IPL Auction 2025: ಐಪಿಎಲ್ ಹರಾಜಿನಲ್ಲಿ ಮಾರಾಟವಾದ ಆಟಗಾರರ ಪಟ್ಟಿ, ಮೊತ್ತ, ತಂಡ- ಮಾಹಿತಿ, ಅಂಕಿಅಂಶ ತಿಳಿಯಿರಿ
ಭಾನುವಾರ ಆರಂಭಗೊಂಡಿರುವ ಐಪಿಎಲ್ ಹರಾಜು ಪ್ರಕ್ರಿಯೆ ಹಲವು ದಾಖಲೆಗಳಿಗೆ ಕಾರಣವಾಗಿದೆ. ಭಾರತದ ಖ್ಯಾತ ಆಟಗಾರರು ದಾಖಲೆಯ ಮಟ್ಟಕ್ಕೆ ಮಾರಾಟವಾಗಿದ್ದಾರೆ. ಬ್ಯಾಟರ್ ರಿಷಬ್ ಪಂತ್ ಅವರು ಬರೊಬ್ಬರಿ ₹27 ಕೋಟಿಗೆ ಮಾರಾಟವಾಗಿದ್ದಾರೆ. ಇವರು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮತ್ತೊಬ್ಬ ಸ್ಪೋಟಕ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು 26.75 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ. ಅವರು ಪಂಜಾಬ್ ಕಿಂಗ್ಸ್ ಪರ ಆಡಲಿದ್ದಾರೆ. ಸ್ಪೋಟಕ ಬ್ಯಾಟರ್‌ಗಳಾದ ದೇವದತ್ತ ಪಡಿಕಲ್ ಹಾಗೂ ಡೇವಡ್ ವಾರ್ನರ್ ಅವರು ಮಾರಾಟವಾಗದೇ ಉಳಿದಿರುವುದು ಅಚ್ಚರಿ ತಂದಿದೆ.
ಐಪಿಎಲ್‌ನಿಂದಲೇ ಜನಪ್ರಿಯತೆ ಗಳಿಸಿರುವ ವೆಂಕಟೇಶ್ ಅಯ್ಯರ್ ಅವರಿಗೆ ಕೋಲ್ಕತ್ತ ನೈಟ್ ರೈಡರ್ಸ್ ₹23.75 ಕೋಟಿ ನೀಡಿದೆ. ಇಶಾನ್ ಕಿಶನ್ ಅವರನ್ನು ಖರೀದಿಸಿರುವ ಹೈದರಾಬಾದ್ ತಂಡವು ₹11.25 ಕೋಟಿ ನೀಡಿದೆ. ಬೌಲರ್ ಹರ್ಷದೀಪ್ ಸಿಂಗ್ ಅವರು 18 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ. ಅವರು ಪಂಜಾಬ್ ಪರ ಆಡಲಿದ್ದಾರೆ. ಗುಜರಾತ್ ಟೈಟನ್ಸ್ ಪರ ಆಡಲಿರುವ ಮಾರಕ ಬೌಲರ್ ರಬಾಡಾ ಅವರು ₹10.75 ಕೋಟಿಗೆ ಮಾರಾಟವಾಗಿದ್ದಾರೆ.

ಐಪಿಎಲ್ ಹರಾಜಿನಲ್ಲಿ ಮಾರಾಟವಾದ ಆಟಗಾರರ ಪಟ್ಟಿ
ಭಾರತದ ವೇಗಿ ಮೊಹಮ್ಮದ್ ಸಿರಾಜ್: ಗುಜರಾತ್ ಟೈಟಾನ್ಸ್‌ಗೆ ₹ 12.25 ಕೋಟಿಗೆ ಮಾರಾಟವಾಗಿದ್ದಾರೆ.
ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟೋನ್: ರಾಯಲ್ ಚಾಲೆಂಜರ್ಸ್‌ಗೆ ₹8.75 ಕೋಟಿಗೆ ಮಾರಾಟವಾಗಿದ್ದಾರೆ.
ಭಾರತದ ಬ್ಯಾಟರ್ ಕೆಎಲ್ ರಾಹುಲ್: ದೆಹಲಿ ಕ್ಯಾಪಿಟಲ್ಸ್‌ಗೆ ₹14 ಕೋಟಿಗೆ ಮಾರಾಟವಾಗಿದ್ದಾರೆ.
ಭಾರತದ ವೇಗಿ ಹರ್ಷಲ್ ಪಟೇಲ್: ಸನ್‌ರೈಸರ್ಸ್ ಹೈದರಾಬಾದ್‌ಗೆ ₹ 8 ಕೋಟಿಗೆ ಮಾರಾಟವಾಗಿದ್ದಾರೆ.
