IPL Auction: 18 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಸೇರಿದ ಅರ್ಷದೀಪ್ ಸಿಂಗ್
ಟೀಂ ಇಂಡಿಯಾ ವೇಗದ ಬೌಲರ್ ಅರ್ಷದೀಪ್ ಸಿಂಗ್ ಐಪಿಎಲ್ ಮೆಗಾ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಹರಾಜಾಗಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅರ್ಷದೀಪ್ ಸಿಂಗ್ ಮೊದಲು ಹರಾಜಿಗೆ ಬಂದರು. ಎಲ್ಲಾ ಫ್ರಾಂಚೈಸಿಗಳು ಅವರನ್ನು ಖರೀದಿ ಮಾಡಲು ಭಾರಿ ಸ್ಪರ್ಧೆ ಮಾಡಿದವು ಕೊನೆಗೆ ಅರ್ಷದೀಪ್ ಸಿಂಗ್ ಆರ್ ಟಿಎಂ ಮೂಲಕ 18 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಮರಳಿದರು.
ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಅರ್ಷದೀಪ್ ಸಿಂಗ್‌ಗಾಗಿ ಭಾರಿ ಪೈಪೋಟಿ ನಡೆಸಿದವು. ಆರ್ ಸಿಬಿ, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಕೂಡ ಅರ್ಷದೀಪ್‌ರನ್ನು ಖರೀದಿ ಮಾಡಲು ರೇಸ್‌ನಲ್ಲಿ ಬಂದರೂ ಬಳಿಕ ಹಿಂದದೆ ಸರಿದರು. ಕೊನೆಗೆ ಸನ್‌ರೈಸರ್ಸ್ ಹೈದಾರಾಬದ್ 15.75 ಕೋಟಿ ರೂಪಾಯಿಗೆ ಬಿಡ್ ಗೆದ್ದಿತು. ಆದರೆ ಪಂಜಾಬ್ ಸಿಂಗ್ಸ್ ರೈಟ್ ಟು ಮ್ಯಾಚ್ (ಆರ್ ಟಿಎಂ) ಬಳಸಲು ಮುಂದಾಯಿತು.

ಬಳಿಕ ಸನ್‌ರೈಸರ್ಸ್ ಹೈದರಾಬಾದ್ ಬಿಡ್ ಮೊತ್ತವನ್ನು 18 ಕೋಟಿ ರೂಪಾಯಿಗೆ ಏರಿಸಿದರೂ, ಪಂಜಾಬ್ ಕಿಂಗ್ಸ್ ಅರ್ಷದೀಪ್ ಸಿಂಗ್‌ರನ್ನು ಆರ್ ಟಿಎಂ ಮಾಡಿಕೊಳ್ಳಲು ನಿರ್ಧರಿಸಿತು. ಅಂತಿಮವಾಗಿ ಅರ್ಷದೀಪ್ ಸಿಂಗ್ ತಮ್ಮ ಹಳೆಯ ತಂಡಕ್ಕೆ ವಾಪಸಾದರು.












Click it and Unblock the Notifications