Irfan Pathan: ಕರ್ಪೂರದ ಗೊಂಬೆಯಂತಿರುವ ಕ್ರಿಕೆಟಿಗ ಇರ್ಫಾನ್ ಪಠಾಣ್ ಪತ್ನಿ: ಮದುವೆಯಾಗಿ 8 ವರ್ಷಗಳ ಬಳಿಕ ಫೋಟೊ ರಿವೀಲ್
ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಇದೇ ಮೊದಲ ಬಾರಿಗೆ ತಮ್ಮ ಪತ್ನಿಯ ಮುಖವನ್ನು ರಿವೀಲ್ ಮಾಡಿದ್ದಾರೆ. ದಂಪತಿಗಳು ಶನಿವಾರ ಎಂಟನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು ತಮ್ಮ ಪತ್ನಿ ಸಫಾ ಬೇಗ್‌ಗಾಗಿ ಇರ್ಫಾನ್ ಪಠಾಣ್ ಹೃತ್ಪೂರ್ವಕ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ.
"ಮೂಡ್ ಬೂಸ್ಟರ್, ಹಾಸ್ಯನಟಿ, ತೊಂದರೆಗಾರ ಮತ್ತು ನನ್ನ ಮಕ್ಕಳ ನಿರಂತರ ಒಡನಾಡಿ, ಸ್ನೇಹಿತ, ಮತ್ತು ನನ್ನ ಮಕ್ಕಳ ತಾಯಿ. ಈ ಸುಂದರ ಪ್ರಯಾಣದಲ್ಲಿ, ನಾನು ನಿನ್ನನ್ನು ನನ್ನ ಹೆಂಡತಿಯಾಗಿ ಪಾಲಿಸುತ್ತೇನೆ. ನನ್ನ ಪ್ರೀತಿಗೆ 8 ನೇ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು" ಎಂದು ಪಠಾಣ್ ಬರೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಜೊತೆಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮಾಧ್ಯಮಗಳ ವರದಿಗಳ ಪ್ರಕಾರ, ಪಠಾಣ್ ಅವರ ಪತ್ನಿಯ ಮುಖ ತೋರಿಸುವಂತೆ ಮೊದಲ ಬಾರಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಪಠಾಣ್ ತನ್ನ ಪತ್ನಿಯೊಂದಿಗಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವಾಗ ಅವಳ ಮುಖವನ್ನು ಮರೆಮಾಡಿದ್ದಕ್ಕಾಗಿ ಈ ಹಿಂದೆ ಹಲವು ಬಾರಿ ಟೀಕೆಗೆ ಒಳಗಾಗಿದ್ದರು. ಇದೀಗ ಪತ್ನಿಯ ಮುಖವನ್ನು ರಿವೀಲ್ ಮಾಡಿದ್ದು ಫೋಟೊ ವೈರಲ್ ಆಗಿದೆ.
ಬೆರಗಾದ ನೆಟ್ಟಿಗರು
ಇರ್ಫಾನ್ ಪಠಾಣ್ ಪತ್ನಿಯ ಸೌಂದರ್ಯವನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ. ನಿಮ್ಮ ಪತ್ನಿ ತುಂಬಾ ಸುಂದರವಾಗಿದ್ದಾರೆ. ಇಂತಹ ಹೆಂಡತಿಯನ್ನು ಪಡೆದ ನೀವು ಅದೃಷ್ಟವಂತರು. ನಿಮ್ಮ ಕುಟುಂಬ ಸುಂದರವಾಗಿದೆ, ಹೀಗೆ ಸುಖವಾಗಿ ಬಾಳಿ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಹಾರೈಸಿದ್ದಾರೆ. ಮತ್ತೆ ಹಲವರು ಸಂಪ್ರದಾಯವನ್ನು ಮುರಿದು ಪತ್ನಿಯ ಮುಖವನ್ನು ತೋರಿಸಿದ್ದಕ್ಕೆ ಧನ್ಯವಾದಗಳು. ಹೆಣ್ಣನ್ನು ಸಂಪ್ರದಾಯದ ಹೆಸರಿನಲ್ಲಿ ಬಂಧಿಸಬೇಡಿ ಎಂದು ಮತ್ತೆ ಕೆಲವರು ಮನವಿ ಮಾಡಿದ್ದಾರೆ.
ಪತ್ನಿ ಮುಖ ತೋರಿಸಿದ್ದಕ್ಕೆ ಟೀಕೆ!
ಇನ್ನೂ ಹಲವು ಸಂಪ್ರದಾಯವಾದಿಗಳು ಇರ್ಫಾನ್ ಪಠಾಣ್‌ರನ್ನು ಟೀಕಿಸಿದ್ದಾರೆ. ಇಸ್ಲಾಂನಲ್ಲಿ ಈ ರೀತಿ ಪತ್ನಿಯ ಮುಖವನ್ನು ತೋರಿಸುವುದು ನಿಷಿದ್ಧ, ನೀವು ಮಾಡಿರುವ ಕೆಲಸ ಸರಿಯಲ್ಲ ಎಂದಿದ್ದರೆ. ಮತ್ತೆ ಕೆಲವರು ಬೆದರಿಕೆ ಹಾಕುವಂತೆ ಇನ್‌ಸ್ಟಾಗ್ರಾಂನಲ್ಲಿ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಹಲವರು ಕಿಡಿ ಕಾರಿದ್ದು, ಇಂತಹ ಮೂಢನಂಬಿಕೆಯಿಂದ ಹೊರ ಬರಬೇಕು, ಈ ರೀತಿಯ ಕಮೆಂಟ್‌ಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಹಲವು ಮಂದಿ ಇರ್ಫಾನ್‌ಗೆ ಧೈರ್ಯ ತುಂಬಿದ್ದಾರೆ.












Click it and Unblock the Notifications