ಐಪಿಎಲ್ ಶೀಘ್ರದಲ್ಲೆ ಎರಡುವರೆ ತಿಂಗಳಿಗೆ ವಿಸ್ತರಣೆ: ಜಯ್ ಶಾ ಭರವಸೆ
ಮುಂಬೈ, ಜೂನ್ 29: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮುಂದಿನ ಅಂತಾರಾಷ್ಟ್ರೀಯ ಕ್ಯಾಲೆಂಡರ್‌ನಲ್ಲಿ 10 ವಾರಗಳ ವಿಸ್ತೃತ ವಿಂಡೋವನ್ನು ಹೊಂದಿರಲಿದೆ. ವಿಶ್ವದ ಎಲ್ಲಾ ಅಗ್ರ ಕ್ರಿಕೆಟಿಗರು ಜನಪ್ರಿಯ ಟಿ20 ಲೀಗ್‌ನಲ್ಲಿ ಭಾಗವಹಿಸುವುದಕ್ಕೆ ಅವಕಾಶ ಮಾಡಿಕೊಡಲು ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಎರಡು ತಿಂಗಳ ಕಾಲ ನಡೆಯುತ್ತಿದೆ. ಆದರೆ ಮುಂಬರುವ ಐಸಿಸಿ ಫ್ಯೂಚರ್ ಟೂರ್ ಪ್ರೋಗ್ರಾಮ್(ಎಫ್‌ಟಿಪಿ) ವೇಳೆ ಟೂರ್ನಿಯನ್ನು 10 ವಾರಗಳ ಅಂದರೆ ಎರಡವರೆ ತಿಂಗಳ ಕಾಲ ನಡೆಸುವುದಕ್ಕೆ ಬಯಸುತ್ತಿರುವುದಾಗಿ ಜಯ್ ಶಾ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಆದರೆ ಬಿಸಿಸಿಐ ಸದ್ಯಕ್ಕೆ ಈಗಿರುವ 10-ತಂಡಗಳ ಸ್ಪರ್ಧೆಗೆ ಮತ್ತಷ್ಟು ಫ್ರಾಂಚೈಸಿಗಳನ್ನು ಸೇರಿಸುವ ಯಾವುದೇ ಯೋಜನೆಗಳನ್ನು ತಕ್ಷಣಕ್ಕೆ ಹೊಂದಿಲ್ಲ. ಹೆಚ್ಚಿನ ತಂಡಗಳ ಸೇರ್ಪಡೆ ಲೀಗ್ ಗುಣಮಟ್ಟವನ್ನು ದುರ್ಬಲಗೊಳಿಸಬಾರದು ಎಂದು ಶಾ ತಿಳಿಸಿದ್ದಾರೆ.
" ನಾವು ಐಪಿಎಲ್ ವಿಸ್ತರಣೆಯ ವಿಚಾರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮತ್ತು ಹಲವಾರು ಇತರ ಕ್ರಿಕೆಟ್ ಮಂಡಳಿಗಳೊಂದಿಗೆ ಚರ್ಚಿಸುತ್ತಿದ್ದೇವೆ. ಪಂದ್ಯಾವಳಿ ಎಲ್ಲರಿಗೂ ಪ್ರಯೋಜನಕಾರಿಯಾಗಿರುವುದರಿಂದ ಅವರುಗಳಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಂಡಿದ್ದೇವೆ. ಮುಂದಿನ ಐಸಿಸಿ ಎಫ್‌ಟಿಪಿ ಕ್ಯಾಲೆಂಡರ್‌ನಲ್ಲಿ ಐಪಿಎಲ್ ಎರಡೂವರೆ ತಿಂಗಳ ಅವಧಿಯಾಗಿರಲಿದೆ ಎಂದು ನಿನಗೆ ಭರವಸೆ ನೀಡುತ್ತೇನೆ" ಎಂದು ಶಾ ತಿಳಿಸಿದ್ದಾರೆ.

ಪ್ರಸ್ತುತ ಎರಡು ತಿಂಗಳ ಕಾಲ ನಡೆಯುತ್ತಿದೆ. ಈ ಸಂದರ್ಭದಲ್ಲಿ ಇಡೀ ಅಂತಾರಾಷ್ಟ್ರೀಯ ಕ್ರಿಕೆಟ್ ಪರಿಣಾಮಕಾರಿಯಾಗಿ ಸ್ಥಗಿತಗೊಳ್ಳುತ್ತಿದೆ. ಐಪಿಎಲ್‌ನಲ್ಲಿ ಒಟ್ಟು 74 ಪಂದ್ಯಗಳ ನಡೆಯುತ್ತಿವೆ, ಆದರೆ 2027ರ ಆವೃತ್ತಿಯ ವೇಳೆಗೆ ಐಪಿಎಲ್ ಪಂದ್ಯಗಳ ಸಂಖ್ಯೆ 94ಕ್ಕೆ ಏರಿಕೆಯಾಗಲಿದೆ. ಐಸಿಸಿ ಮುಂದಿನ ತಿಂಗಳು 2024-2031 ಅವಧಿಗೆ ಭವಿಷ್ಯದ ಪ್ರವಾಸ ಕಾರ್ಯಕ್ರಮ(ಎಫ್‌ಟಿಪಿ) ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ. ಈ ವೇಳೆ ಬಿಸಿಸಿಐ ಐಪಿಎಲ್ ವಿಸ್ತರಣೆಯ ಬಗ್ಗೆ ಸಭೆಯಲ್ಲಿ ತಿಳಿಸಲಿದೆ ಎನ್ನಲಾಗುತ್ತಿದೆ.

ಇದೇ ತಿಂಗಳು 2023-2027ರ ಐಪಿಎಲ್ ಮಾಧ್ಯಮ ಪ್ರಸಾರದ ಹಕ್ಕನ್ನು ಬಿಸಿಸಿಐ ಬರೋಬ್ಬರಿ 48,390 ಕೋಟಿ ರೂಗಳಿಗೆ ಮಾರಾಟ ಮಾಡಿ ವಿಶ್ವದ ಗಮನ ಸೆಳೆದಿತ್ತು. ಅಲ್ಲದೆ ಭಾರತೀಯ ಟಿ20 ಲೀಗ್ ಪಂದ್ಯದ ಆಧಾರದಲ್ಲಿ ಈಗಾಗಲೆ ಇಂಗ್ಲೀಷ್ ಪ್ರೀಮಿಯರ್ ಲೀಗ್ ಫುಟ್‌ಬಾಲ್, ಎನ್‌ಬಿಎ ಸೇರಿದಂತೆ ವಿಶ್ವದ ಹಲವು ಕ್ರೀಡೆಗಳನ್ನು ಹಿಂದಿಕ್ಕಿದೆ. ಪ್ರಸ್ತುತ ಐಪಿಎಲ್ ಪಂದ್ಯವೊಂದರ ಪ್ರಸಾಕ್ಕೆ 114 ಕೋಟಿ ರೂ. ಪಡೆಯಲಿದೆ. ಹಾಗಾಗಿ ನಗದು ಸಮೃದ್ಧ ಲೀಗ್‌ಅನ್ನು ಮತ್ತಷ್ಟು ದಿನಕ್ಕೆ ವಿಸ್ತರಿಸಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ.












Click it and Unblock the Notifications