RCB ಹೊಗಳಲು ಪದಗಳೇ ಇಲ್ಲ: CSK ಶ್ಲಾಘಿಸಿದ ಬರಹಗಾರ ಕವಿರಾಜ್

ಬೆಂಗಳೂರು, ನವೆಂಬರ್ 24: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ (RCB) ತೋರಿದ ಪ್ರದರ್ಶನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ. RCB ಅಭಿಮಾನಿಗಳೇ ತಮ್ಮ ಟೀಂ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇದೀಗ ಕನ್ನಡ ಗೀತ ರಚನೆಕಾರ ಮತ್ತು ಬರಹಗಾರ ಕವಿರಾಜ್ ಅವರು ಸಹ ಕೆಲವು ವಿಷಯಗಳನ್ನು ಪ್ರಸ್ತಾಪಿಸಿ ಟೀಕಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ (RCB) ಬಳಿ ಇತರ ಟೀಂಗಳಿಗಿಂತಲೇ ಹೆಚ್ಚು ಹಣ ಹೊಂದಿದೆ ಎನ್ನಲಾಗಿದೆ. ಹೀಗಿದ್ದರೂ ಇಂದು ಶನಿವಾರ ನವೆಂಬರ್ 24ರಂದು ಸೌದಿ ಅರೇಬಿಯಾದಲ್ಲಿ ನಡೆದ IPL 2025 ಹರಾಜು ಪ್ರಕ್ರಿಯೆ ಕಳಪೆ ಪ್ರದರ್ಶನ ತೋರಿದೆ. ಅಂದರೆ ಉತ್ತಮ ಆಟಗಾರರ ಖರೀದಿಗೆ ಮನಸ್ಸು ಮಾಡಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಗೀತ ರಚನೆಕಾರ ಕವಿರಾಜ್ ಅವರು ಪ್ರಸ್ತಾಪಿಸಿ ಬೇಸರ ಹೊರ ಹಾಕಿದ್ದಾರೆ.

Kannada Lyricist- Writer Kaviraj Criticize on RCB Performance in IPL 2025 Auction

ಕವಿರಾಜ್ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಅದರಲ್ಲಿ, ''RCB ಬಿಡ್ಡಿಂಗ್ ಮೆದುಳುಗಳನ್ನು ಹೊಗಳಲು ನನ್ನಲಂತೂ ಪದಗಳಿಲ್ಲ. ಹಾಗಾಗಿ ಆ ಬಗ್ಗೆ ಮಾತಾಡುವ ಸಾಹಸಕ್ಕೆ ನಾನು ಕೈ ಹಾಕುವುದಿಲ್ಲ. ಆದರೆ ಕಡಿಮೆ ಮೊತ್ತಕ್ಕೆ ಅತ್ಯಂತ ಉಪಯುಕ್ತ ಆಟಗಾರರನ್ನು ಕೊಳ್ಳುವುದು ಹೇಗೆಂಬುದಕ್ಕೆ ಚೆನ್ನೈ ಸೂಪರ್ ಕಿಂಗ್ ಉದಾಹರಣೆ ಆಗಿದ್ದಾರೆ'' ಎಂದಿದ್ದಾರೆ.

ಅಲ್ಲದೇ ''ಹಾಗಾಗೇ ಅವರ ತಂಡ ಹೆಚ್ಚು ಸಲ ಚಾಂಪಿಯನ್ ಆಗಿರುವುದು. ಚಾಂಪಿಯನ್ ಆಗಲು ಸ್ಟಾರ್ ಪ್ಲೇಯರ್ಸ್ ಗಿಂತ ಇಂತಹಾ utility players ( ಕೆಲಸಕ್ಕೆ ಬರುವ ) ಹೆಚ್ಚು ಅವಶ್ಯಕ.'' ಎಂದು ಅವರು ಬರೆದುಕೊಂಡಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಹರಾಜಿನಲ್ಲಿ ಎಂತಹ ಪ್ರದರ್ಶನ ನೀಡಿತು ಎಂದು ಅವರು ತಿಳಿಸಿದ್ದಾರೆ.

ಇನ್ನೂ ಚೆನ್ನೈ ಸೂಪರ್ ಕಿಂಗ್ (CSK) ಟೀಂ ಬಿಡ್ಡಿಂಗ್ ಮಾಡಿ ಕಡಿಮೆ ಹಣದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರ ಪಡೆದುಕೊಂಡಿದ್ದಾರೆ ಎಂದು ಅವರು ಹರಾಜು ಬಿಡ್ಡಿಂಗ್ ಫೋಟೋ ಪೋಸ್ಟ್ ಮಾಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ (CSK) ಟೀಂ ಹರಾಜಿನಲ್ಲಿ ಆಟಗಾರರಾದ ರಾಹುಲ್ ತಿರುಪತಿ ಅವರನ್ನು 3.40 ಕೋಟಿ ರೂಪಾಯಿ, ದೇವೊನ್ ಕಾನ್‌ವೇ 6.25 ಕೋಟಿ ರೂಪಾಯಿಗೆ ಖರೀದಿಸಿದೆ. ಇನ್ನು ರವಿಚಂದ್ರನ್ ಅಶ್ವಿನ್ ಅವರನ್ನು ಕೇವಲ 9.75 ಕೋಟಿ ರೂಪಾಯಿಗೆ ಹಾಗೂ ರಚಿನ್ ರವಿಂದ್ರ ಆಟಗಾರರನ್ನು ಕೇವಲ 4 ಕೋಟಿ ರೂಪಾಯಿಗೆ ಬಿಡ್ ಮಾಡಿದೆ ಎಂದು ಅವರು ಸಣ್ಣದೊಂದು ಲಿಸ್ಟ್ ನೀಡಿದ್ದಾರೆ.

ಆರ್‌ಸಿಬಿ ಟೀಂ ಗೆ ಈ ವರ್ಷ ಟೀಂ ಇಂಡಿಯಾ ಉತ್ತಮ ಆಟಗಾರ ಕೆಎಲ್ ರಾಹುಲ್ ಬರಲಿದ್ದಾರೆ. ಆರ್‌ಸಿಬಿ ಅವರನ್ನು ಬಿಡ್ ಮಾಡಿ ಟೀಂ ಕರೆತರಲಿದೆ ಎಂದೆಲ್ಲ ಕನ್ನಡಿಗರು ಹಾಗೂ ಆರ್‌ಸಿಬಿ ಫ್ಯಾನ್ಸ್ ಆಸೆ ಪಟ್ಟಿದ್ದರು. ಇದರಿಂದ ಟೀಂಗೆ ಉತ್ತಮ ಬಲ ಸಿಗಲಿದೆ ಎಂದು ನಂಬಲಾಗಿತ್ತು. ಆದರೆ ಆರ್‌ಸಿಬಿ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಕೈಬಿಟ್ಟಿದೆ. ಇದು ಫ್ಯಾನ್ ಕೋಪಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+