India Vs Japan T20: ಬಿಹಾರಿ ಸಹೋದರರ ಭೇಟಿಗೆ ಕಾಯುತ್ತಿರುವ ಭಾರತ ಮೂಲದ ಜಪಾನ್‌ ಕ್ರಿಕೆಟರ್

India vs Japan T20: ಸಾನೋ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ (ಸೆಪ್ಟೆಂಬರ್ 21) ಜಪಾನ್ ಹಾಗೂ ಭಾರತದ ನಡುವೆ ಟಿ20 ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ಬಿಹಾರ ಮೂಲದ ಜಪಾನ್‌ ಕ್ರಿಕೆಟರ್ ಅಭಿಷೇಕ್ ಆನಂದ್ ಅವರು ಟೀಮ್ ಇಂಡಿಯಾದ ಯುವ ಪ್ರತಿಭೆ ಹಾಗೂ ಇಶಾನ್ ಕಿಶನ್‌ ಅವರ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಬಿಹಾರ ಮೂಲದ ಜಪಾನ್ ಕ್ರಿಕೆಟಿಗ ಅಭಿಷೇಕ್ ಆನಂದ್ ಅವರು, ಸಾನೋ ನಗರದ 'ಸಾನೋ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ಭಾರತ ಮತ್ತು ಜಪಾನ್ ನಡುವೆ ಏಕೈಕ ಟಿ20 ಪಂದ್ಯ ನಡೆಯಲಿದೆ. ಈ ವೇಳೆ ಬಿಹಾರಿಗಳಾದ ವೈಭವ್ ಸೂರ್ಯವಂಶಿ ಮತ್ತು ಇಶಾನ್ ಕಿಶನ್ ಅವರನ್ನು ಭೇಟಿಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

Japan Cricketer Abhishek Anand Wants to Meet Vaibhav Sooryavanshi amp amp Ishan Kishan Ahead of India T20

ಏಷ್ಯನ್ ಗೇಮ್ಸ್ ತಂಡದಲ್ಲಿ ಅಭಿಷೇಕ್ ಇರ್ತಾರಾ?

ಕ್ರಿಕೆಟ್‌ ಮೇಲಿನ ಅಪಾರ ಪ್ರೀತಿಯಿಂದಾಗಿ ಭಾರತದಿಂದ ಜಪಾನ್‌ಗೆ ವಲಸೆ ಹೋದ ಅಭಿಷೇಕ್, ಪ್ರಸ್ತುತ ವೈಭವ್ ಸೂರ್ಯವಂಶಿ ತಮ್ಮ ನೆಚ್ಚಿನ ಆಟಗಾರನಾಗಿದ್ದು, ಅವಕಾಶ ಸಿಕ್ಕರೆ ಅವರನ್ನು ಹಾಗೂ ಇಶಾನ್ ಕಿಶನ್‌ ಅವರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ಈ ಭಾರತ ವಿರುದ್ಧದ ಪಂದ್ಯ ಹಾಗೂ ಏಷ್ಯನ್ ಗೇಮ್ಸ್ ತಂಡಕ್ಕೆ ಅಭಿಷೇಕ್ ಆಯ್ಕೆಯಾಗದಿದ್ದರೂ, ಪಂದ್ಯದ ವೇಳೆ ಅವರು ತಂಡದೊಂದಿಗೆ ಇರಲಿದ್ದಾರೆ.

ವೈಭವ್ ಸೂರ್ಯವಂಶಿ ಬಗ್ಗೆ ಅಭಿಷೇಕ್ ಹೇಳಿದ್ದೇನು?

