IPL: ಆರ್‌ಸಿಬಿ ಸೇರಿದಂತೆ ಉಳಿದ ಐಪಿಎಲ್ ತಂಡಗಳ ಅಭಿಮಾನಿಗಳಿಗೆ ಬಿಗ್ ಶಾಕ್
IPL: ವಿಶ್ವದ ಅತ್ಯಂತ ದೊಡ್ಡ ಶ್ರೀಮಂತ ಲೀಗ್‌ಗಳಲ್ಲಿ ಐಪಿಎಲ್ ಕೂಡ ಒಂದಾಗಿದೆ. ಅಷ್ಟರ ಮಟ್ಟಿಗೆ ಈ ಲೀಗ್‌ಗೆ ಹಣ ಹೊಳೆಯಂತೆ ಹರಿದುಬರುತ್ತದೆ. ಆದರೆ, ಇದೀಗ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಐಪಿಎಲ್ ಅಭಿಮಾನಿಗಳಿಗೆ ಬಿಗ್ ಶಾಕ್‌ವೊಂದನ್ನು ನೀಡಲಾಗಿದೆ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತದಲ್ಲಿ ಕೆಲವು ಉತ್ಪನ್ನಗಳ ಮೇಲೆ ಜಿಎಸ್‌ಟಿ ಏರಿಕೆ ಮಾಡಲಾಗಿದ್ದು, ಇದು ಇದೇ ಸೆಪ್ಟೆಂಬರ್ 22ರಿಂದ ಜಾರಿಯಾಗಲಿದೆ ಎಂದು ತಿಳಿದುಬಂದಿದೆ. ಈ ಸಾಲಿಗೆ ಇದೀಗ ಐಪಿಎಲ್ ಕೂಡ ಸೇರಲಿದ್ದು, ಟಿಕೆಟ್ ದರಗಳ ಬೆಲೆಯನ್ನು ಏರಿಕೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ, ಎಷ್ಟು ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.

ಇಂಡಿಯನ್ಸ್ ಪ್ರೀಮಿಯರ್ ಲೀಗ್ ಬಂತೆಂದರೆ ಸಾಕು ತುಂಬಾ ಜನ ಕೊನೆವರೆಗೂ ಪಂದ್ಯಗಳನ್ನು ವೀಕ್ಷಣೆ ಮಾಡುತ್ತಾರೆ. ಅದರಲ್ಲೂ ತಮ್ಮ ನೆಚ್ಚಿನ ತಂಡದ ಪಂದ್ಯ ಇತ್ತೆಂದರೆ ಸಾಕು ಟಿಕೆಟ್ ಬೆಲೆ ಎಷ್ಟಿದ್ದರೂ ಸಹ ಖರೀದಿಸಿ ಕ್ರೀಡಾಂಗಣದಲ್ಲೇ ವೀಕ್ಷಣೆ ಮಾಡುವವರು ತುಂಬಾ ಜನರಿದ್ದಾರೆ. ಇದೀಗ ಐಪಿಎಲ್ ಟಿಕೆಟ್‌ಗಳಿಗೆ ಜಿಎಸ್‌ಎಸ್‌ಟಿ ದರವನ್ನು ಏರಿಸಲಾಗಿದ್ದು, ವೀಕ್ಷಕರ ಜೇಬಿಗೆ ಕತ್ತರಿ ಬೀಳೋದಂತೂ ಗ್ಯಾರಂಟಿ ಎನ್ನುವಂತಾಗಿದೆ. ಇದರ ಪರಿಣಾಮ ಬಿಸಿಸಿಐ ಮೇಲೂ ಬೀರಲಿದೆ ಎಂದು ಹೇಳಲಾಗುತ್ತಿದೆ.
