ಇದು ಕನ್ನಡಿಗರು ಹೆಮ್ಮೆ ಪಡುವ ಸುದ್ದಿ: ಅದೇನು ಗೊತ್ತಾ?

ಐಟಿ ಉದ್ಯೋಗದಲ್ಲಿ, ವಿದ್ಯಾರ್ಥಿಗಳ ಓದಿನಲ್ಲಿ, ಆರ್ಥಿಕ ಶಿಸ್ತಿನ ವಿಚಾರದಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿ. ಇದೀಗ, ಕ್ರೀಡಾ ವಿಚಾರದಲ್ಲೂ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕನ್ನಡಿಗರು ಮಿಂಚುತ್ತಿದ್ದಾರೆ. ಅಷ್ಟಕ್ಕೂ ಗೋವಾದಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳು ತಮ್ಮ ಅಬ್ಬರ ಮುಂದುವರಿಸಿದ್ದಾರೆ.

ಗೋವಾದ ಫಟೋರ್ಡಾದ ಮೈದಾನದಲ್ಲಿ ನಡೆಯುತ್ತಿರುವ, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡದ ಟೆನಿಸ್ ಆಟಗಾರರು ತಮ್ಮ ಅಬ್ಬರ ಮುಂದುರಿಸಿದ್ದಾರೆ. ಕರ್ನಾಟಕದ ಪುರುಷರ ಡಬಲ್ಸ್ ತಂಡ ಮತ್ತು ಮಿಕ್ಸೆಡ್ ಡಬಲ್ಸ್ ತಂಡಗಳು ಭರ್ಜರಿ ಆಟ ಪ್ರದರ್ಶಿಸಿವೆ. ಈ ಮೂಲಕ ಅದ್ಧೂರಿಯಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ ಕರ್ನಾಟಕದ ಟಿನಿಸ್ ಟೀಂ ಆಟಗಾರರು. ಈಗಾಗಲೇ 14 ಚಿನ್ನ, 10 ಬೆಳ್ಳಿ, 09 ಕಂಚು ಸೇರಿದಂತೆ ಒಟ್ಟು 33 ಪದಕ ಬಾಚಿಕೊಂಡಿರುವ ಕರ್ನಾಟಕ ತಂಡದ ಕ್ರೀಡಾಪಟುಗಳು. 37ನೇ ರಾಷ್ಟ್ರೀಯ ಕ್ರೀಡಾಕೂಟ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಇದ್ದಾರೆ. ಇದರ ಜೊತೆಗೆ ಟೆನಿಸ್ ವಿಭಾಗದಲ್ಲಿ ಕೂಡ ಕನ್ನಡಿಗರ ಅಬ್ಬರ ಮುಂದುವರಿದಿದೆ.

Karnataka State Tennis Players Continues Their Glory At National Games 2023 Medal Tally

ಹೇಗಿತ್ತು ಕನ್ನಡಿಗರ 'ಟೆನಿಸ್' ಬೇಟೆ?

ಎಸ್‌ಡಿ ಪ್ರಜ್ವಲ್ ದೇವ್ ಹಾಗೂ ಆದಿಲ್ ಕಲ್ಯಾಣಪುರ್ ಜೋಡಿಯು ಗೋವಾದ ಜೋಡಿಯಾದ ಕ್ರಿಸ್ಟೋಫರ್ ಮಾರ್ಕ್ವಿಸ್ & ತೇಜಸ್ ಶೆವ್ಡೆ ಅವರನ್ನ 6-2, 6-1 ನೇರ ಸೆಟ್‌ಗಳಿಂದ ಮಣಿಸಿತು. ಪಂದ್ಯದಲ್ಲಿ ಎದುರಾಳಿ ಗೋವಾ ಟೀಂ ಆಟಗಾರರು ಕಂಬ್ಯಾಕ್ ಮಾಡಲು ಅವಕಾಶವನ್ನೇ ಕನ್ನಡಿಗರು ನೀಡಲಿಲ್ಲ. ಹಾಗೇ ಮತ್ತೊಂದು ಕಡೆ ವಿಕ್ಸೆಡ್ ಡಬಲ್ಸ್‌ನಲ್ಲಿ ಪ್ರಜ್ವಲ್ ಹಾಗೂ ಶರ್ಮದಾ ಬಾಲು ಜೋಡಿ ಅಂಕಿತಾ ರೈನಾ & ಧ್ರುವ್ ಹಿರ್ಪಾರಾ ಟೀಂನ 6-4, 4-6, 10-8 ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಭರ್ಜರಿ ಎಂಟ್ರಿ ಪಡೆದಿದ್ದಾರೆ.

ಈಜು ಕೊಳದಲ್ಲೂ ಅಬ್ಬರಿಸಿದ ಕನ್ನಡಿಗರು!

ಇಷ್ಟೆಲ್ಲದರ ಮಧ್ಯೆ ಕರ್ನಾಟಕದ ಶ್ರೀಹರಿ ನಟರಾಜ್‌ ಹಾಗೂ ನೀನಾ ವೆಂಕಟೇಶ್‌ ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಕ್ರಮವಾಗಿ ಪುರುಷರ 100 ಮೀಟರ್ ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ, ಹಾಗೂ ಮಹಿಳೆಯರ 50 ಮೀಟರ್ ಬಟರ್‌ ಫೈ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಕರ್ನಾಟಕದ ಈಜುಪಟುಗಳು ನಿನ್ನೆ ಕೂಡ ಪದಕ ಬೇಟೆ ಮುಂದುವರಿಸಿದ್ದರು. ಶ್ರೀಹರಿ 55.59 ಸೆಕೆಂಡ್‌ನಲ್ಲಿ ಗುರಿ ತಲುಪಿ 2022ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ತಾವೇ ನಿರ್ಮಿಸಿದ್ದ (55.80 ಸೆ) ದಾಖಲೆ ಹಿಂದಿಕ್ಕಿದ್ದಾರೆ. ಈ ಮೂಲಕ ಮತ್ತೆ ದಾಖಲೆ ಬರೆದಿದ್ದಾರೆ. ಹಾಗೇ ನೆರೆ ರಾಜ್ಯ ಮಹಾರಾಷ್ಟ್ರದ, ರಿಷಭ್‌ ದಾಸ್‌ (57.37ಸೆ), ಕರ್ನಾಟಕದ ಎಸ್‌. ಶಿವ (57.41) ಕ್ರಮವಾಗಿ ಬೆಳ್ಳಿ & ಕಂಚಿನ ಪದಕ ಗೆದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+