15 ವರ್ಷದ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿಗೆ ವಿಶೇಷ ಸಂದೇಶವಿದೆಯೇ ಎಂದು ಕೇಳಿದಾಗ, ಸಾನೋದಲ್ಲಿ ಮತ್ತು ನಂತರ ಏಷ್ಯನ್ ಗೇಮ್ಸ್‌ಗಾಗಿ ನಿಶ್ಶಿನ್‌ನಲ್ಲಿ ಭಾರತೀಯ ತಂಡವನ್ನು ಹಾಗೂ ಸೂರ್ಯವಂಶಿ ಅವರನ್ನು ನೋಡಲು ತಾವು ಅತ್ಯಂತ ಕಾತರರಾಗಿದ್ದೇವೆ ಎಂದು ಅಭಿಷೇಕ್ ತಿಳಿಸಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

'ಭಾರತದ ವಿರುದ್ಧದ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದೇವೆ. ಮತ್ತು ಮುಂದಿನ ದಿನಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುವಂತೆ ಭಾರತ-ಜಪಾನ್ ನಡುವಿನ ಬಾಂಧವ್ಯ ಉತ್ತವಾಗಿ ಉಳಿಯಲಿ ಎಂದು ಆಶಿಸುತ್ತೇನೆ,' ಅಂತಾ ಅಭಿಷೇಕ್ ಆನಂದ್ ಅವರು ತಿಳಿಸಿದರು.

ಅಭಿಷೇಕ್ ಜಪಾನ್‌ ಟೀಮ್ ಸೇರಿದ್ದು ಹೇಗೆ?

ಕ್ರಿಕೆಟ್ ಮೇಲಿನ ಪ್ರೀತಿಯು ಅವರನ್ನು ಭಾರತದಿಂದ ಜಪಾನ್‌ಗೆ ಕರೆತಂದಿತು. ಅವರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ 'ಆಕ್ಸೆಂಚರ್ ಜಪಾನ್' ಕಂಪನಿಯಿಂದ ಕೆಲಸದ ಆಫರ್ ಪಡೆದಿದ್ದರು. ಈ ಕುರಿತು ಮಾತನಾಡಿ, 'ಜಪಾನ್‌ನಲ್ಲಿನ ನನ್ನ ಪಯಣ ನಿಜಕ್ಕೂ ನಂಬಲಾಗದಂತಹುದು. ನಾನು ಎಂದಿಗೂ ಜಪಾನ್ ತಂಡದಲ್ಲಿ ಆಡುತ್ತೇನೆ ಎಂದು ಅಂದುಕೊಂಡಿರಲಿಲ್ಲ,' ಎಂದು ಹೇಳಿದರು.

'ನಮ್ಮ ಕಾಲೇಜಿನಲ್ಲಿ ನಮಗೆ ಪ್ಲೇಸ್‌ಮೆಂಟ್ ಸಿಗುತ್ತಿತ್ತು. ಕಾಲೇಜಿಗೆ ಜಪಾನೀಸ್ ಕಂಪನಿಗಳು ಬಂದಿದ್ದವು. ನಾವು ವಿದೇಶದಲ್ಲಿ ಉದ್ಯೋಗ ಪಡೆಯುತ್ತೇವೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ವಿದೇಶಿ ಕಂಪನಿಯ ಸಂದರ್ಶನ ಹೇಗಿರುತ್ತದೆ ಎಂದು ತಿಳಿಯಲು ಸುಮ್ಮನೆ ಅರ್ಜಿ ಸಲ್ಲಿಸಿ, ಸಂದರ್ಶನದಲ್ಲಿ ಭಾಗವಹಿಸಿದೆ. ನಂತರ ಆಕ್ಸೆಂಚರ್ ಜಪಾನ್‌ಗೆ ಆಯ್ಕೆಯಾದೆ,' ಎಂದು ಹೇಳಿದರು.
ಜಪಾನ್‌ಗೆ ಪ್ರಯಾಣಿಸಲು ಕಾರಣ ಏನು?

