ಎಲ್‌ಎಸ್‌ಜಿ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಭರ್ಜರಿ ಗುಡ್ ನ್ಯೂಸ್: ಮತ್ತೆ ಗೂಡು ಸೇರಿದ ಮಾರಕ ಬೌಲರ್
IPL 2025 RCB Vs LSG: ಆರ್‌ಸಿಬಿಯು ಕೊನೆಯ ಲೀಗ್ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೇ 27ರಂದು ಆಡಲಿದೆ. ಇದಕ್ಕೂ ಮುನ್ನ ರಾಯಲ್ ತಂಡಕ್ಕೆ ಮಾರಕ ಬೌಲರ್ ಮತ್ತೆ ಎಂಟ್ರಿ ಕೊಟ್ಟು ಅಭಿಮಾನಿಗಳಿಗೆ ಬಿಗ್ ಗುಡ್ ನ್ಯೂಸ್ ನೀಡಿದ್ದಾರೆ. ಹಾಗಾದ್ರೆ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಭಾರತ-ಪಾಕಿಸ್ತಾನ ನಡುವೆ ಯುದ್ಧ ಬಿಕ್ಕಟ್ಟು ಕಾರಣ ಆಟಗಾರರು, ಅಭಿಮಾನಿಗಳ ಹಿತದೃಷ್ಟಿಯಿಂದ ಪ್ರಾಂಚೈಸಿಗಳ ಮನವಿ ಮೇರೆಗೆ ಬಿಸಿಸಿಐ ಐಪಿಎಲ್ 2025 ಟೂರ್ನಿಯನ್ನು ಅರ್ಧಕ್ಕೆ ರದ್ದುಪಡಿಸಿ ಒಂದು ವಾರಕ್ಕೆ ಮುಂದೂಡಿತ್ತು. ಎರಡು ರಾಷ್ಟ್ರಗಳ ನಡುವೆ ಪರಿಸ್ಥಿತಿ ಸುಧಾರಿದ ಹಿನ್ನೆಲೆ ಉಳಿದ ಪಂದ್ಯಗಳಿಗೆ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಂತೆಯೇ ಮೇ 17ರಿಂದ ಮತ್ತೆ ಟೂರ್ನಿ ಆರಂಭವಾಗಿದೆ.

ಭುಜದ ನೋವು ಕಾರಣ ಕಳೆದ ಮೂರು ಪಂದ್ಯಗಳಿಗೆ ಆರ್‌ಸಿಬಿ ತಂಡದ ಸ್ಟಾರ್ ಬೌಲರ್ ಜೋಶ್ ಹೇಜಲ್‌ವುಡ್ ಅಲಭ್ಯರಾಗಿದ್ದರು. ಆದರೆ ಇದೀಗ ಮತ್ತೆ ಎಂಟ್ರಿ ಕೊಟ್ಟಿದ್ದು, ಹೇಜಲ್‌ವುಡ್ ಕಮ್ ಬ್ಯಾಕ್ ಟು ಆರ್‌ಸಿಬಿ ಎಂದು ಹೇಳಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಈ ಮೂಲಕ ಉಳಿದ ಕೊನೆಯ ಲೀಗ್ ಪಂದ್ಯದಲ್ಲಿ ಆಡುವ ಸೂಚನೆ ನೀಡಿದ್ದಾರೆ.
ಆರ್‌ಸಿಬಿಯೂ ಕೊನೆಯ ಲೀಗ್ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೇ 27ರಂದು ಆಡಲಿದೆ. ಈ ಪಂದ್ಯ ಗೆಲ್ಲಲ್ಲೇಬೇಕಾದ ಆರ್‌ಸಿಬಿ ಅನಿರ್ವಾರ್ಯತೆ ಎದುರಾಗಿದೆ. ಈ ನಡುವೆಯೇ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಮಾರಕ ಬೌಲರ್ ಜೋಶ್ ಹೇಜಲ್‌ವುಡ್ ಮತ್ತೆ ಎಂಟ್ರಿ ಕೊಟ್ಟಿದ್ದು, ಇದರಿಂದ ತಂಡಕ್ಕೆ ಆನೆ ಬಲ ಬಂದಂತಾಗಿದೆ. ಅಲ್ಲದೆ, ಅಭಿಮಾನಿಗಳ ಮುಖದಲ್ಲಿ ಸಂತಸ ಹೆಚ್ಚಿಸಿದಂತಾಗಿದೆ.