ಟಿಕೆಟ್‌ಗಳಿಗೆ ಜಿಎಸ್‌ಟಿ ದರ ಏರಿಕೆ: ಐಪಿಎಲ್ ಕ್ರಿಕೆಟ್ ಪಂದ್ಯವನ್ನು ಮೈದಾನದಲ್ಲಿ ವೀಕ್ಷಣೆ ಮಡುವ ಕ್ರಿಕೆಟ್ ಅಭಿಮಾನಿಗಳ ಜೇಬಿಗೆ ಕತ್ತರಿ ಬೀಳಲಿದೆ. ಐಪಿಎಲ್ ಟಿಕೆಟ್‌ಗಳಿಗೆ ಜಿಎಸ್‌ಟಿ ದರವನ್ನ ಶೇ. 28ರಿಂದ ಶೇ.40ಕ್ಕೆ ಏರಿಕೆ ಮಾಡಲಾಗಿದೆ. ಇದು ಇದೇ 2025ರ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ ಎಂದು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತಿಳಿಸಲಾಗಿದೆ.
ಈ ಜಿಎಸ್‌ಟಿ ಏರಿಕೆ ಪರಿಣಾಮ ದೇಶಾದ್ಯಂತ ಕ್ರಿಕೆಟ್ ಪ್ರೇಮಿಗಳು ಹೆಚ್ಚಿನ ದರ ಕಟ್ಟಬೇಕಾದ ಪರಿಸ್ಥಿತಿ ಎದುರಿಸುವಂತಹ ಪರಿಸ್ಥಿತಿ ಇದೆ. ಈ ಹೊಸ ಜಿಎಸ್‌ಟಿ ದರವು ಸೆಪ್ಟೆಂಬರ್ 22, 2025ರಿಂದ ಜಾರಿಗೆ ಬರಲಿದೆ. ಇದರ ಪ್ರಕಾರ, ಪ್ರತಿ 1,000 ರೂಪಾಯಿ ವೆಚ್ಚಕ್ಕೆ 120 ರೂಪಾಯಿಗೂ ಹೆಚ್ಚು ಪಾವತಿ ಮಾಡಬೇಕಾಗುತ್ತದೆ.
500 ರೂಪಾಯಿ ಟಿಕೆಟ್‌ನ ಬೆಲೆ ಇದೀಗ 640-700 ರೂಪಾಯಿಗೆ ಏರಿಕೆ ಆಗಲಿದೆ. 1,000 ರೂಪಾಯಿ ಟಿಕೆಟ್ ಬೆಲೆ 1,280- 1,400 ರೂಪಾಯಿ ಆಗಲಿದೆ. 2,000 ರೂಪಾಯಿ ಟಿಕೆಟ್‌ನ ಬೆಲೆ 2,560-2,800 ರೂಪಾಯಿಗೆ ಹೆಚ್ಚಳ ಆದಂತಾಗಲಿದೆ. ಈ ಹೊಸ ನಿಯಮ ಕೇವಲ ಐಪಿಎಲ್ ಮತ್ತು ಕೆಲವು ಪ್ರೀಮಿಯಂ ಕ್ರೀಡಾಕೂಟಗಳಿಗೆ ಮಾತ್ರ ಅನ್ವಯ ಆಗುತ್ತದೆ. ಸಾಮಾನ್ಯ ಕ್ರಿಕೆಟ್ ಪಂದ್ಯಗಳಿಗೆ ಶೇಕಡ 18ರಷ್ಟು ಜಿಎಸ್‌ಟಿ ಮುಂದುವರೆಯಲಿದೆ ಎಂದು ತಿಳಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಣೆ ಮಾಡುವವರ ಸಂಖ್ಯೆ ಕಡಿಮೆ ಐಪಿಎಲ್‌ಗೆ ಹೋಲಿಕೆ ಮಾಡಿದರೆ. ಆದ್ದರಿಂದ ಇಂಡಿಯನ್ಸ್ ಪ್ರೀಮಿಯರ್ ಲೀಗ್ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಲೀಗ್‌ನಲ್ಲಿ ಸ್ಥಾನ ಅಲಂಕರಿಸಿದೆ. ಒಂದೊಂದು ಟೀಂಗೆ ಇಷ್ಟು ಅಭಿಮಾನಿ ಬಳಗ ಅಂತಾ ಇರುತ್ತದೆ. ಇದು ಪ್ರತಿ ಆವೃತ್ತಿಗೂ ಹೆಚ್ಚಳ ಆಗುತ್ತಲಿರುತ್ತದೆ.












Click it and Unblock the Notifications