ನ್ಯೂಜಿಲೆಂಡ್ ಆಲ್ ರೌಂಡರ್ ರಚಿನ್ ರವೀಂದ್ರ: ಚೆನ್ನೈ ಸೂಪರ್ ಕಿಂಗ್ಸ್‌ಗೆ ₹4 ಕೋಟಿಗೆ ಮಾರಾಟವಾಗಿದ್ದಾರೆ.
ಭಾರತ ಸ್ಪಿನರ್ ರವಿಚಂದ್ರನ್ ಅಶ್ವಿನ್: ಚೆನ್ನೈ ಸೂಪರ್ ಕಿಂಗ್ಸ್‌ಗೆ ₹9.75 ಕೋಟಿಗೆ ಮಾರಾಟವಾಗಿದ್ದಾರೆ.
ಭಾರತದ ವೇಗಿ ಅರ್ಷದೀಪ್ ಸಿಂಗ್: ಪಂಜಾಬ್ ಕಿಂಗ್ಸ್‌ಗೆ ₹18 ಕೋಟಿಗೆ ಮಾರಾಟವಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಬೌಲರ್ ಕಗಿಸೊ ರಬಾಡ: ಗುಜರಾತ್ ಟೈಟಾನ್ಸ್‌ಗೆ ₹10.75 ಕೋಟಿಗೆ ಮಾರಾಟವಾಗಿದ್ದಾರೆ.
ಭಾರತದ ಬ್ಯಾಟರ್ ಶ್ರೇಯಸ್ ಅಯ್ಯರ್: ಪಂಜಾಬ್ ಕಿಂಗ್ಸ್‌ಗೆ ₹ 26.75 ಕೋಟಿಗೆ ಮಾರಾಟವಾಗಿದ್ದಾರೆ.
ಇಂಗ್ಲೆಂಡ್‌ನ ಜೋಸ್ ಬಟ್ಲರ್: ಗುಜರಾತ್ ಟೈಟಾನ್ಸ್‌ಗೆ ₹15.75 ಕೋಟಿಗೆ ಮಾರಾಟವಾಗಿದ್ದಾರೆ.
ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್: ದೆಹಲಿ ಕ್ಯಾಪಿಟಲ್ಸ್‌ಗೆ ₹11.75 ಕೋಟಿಗೆ ಮಾರಾಟವಾಗಿದ್ದಾರೆ.
ಭಾರತದ ಬ್ಯಾಟರ್ ರಿಷಭ್ ಪಂತ್: ಲಕ್ನೋ ಸೂಪರ್ ಜೈಂಟ್ಸ್‌ಗೆ ₹ 27 ಕೋಟಿಗೆ ಮಾರಾಟವಾಗಿದ್ದಾರೆ.
ಭಾರತದ ವೇಗಿ ಮೊಹಮ್ಮದ್ ಶಮಿ: ಸನ್‌ರೈಸರ್ಸ್ ಹೈದರಾಬಾದ್‌ಗೆ ₹ 10 ಕೋಟಿಗೆ ಮಾರಾಟವಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್: ಲಕ್ನೋ ಸೂಪರ್ ಜೈಂಟ್ಸ್‌ಗೆ ₹ 7.5 ಕೋಟಿಗೆ ಮಾರಾಟವಾಗಿದ್ದಾರೆ.
ಭಾರತದ ಬೌಲರ್ ಯಜುವೇಂದ್ರ ಚಹಾಲ್: ಪಂಜಾಬ್ ಕಿಂಗ್ಸ್‌ಗೆ ₹ 18 ಕೋಟಿಗೆ ಮಾರಾಟವಾಗಿದ್ದಾರೆ.
ನ್ಯೂಜಿಲೆಂಡ್‌ನ ಡೆವೊನ್ ಕಾನ್ವೆ: ಚೆನ್ನೈ ಸೂಪರ್ ಕಿಂಗ್ಸ್‌ಗೆ ₹6.25 ಕೋಟಿಗೆ ಮಾರಾಟವಾಗಿದ್ದಾರೆ.
ಭಾರತದ ರಾಹುಲ್ ತ್ರಿಪಾಠಿ: ಚೆನ್ನೈ ಸೂಪರ್ ಕಿಂಗ್ಸ್‌ಗೆ ₹ 3.4 ಕೋಟಿಗೆ ಮಾರಾಟವಾಗಿದ್ದಾರೆ.
ಆಸ್ಟ್ರೇಲಿಯಾದ ಜೇಕ್ ಫ್ರೇಸರ್ ಮೆಕ್‌ಗುರ್ಕ್: ದೆಹಲಿ ಕ್ಯಾಪಿಟಲ್ಸ್‌ಗೆ ₹9 ಕೋಟಿಗೆ ಮಾರಾಟವಾಗಿದ್ದಾರೆ.












Click it and Unblock the Notifications