟ್‌ ಐರ್ಲೆಂಡ್‌ ಮುಖ್ಯ ಹಣಕಾಸು ಅಧಿಕಾರಿ ಆಂಡ್ರೋ ಮೇ ಹೇಳಿದ್ದಾರೆ. ಇದೀಗ ಇದೇ ವಿಚಾರ ಇಡೀ ವಿಶ್ವದ ಗಮನ ಸೆಳೆದಿದೆ.

ವೀಕ್ಷಕರ ಸಂಖ್ಯೆ 50 ಕೋಟಿ: ವಿಶ್ವದಲ್ಲೇ ಅತ್ಯಂತ ಶ್ರೀಮಂತ ಲೀಗ್‌ ಅಂದರೆ ಐಪಿಎಲ್ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಮಾತ್ರ. ಅದರಲ್ಲೂ ಆರ್‌ಸಿಬಿ ಇದುವರೆಗೂ ಒಂದು ಕಪ್‌ ಗೆಲ್ಲದಿದ್ದರೂ ಕೂಡ ವಿಶ್ವಾದಾದ್ಯಂತ ಎಲ್ಲಾ ಟೀಂಗಳಿಗಿಂತಲೂ ಅಪಾರ ಅಭಿಮಾನಿ ಬಳಗವನ್ನೇ ಹೊಂದಿದೆ. ಇನ್ನು ಯಾವುದೇ ಟೀಂಗಳ ಮೇಲೆ ಆರ್‌ಸಿಬಿ ಬಿದ್ದರೆ, ಈ ಪಂದ್ಯವನ್ನು ಅತೀ ಹೆಚ್ಚು ವೀಕ್ಷಣೆ ಮಾಡಿರುವ ದಾಖಲೆಗಳಿವೆ. ಹಾಗೆಯೇ ನಿನ್ನೆ (ಮೇ 18) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ನಡೆದ ಆರ್‌ಸಿಬಿ ಪಂದ್ಯವನ್ನು ಜಿಯೋ ಸಿನಿಮಾದಲ್ಲೇ ದಾಖಲೆ ಮಟ್ಟದಲ್ಲಿ ವೀಕ್ಷಣೆ ಮಾಡಿದ್ದಾರೆ.

ಒಂದು ಬಾರಿಯೂ ಕಪ್‌ ಗೆಲ್ಲದಿದ್ದರೂ ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಟೀಂ ಆರ್‌ಸಿಬಿ ಆಗಿದೆ. ಬರೀ ಬೆಂಗಳೂರು, ಕರ್ನಾಟಕ, ಭಾರತ ಅಲ್ಲದೇ, ವಿದೇಶಗಳಲ್ಲೂ ಕೂಡ ಅಭಿಮಾನಿಗಳನ್ನು ಆರ್‌ಸಿಬಿ ಹೊಂದಿದೆ. ಅದರಲ್ಲೂ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಮ್ಯಾಚ್‌ ಇದ್ದರೆ ಸಾಕು ಮನೆ, ಕಂಪನಿ, ರೆಸ್ಟೋರೆಂಟ್‌ಗಳಲ್ಲಿ ಟಿವಿಗಳು ಮಾತ್ರವಲ್ಲದೇ, ಜಿಯೋ ಸಿನಿಮಾದಲ್ಲೇ ಅತೀ ಹೆಚ್ಚು ಜನ ವೀಕ್ಷಣೆ ಮಾಡುತ್ತಾರೆ.

ಇನ್ನು ನಿನ್ನೆ (ಮೇ 18) ತವರು ಅಂಗಳ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡ ಸಿಎಸ್‌ಕೆ ವಿರುದ್ಧ ಗೆದ್ದು ಗೆಲುವಿನ ನಗೆ ಬೀರಿ ಪ್ಲೇ ಆಫ್‌ಗೆ ಕ್ವಾಲಿಫೈ ಆದಾಗ, ಜಿಯೋ ಸಿನಿಮಾದಲ್ಲಿ ಪಂದ್ಯ ವೀಕ್ಷಕರ ಸಂಖ್ಯೆ 50,00,00,000ಗೂ ಹೆಚ್ಚು ಇದ್ದು, ಇದು ಈ ಸೀಸನ್‌ನಲ್ಲಿ ದಾಖಲೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ‌‌

ಆರ್‌ಸಿಬಿ ಎಷ್ಟೇ ಬಾರೀ ಸೋತರೂ ಕೂಡ ತುಂಬಾ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದೆ. ಗೆಲುವೇ ಇರಲಿ, ಸೋಲೇ ಇರಲಿ ಈ ಅಭಿಮಾನಿಗಳು ತಮ್ಮ ತಂಡದ ಪರವಾಗಿಯೇ ನಿಲ್ಲುತ್ತಾರೆ. ಅದಕ್ಕೆ ಹೇಳೋದು ಈ ಅಭಿಮಾನಿಗಳ ಅಭಿಮಾನಕ್ಕೆ ಯಾರೂ ಸರಿಸಾಟಿಯೇ ಇಲ್ಲ ಅಂತಾ.

ಯಾವ ಮೈದಾನದಲ್ಲಿ ಆರ್‌ಸಿಬಿ ತಂಡದ ಪಂದ್ಯ ಇರುತ್ತದೆಯೋ ಆ ಮೈದಾನದ ಮೆರಗು ತುಸು ಹೆಚ್ಚಾಗುತ್ತದೆ. ಅಲ್ಲದೆ, ಆ ತಂಡದಲ್ಲಿ ಯಾರೂ ಆಡಿದರೂ ಕೂಡ ಅವರಿಗೆ ಅಪಾರ ಅಭಿಮಾನವನ್ನು ತೋರಿಸುವುದೇ ವಿಶೇಷವಾಗಿರುತ್ತದೆ. ಆದ್ದರಿಂದಲೇ ವಿದೇಶದವರೆಗೂ ಆರ್‌ಸಿಬಿಗೆ ಇದ್ದಷ್ಟು ಅಭಿಮಾನಿಗಳ ಬಳಗ ಯಾವ ಟೀಂಗೂ ಇಲ್ಲ ಅನ್ನೋದು. ಇನ್ನು ನಿನ್ನೆ (ಮೇ 18) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ ಮತ್ತು ಆರ್‌ಸಿಬಿ ಪಂದ್ಯ ನಡೆದಿದ್ದು, ಇದನ್ನು ವೀಕ್ಷಿಸಲು ಅಪಾರ ಅಭಿಮಾನಿಗಳ ಬಳಗವೇ ಸೇರಿತ್ತು.

ಅದರಲ್ಲೂ ತವರು ಮೈದಾನವಾದ M.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದಾಗ ಟಿಕೆಟ್‌ಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಬಹುತೇಕ ಜನರು ಟಿಕೆಟ್‌ ಸಿಗದೇ ಮನೆಗೆ ತೆರಳಿ ಟಿವಿ, ಫೋನ್‌ಗಳಲ್ಲೇ ಹೆಚ್ಚಾಗಿ ವೀಕ್ಷಣೆ ಮಾಡಿದ ಘಟನೆಗಳು ನಡೆದಿವೆ. ಈ ಋತುವಿನ RCB ಪಂದ್ಯಗಳು ನಡೆದ ಸಮಯದಲ್ಲಿ IPLನ ಲೈವ್ ಸ್ಟ್ರೀಮಿಂಗ್ ಪಾಲುದಾರರಾದ JioCinemaನಲ್ಲಿ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ ಎನ್ನುವ ಅಂಕಿಅಂಶಗಳು ಹೊರಬಿದ್ದಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+