ಭಾರತ-ಪಾಕಿಸ್ತಾನ ಮಧ್ಯ ಯುದ್ಧ ಬಿಕ್ಕಟ್ಟು ಆದ ಕಾರಣ ಟೂರ್ನಿಯನ್ನು ಅರ್ಧಕ್ಕೆ ರದ್ದು ಮಾಡಲಾಗಿತ್ತು. ಈ ವೇಳೆ ವಿದೇಶಿ ಆಟಗಾರರ ಜವಾಬ್ದಾರಿ ಭಾರತದ ಮೇಲಿತ್ತು. ಆದ್ದರಿಂದ ಅವರನ್ನು ಅವರವರ ದೇಶಗಳಿಗೆ ವಾಪಾಸ್ ಕಳುಹಿಸಿಕೊಡಲಾಗಿತ್ತು. ಈ ವೇಳೆ ಜೋಶ್ ಹ್ಯಾಜಲ್‌ವುಡ್ ಸಹ ತಮ್ಮ ದೇಶ ಆಸ್ಟ್ರೇಲೊಯಾಗೆ ತೆರಳಿದ್ದರು. ಬಳಿಕ ಪರಿಸ್ಥಿತಿ ಸುಧಾರಿಸಿದ್ದು, ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಅಲ್ಲದೆ, ವಿದೇಶಿ ಆಟಗಾರರನ್ನು ಮತ್ತೆ ವಾಪಾಸ್ ಕರೆಸಲಾಯಿತು.
ಆದರೆ, ಆರ್‌ಸಿಬಿ ಪರ ಆಡುತ್ತಿದ್ದ ಹೇಜಲ್‌ವುಡ್ ಸ್ವಲ್ಪ ದಿನ ಆದ ಬಳಿಕ ಇಂಡಿಯಾಗೆ ಮರಳಿದರು. ಇದಕ್ಕೂ ಮುಂಚೆಯೇ ಭುಜದ ನೋವು ಕಾರಣ ಒಂದು ಪಂದ್ಯದಿಂದ ಹೊರಗುಳಿದಿದ್ದರು. ಬಳಿಕವೂ ಅವರು ಎರಡು ಪಂದ್ಯಗಳಿಂದ ಹೊರಗುಳಿದರು. ಇದೀಗ ಚೇತರಿಸಿಕೊಂಡು ಎಲ್‌ಎಲ್‌ಜಿ ವಿರುದ್ಧ ಮೇ 27ರಂದು ನಡೆಯುವ ಹೈವೋಲ್ಟೇಜ್ ಪಂದ್ಯ ಆಡಲು ಸಜ್ಜಾಗಿದ್ದಾರೆ. ಇದರಿಂದ ಆರ್‌ಸಿಬಿಗೆ ಹೊಸ ಹುರುಪು ಬಂತಾಂತಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ 13 ಒಂದ್ಯಗಳನ್ನಾಡಿದೆ. 8 ಗೆಲುವು, 4 ಸೋಲು, ಒಂದು ರದ್ದಿನೊಂದಿದೆ ಪಾಯಿಂಟ್ಸ್ ಟೇಬಲ್‌ನಲ್ಲಿ 17 ಅಂಕಗಳನ್ನು ಪಡೆದುಕೊಂಡು ಮೂರನೇ ಸ್ಥಾನದಲ್ಲಿದೆ. ಈಗಾಗಲೇ ಪ್ಲೇ ಆಫ್ ಪ್ರವೇಶ ಮಾಡಿದ್ದು, ಇದೀಗ ತಂಡದ ಕಣ್ಣು ಅಗ್ರ ಸ್ಥಾನದ ಮೇಲಿದೆ. ಅಗ್ರ ಸ್ಥಾನ 2ರಲ್ಲಿ ಬಂದರೂ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಅದು ಎಲ್‌ಎಸ್‌ಜಿ ವಿರುದ್ಧ ಗೆಲುವು ಸಾಧಿಸಿದ್ರೆ ಮಾತ್ರ.












Click it and Unblock the Notifications