U19 Women's T20 World Cup: ಟಿ20 ವಿಶ್ವಕಪ್ ಭಾರತ ತಂಡಕ್ಕೆ ಕನ್ನಡತಿ ನಿಕಿ ಪ್ರಸಾದ್‌ ನಾಯಕಿ

2025ರಲ್ಲಿ ಮಲೇಷ್ಯಾದಲ್ಲಿ ನಡೆಯಲಿರುವ ಐಸಿಸಿ 19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವಕಪ್‌ ಬಿಸಿಸಿಐ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಇತ್ತೀಚೆಗೆ ಕೌಲಾಲಂಪುರದಲ್ಲಿ ಮುಕ್ತಾಯವಾದ ಅಂಡರ್19 ಮಹಿಳಾ ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದ ನಿಕಿ ಪ್ರಸಾದ್‌ಗೆ ವಿಶ್ವಕಪ್‌ನಲ್ಲೂ ತಂಡವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಲಾಗಿದೆ.

ಅಂಡರ್ 19 ಟಿ20 ಮಹಿಳಾ ವಿಶ್ವಕಪ್ ಪಂದ್ಯಾವಳಿ 2025ರ ಜನವರಿ 18ರಿಂದ ಆರಂಭವಾಗಲಿದ್ದು ಫೆಬ್ರವರಿ 2 ರವರೆಗೆ ನಡೆಯಲಿದೆ. ಏಷ್ಯಾಕಪ್‌ ತಂಡದಲ್ಲಿ ಆಡಿದ್ದ 14 ಆಟಗಾರರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸನಿಕಾ ಚಲ್ಕಾ ತಂಡದ ಉಪನಾಯಕಿಯಾಗಿ ನೇಮಕವಾಗಿದ್ದಾರೆ. ವೇಗದ ಬೌಲರ್ ನಂಧನ ಎಸ್ ಬದಲಾಗಿ ವೈಷ್ಣವಿ ಎಸ್‌ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ನಂಧನ, ಇರಾ ಜೆ ಮತ್ತು ಅನಾದಿ ಟಿ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

karnataka player niki prasad captain india icc under 19 world cup 2025

ಕರ್ನಾಟಕದ ಆಟಗಾರ್ತಿ ನಿಕಿ ಪ್ರಸಾದ್

ನಿಕಿ ಪ್ರಸಾದ್ ಕರ್ನಾಟಕದ ಕ್ರಿಕೆಟರ್, ಕರ್ನಾಟಕ ಮಹಿಳಾ ತಂಡಕ್ಕಾಗಿ ಹಲವು ಪಂದ್ಯಗಳನ್ನು ಆಡಿದ್ದಾರೆ. ಮಹಿಳಾ ಹಿರಿಯ ಏಕದಿನ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ಪರವಾಗಿ ಆಡಿದ್ದ ನಿಕಿ ಪ್ರಸಾದ್ ಬಳಿಕ ಅಂಡರ್ 19 ಭಾರತ ಬಿ ತಂಡಕ್ಕಾಗಿ ಕೂಡ ಆಡಿದ್ದರು. ಭಾರತ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದುಕೊಂಡ ಅವರು ಏಷ್ಯಾಕಪ್‌ನಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಮುನ್ನಡೆಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ಜನವರಿ 19ರಂದು ಮೊದಲ ಪಂದ್ಯ

ಅಂಡರ್ 19 ಮಹಿಳಾ ವಿಶ್ವಕಪ್‌ನಲ್ಲಿ 16 ತಂಡಗಳು ಭಾಗವಹಿಸಲಿವೆ. ನಾಲ್ಕು ತಂಡಗಳ ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ, ಮಲೇಷ್ಯಾ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಎ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಜನವರಿ 19ರಂದು ಕೌಲಾಲಂಪುರದ ಬೇಯುಮಾಸ್ ಓವಲ್‌ನಲ್ಲಿ ಆಡಲಿದ್ದು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.

2023ರಲ್ಲಿ ಮೊದಲ ಬಾರಿಗೆ ಅಂಡರ್ 19 ಮಹಿಳಾ ವಿಶ್ವಕಪ್ ಆಯೋಜನೆ ಮಾಡಲಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು. ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಪ್ರಶಸ್ತಿ ಎತ್ತಿ ಹಿಡಿದಿತ್ತು. ಈಗಾಗಲೇ ಏಷ್ಯಾಕಪ್ ಗೆದ್ದಿರುವ ವಿಶ್ವಾಸದಲ್ಲಿರುವ ಭಾರತ, ಮತ್ತೊಮ್ಮೆ ಟಿ20 ವಿಶ್ವಕಪ್‌ನಲ್ಲೂ ಚಾಂಪಿಯನ್ ಆಗುವ ಉತ್ಸಾಹದಲ್ಲಿದೆ.

ಭಾರತ ತಂಡ: ನಿಕಿ ಪ್ರಸಾದ್ (ನಾಯಕಿ), ಸಾನಿಕಾ ಚಲ್ಕೆ (ಉಪನಾಯಕಿ), ಜಿ. ತ್ರಿಶಾ, ಕಮಲಿನಿ ಜಿ (ವಿಕೆಟ್ ಕೀಪರ್), ಭಾವಿಕಾ ಅಹಿರೆ (ವಿಕೆಟ್ ಕೀಪರ್), ಈಶ್ವರಿ ಅವಸಾರೆ, ಮಿಥಿಲಾ ವಿನೋದ್, ವಿಜೆ ಜೋಶಿತಾ, ಸೋನಮ್ ಯಾದವ್, ಪರುಣಿಕಾ ಸಿಸೋಡಿಯಾ, ಕೇಸರಿ ದೃತಿ, ಆಯುಷಿ ಶುಕ್ಲಾ, ಆನಂದಿತ್ ಕಿಶೋರ್, ಎಂಡಿ ಶಬ್ನಮ್, ಎಸ್. ವೈಷ್ಣವಿ.

ಮೀಸಲು ಆಟಗಾರರು: ನಂಧನ ಎಸ್, ಇರಾ ಜೆ, ಅನಾದಿ ಟಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+