ಎಫ್1 ಟೆಸ್ಟ್ ಡ್ರೈವ್ ಪಾಸ್, ಭಾರತದ ಚಾಲಕ ಜೆಹಾನ್ ಖುಷ್!
ಲಂಡನ್, ಜೂನ್ 24: ಭಾರತದ ಯುವ ರೇಸ್ ಡ್ರೈವರ್ ಜೆಹಾನ್ ದಾರುವಾಲ ಸಕತ್ ಥ್ರಿಲ್ ಆಗಿದ್ದಾರೆ. ಭಾರತದ ಬಹುಕಾಲದ ಕನಸು ಮಾಡುವ ಪಥದಲ್ಲಿ ಸಾಗಿರುವ ಹೆಮ್ಮೆಯಿಂದ ಮುಗುಳ್ನಗೆ ಬೀರಿದ್ದಾರೆ. ನರೇನ್ ಕಾರ್ತಿಕೇಯನ್, ಕರಣ್ ಚಂದೋಕ್ ಸಾಲಿಗೆ ಜೆಹಾನ್ ಸೇರುತ್ತಿದ್ದಾರೆ. ಅತ್ಯಂತ ವೇಗ ಕಾರು ಚಾಲಕರ ಸಾಲಿನಲ್ಲಿ ಜೆಹಾನ್ ಸದ್ಯದ ಟ್ರೆಂಡ್ ನಲ್ಲಿದ್ದಾರೆ.
ಈ ವಾರ ಭಾರತದ ರೇಸರ್ ಜೆಹಾನ್ ದಾರುವಾಲ ಫಾರ್ಮೂಲಾ ಒನ್ ಕಾರಿನಲ್ಲಿ ಕುಳಿತು ಟೆಸ್ಟ್ ಡ್ರೈವ್ ಮಾಡಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಲ್ಯಾಪ್ ಮುಗಿಸಿದ್ದಾರೆ. ಎಂಟು ಬಾರಿ ಕನ್‌ಸ್ಟ್ರಕ್ಟರ್ಸ್ ಚಾಂಪಿಯನ್ ಶಿಪ್ ಗೆದ್ದಿರುವ ಮೆಕ್ಲೇರನ್(McLaren) ಆಗಿ ನೀಡಿರುವ ಟೆಸ್ಟ್ ಡ್ರೈವ್ ಯಶಸ್ವಿಯಾಗಿದ್ದು, ಸೂಪರ್ ಲೈಸನ್ಸ್ ಪಡೆಯುವ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
23 ವರ್ಷ ವಯಸ್ಸಿನ ಜೆಹಾನ್ ಅವರು ಫಾರ್ಮ್ಯೂಲಾ ಒನ್ ಕಾರು ಓಡಿಸಿದ ಮೂರನೇ ಚಾಲಕ ಎನಿಸಿಕೊಂಡಿದ್ದಾರೆ. ಸಿಲ್ವರ್ ಸ್ಟೋನ್ ಟ್ರ್ಯಾಕ್‌ನಲ್ಲಿ ಈ ವಾರದಲ್ಲಿ ಎರಡು ದಿನ MCL35M ಎಫ್ 1 ಕಾರು ಚಲಿಸಿದ ಜೆಹಾನ್ ಎಲ್ಲೂ ಅಳುಕಿಲ್ಲ. ಜೆಹಾನ್ ಯಶೋಗಾಥೆ ಮುಂದುವರೆಯಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.

ಸೂಪರ್ ಲೈಸನ್ಸ್ ಪಡೆಯಬಹುದು
ಎರಡು ದಿನಗಳ ಕಾಲ ಜೆಹಾನ್ ಸುಮಾರು 130 ಲ್ಯಾಪ್ ಮುಗಿಸಿದ್ದಾರೆ. ಮುಂಬರುವ ಬ್ರಿಟಿಷ್ ಗ್ರ್ಯಾನ್ ಪ್ರೀಯಲ್ಲಿ ಇದರ ಅರ್ಧದಷ್ಟು ಲ್ಯಾಪ್ ಇರಲಿದೆ. ಸದ್ಯ ಇಟಲಿಯ ತಂಡ ಪ್ರೇಮಾ ಮೂಲಕ ಫಾರ್ಮ್ಯೂಲಾ 2 ಚಾಂಪಿಯನ್ ಶಿಪ್ ರೇಸ್‌ನಲ್ಲಿ ನಿರತರಾಗಿರುವ ಜೆಹಾನ್ ಸೂಪರ್ ಲೈಸನ್ಸ್ ಮೂಲಕ ಶೀಘ್ರವೇ ಫಾರ್ಮ್ಯೂಲಾ ಒನ್ ಟ್ರ್ಯಾಕಿನಲ್ಲಿ ಕಾಣಿಸಿಕೊಳ್ಳಬಹುದು.