ಬಳಿಕ ಈ ಆಫರ್ ಅನ್ನು ಸ್ವೀಕರಿಸಬೇಕೋ ಅಥವಾ ಬೇಡವೋ ಎಂದು ನಿರ್ಧರಿಸಲು 2 ಗಂಟೆಗಳ ಕಾಲಾವಕಾಶ ನೀಡಲಾಯಿತು. ಹೀಗಾಗಿ ವಿದೇಶಕ್ಕೆ ಹೋಗುವ ಯಾವುದೇ ಯೋಜನೆ ಇರಲಿಲ್ಲವಲ್ಲ ಎಂದು ಯೋಚಿಸುತ್ತಿದ್ದೆ. ನಾನು ಭಾರತದಲ್ಲೇ ಉಳಿದು ಉದ್ಯೋಗದ ಜೊತೆಗೆ ಕ್ರಿಕೆಟ್ ವೃತ್ತಿಯನ್ನು ಮುಂದುವರೆಸಲು ಬಯಸಿದ್ದೆ. ಆದ್ದರಿಂದ ಆ ಸಮಯದಲ್ಲಿ ಜಪಾನ್‌ಗೆ ಹೋಗಬೇಕೋ ಬೇಡವೋ, ಏನು ಮಾಡಬೇಕು ಎಂದು ಸಾಕಷ್ಟು ಆಲೋಚಿಸಿದೆ.

ಆಗ ಜಪಾನ್‌ನಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ಹುಡುಕಲು ಯೋಚಿಸಿದೆ. ಅದೃಷ್ಟವಶಾತ್, ಅದೇ ವರ್ಷ ಜಪಾನ್ ತಂಡವು ಈಸ್ಟ್ ಏಷ್ಯಾ-ಪೆಸಿಫಿಕ್ ವಿಶ್ವಕಪ್ ಅರ್ಹತಾ ಸುತ್ತಿಗೆ ಅರ್ಹತೆ ಪಡೆದಿತ್ತು. ಇದನ್ನು ನೋಡಿ ಇಲ್ಲೂ ಕ್ರಿಕೆಟ್‌ಗೆ ಉತ್ತಮ ಭವಿಷ್ಯವಿದೆ ಎನಿಸಿತು. ಈ ಮಾಹಿತಿ ತಿಳಿದ ನಂತರ, ಅಲ್ಲಿನ ಅವಕಾಶಗಳನ್ನು ಬಳಸಿಕೊಳ್ಳುವುದೆ ಹೋಗುವುದೇ ಸೂಕ್ತ ಎಂದು ಭಾವಿಸಿದೆ. ಹೀಗೆ 2 ಗಂಟೆಗಳ ಆಲೋಚನೆಯ ಬಳಿಕ ಬಂದ ಆಫರ್ ಅನ್ನು ಸ್ವೀಕರಿಸಿ ಜಪಾನ್‌ಗೆ ಪ್ರಯಾಣಿಸಿದೆ,' ಎಂದು ಅವರು ಹೇಳಿದರು.

ಅಭಿಷೇಕ್ ಅವರು ಜಪಾನ್‌ಗೆ ಬಂದು 'ಟೋಕಿಯೋ ಫಾಲ್ಕನ್ ಕ್ರಿಕೆಟ್ ಕ್ಲಬ್' ಪರವಾಗಿ ಆಡಿದರು. ಅಲ್ಲಿ ಮೊದಲ ಮೂರು ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು ನಂತರ ಜಪಾನ್ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು. ಬಳಿಕ ಅವರು ಅಲ್ಲಿಯೇ ತಮ್ಮ ಕ್ರಿಕೆಟ್‌ ವೃತ್ತಿಯನ್ನು ಮುಂದುವರೆಸಿದರು ಎನ್ನುವ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಅವರು ವೈಭವ್ ಸೂರ್ಯವಂಶಿ ಹಾಗೂ ಇಶಾನ್ ಕಿಶನ್ ಅವರನ್ನು ಭೇಟಿಯಾಗುವುದಾಗಿ ಹೇಳಿಕೊಂಡಿರುವುದು ಗಮನ ಸೆಳೆಯುವ ವಿಚಾರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+