|
ಸಂತಸವನ್ನು ಜೆಹಾನ್ ಹಂಚಿಕೊಂಡಿದ್ದಾರೆ
"ನಾನು ಮೊದಲ ಬಾರಿಗೆ ಫಾರ್ಮುಲಾ ಒನ್ ಕಾರನ್ನು ಓಡಿಸುವುದನ್ನು ನಿಜವಾಗಿಯೂ ಆನಂದಿಸಿದೆ. ನಾನು ಇಂಗ್ಲೆಂಡ್ ನೆಲದಲ್ಲಿದ್ದರೂ ಮನೆಯಲ್ಲೇ ಇರುವ ಭಾವನೆ ಮೂಡಿಸಿದೆ ಮತ್ತು ನಾನು ಹಿಂದೆ ಓಡಿಸಿದ್ದಕ್ಕಿಂತ ದೈಹಿಕವಾಗಿ ಹೆಚ್ಚು ಸಾಮರ್ಥ್ಯವನ್ನು ಈ ರೇಸ್ ಬೇಡುತ್ತಿದ್ದರೂ, ನನ್ನ ಫಿಟ್‌ನೆಸ್‌ನಲ್ಲಿ ನನಗೆ ಯಾವುದೇ ಸಮಸ್ಯೆ ತರಲಿಲ್ಲ, "ಎಂದು ಮಾಧ್ಯಮ ಪ್ರಕಟಣೆ ಮೂಲಕ ತಮ್ಮ ಸಂತಸವನ್ನು ಜೆಹಾನ್ ಹಂಚಿಕೊಂಡಿದ್ದಾರೆ.
— Jehan Daruvala (@DaruvalaJehan) June 24, 2022 |
ಓಡಿಸಲು ನಾನು ಕಾಯಲು ಸಾಧ್ಯವಿಲ್ಲ
''ಒಟ್ಟಾರೆಯಾಗಿ, ಎರಡು ದಿನಗಳು ಹೇಗೆ ಕಳೆದವು, ನಾನು ಹೇಗೆ ನಿಭಾಯಿಸಿದೆ ಮತ್ತು ನಾವು ಪೂರ್ಣಗೊಳಿಸಲು ಸಾಧ್ಯವಾದ ಮೈಲೇಜ್ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಪ್ರತಿ ಲ್ಯಾಪ್‌ನೊಂದಿಗೆ ನಾನು ಮಿತಿಗೆ ಹತ್ತಿರವಾಗಲು ಸಾಧ್ಯವಾಯಿತು ಎಂದು ನಾನು ಭಾವಿಸಿದೆ ಮತ್ತು ಈ ಕಾರುಗಳಲ್ಲಿ ಒಂದನ್ನು ಮತ್ತೆ ಓಡಿಸಲು ನಾನು ಕಾಯಲು ಸಾಧ್ಯವಿಲ್ಲ,''ಎಂದು ಹೇಳಿದರು.
|
ರೆಡ್ ಬುಲ್ ಜೂನಿಯರ್
ರೆಡ್ ಬುಲ್ ಜೂನಿಯರ್ ತಂಡದ ಭಾಗವಾಗಿ ಉಳಿದಿರುವ ಜೆಹಾನ್ ಮೂರು ಬಾರಿ F2 ವಿಜೇತರಾಗಿದ್ದಾರೆ ಮತ್ತು ಈ ಋತುವಿನಲ್ಲಿ ಆರು ಸುತ್ತುಗಳಿಂದ ಐದು ಅಗ್ರ-ಮೂರು ಸ್ಥಾನಗಳನ್ನು ಒಳಗೊಂಡಂತೆ ವಿಭಾಗದಲ್ಲಿ 12 ಬಾರಿ ಪೋಡಿಯಂ ಏರಿದ್ದಾರೆ. ಈ ಋತುವಿನಲ್ಲಿ ಫಾರ್ಮುಲಾ 2 ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.












Click it and Unblock the Notifications