IPL 2026 RCB: ಆರ್‌ಸಿಬಿಗೆ ಯಾರೂ ಊಹಿಸದ ಸ್ಟಾರ್ ಆಲ್‌ರೌಂಡರ್ ಎಂಟ್ರಿ..
IPL 2026 RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿಯು ಬಲಿಷ್ಠ ಪಂಜಾಬ್ ಕಿಂಗ್ಸ್ ಮಣಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇದೀಗ ಎಲ್ಲರ ಚಿತ್ತ 19ನೇ ಸೀಸನ್‌ನತ್ತ ನೆಟ್ಟಿದೆ. ಈಗಾಗಲೇ ಮಿನಿ ಹರಾಜಿಗೂ ಮುನ್ನ ತಂಡಗಳು ಕೆಲ ಆಟಗಾರರನ್ನು ಬಿಡುಗಡೆಗೊಳಿಸಿವೆ. ಇದರ ಬೆನ್ನಲ್ಲೇ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಲ್‌ರೌಂಡರ್ ಕೊಂಡುಕೊಳ್ಳಲು ಸಖತ್ ಪ್ಲಾನ್ ನಡೆಸಿದೆ. ಹಾಗಾದ್ರೆ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆಡಿದ 17 ಆವೃತ್ತಿಗಳಲ್ಲೂ ಆರ್‌ಸಿಬಿ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ, 18ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಭರ್ಜರಿಯಾಗಿ ಗೆಲ್ಲುವ ಮೂಲಕ ಟ್ರೋಫಿ ಇಲ್ಲ ಎನ್ನುವ ಕೊರಗಿಗೆ ತೆರೆ ಎಳೆಯಿತು. ಇದೀಗ ಏನಿದ್ದರೂ ಎಲ್ಲರ ಚಿತ್ತ 2026ರ ಸೀಸನ್‌ನತ್ತ ನೆಟ್ಟಿದ್ದು, ಮಿನಿ ಹಾರಾಜಿನಲ್ಲಿ ಹೊಡೆದರೆ ಆನೆ ಹೊಡೆಯಬೇಕೆನ್ನುವ ಲೆಕ್ಕಾಚಾರದಲ್ಲಿ ಆರ್‌ಸಿಬಿ ಸ್ಟಾರ್ ಆಲ್‌ರೌಡರ್ ಆಟಗಾರನಿಗೆ ಗಾಳ ಹಾಕಲು ಸಿದ್ಧತೆ ಮಾಡಿಕೊಂಡಿದೆ. ಆ ಆಟಗಾರ ಯಾರು ಎನ್ನುವ ಕುತೂಹಲ ಬಹುತೇಕ ಮಂದಿಯ ತಲೆಯಲ್ಲಿರುತ್ತದೆ. ಅದಕ್ಕೆಲ್ಲ ಉತ್ತರವನ್ನು ಇಲ್ಲಿ ನೀಡಲಾಗಿದೆ ನೋಡಿ..

ಈಗಾಗಲೇ ಆರ್‌ಸಿಬಿ ಬಹುತೆಕ ಕಳೆದ ಬಾರಿಯ ಆಟಗಾರರನ್ನೇ ಉಳಿಸಿಕೊಂಡಿದೆ. ಅಷ್ಟರ ಮಟ್ಟಿಗೆ ಬಲಿಷ್ಠ ತಂಡವನ್ನು ಹೊಂದಿದೆ. 8 ಮಂದಿ ಆಟಗಾರರನ್ನು ಬಿಡುಗಡೆ ಮಾಡಿ, ಉಳಿದ 17 ಜನರನ್ನು ಉಳಿಸಿಕೊಂಡಿದೆ. ಇದೀಗ ತಂಡವನ್ನು ಮತ್ತಷ್ಟು ಬಲಪಡಿಸುವ ಆಲೋಚನೆ ಪ್ರಾಂಚೈಸಿಯದ್ದಾಗಿದೆ.
ಉಳಿದ ಹಣದಲ್ಲಿ ಇನ್ನೂ ಇಬ್ಬರು ಆಲ್‌ರೌಂಡರ್‌ಗಳನ್ನು ಖರೀದಿ ಮಾಡಲು ಪ್ಲಾನ್ ಮಾಡಿಕೊಂಡಿದ್ದು, ಈ ಸಾಲಿನಲ್ಲಿ ನ್ಯೂಜಿಲೆಂಡ್ ಆಲ್‌ರೌಂಡರ್ ರಚಿನ್ ರವೀಂದ್ರ ಕೂಡ ಇದ್ದಾರೆ ಎನ್ನಲಾಗುತ್ತಿದೆ. ಯಾಕಂದ್ರೆ ಅವರು ಬ್ಯಾಟಿಂಗ್, ಬೌಲಿಂಗ್ ಎಲ್ಲಾ ವಿಭಾಗಗಳಲ್ಲೂ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರನ್ನು ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 4 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಈ ಬಾರಿ ಬಿಡುಗಡೆಗೊಳಿಸಿದ್ದು, ಮಿನಿ ಹಾರಾಜಿನ ವೇಳೆ ಬಹುತೇಕ ತಂಡಗಳು ಅವರನ್ನು ಕೊಂಡುಕೊಳ್ಳಲು ತುದಿಗಾಲಲ್ಲಿ ಕಾಯುತ್ತಿವೆ.
ಆರ್‌ಸಿಬಿ ಕೂಡ ಈ ಸಾಲಿನಲ್ಲಿದೆ ಎನ್ನಲಾಗುತ್ತಿದೆ. ಈ ಹಿಂದೆ ರಚಿನ್ ಅವರೇ ಖುದ್ಧಾಗಿ ತಾವು ಆರ್‌ಸಿಬಿ ಸೇರಲು ಸಿದ್ಧ ಎಂದು ಹೇಳಿಕೊಂಡಿದ್ದರು. ಇದರ ಆಧಾರದ ಮೇಲೆಯೇ ಅನ್‌ಸೋಲ್ಡ್ ಆಗಿರುವ ಅವರನ್ನು ಬೆಂಗಳೂರು ತಂಡಕ್ಕೆ ಕರೆತರಲು ತೆರೆಮರೆಯಲ್ಲಿ ಕಸರತ್ತುಗಳು ನಡೆಯುತ್ತಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿ ಬಾರಿಯೂ ಕೊನೆ ಹಂತಕ್ಕೆ ಬಂದು ಸೋಲುನುಭವಿಸುತ್ತಿತ್ತು. ಯಾಕಂದ್ರೆ, ಯಾರನ್ನು ಯಾವ ಸ್ಥಾನದಲ್ಲಿ ಆಡಿಸಬೇಕು ಎನ್ನುವ ಗೊಂದಲ್ಲ ಇತ್ತು. ಈ ಗೊಂದಲಕ್ಕೆ 2025ರಲ್ಲಿ ತೆರೆ ಬಿದ್ದಂತಾಗಿದೆ. ಅಷ್ಟರ ಮಟ್ಟಿಗೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರಿತು. ಆದ್ದರಿಂದ ಮುಂದಿನ ಬಾರಿಗೆ ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಿಲ್ಲ. ಆದರೆ, ಮಿನಿ ಹರಾಜಿನಲ್ಲಿ ಆಲ್‌ರೌಂಡರ್‌ಗಳತ್ತ ಪ್ರಾಂಚೈಸಿ ಕಣ್ಣಿಟ್ಟಿದೆ. ಈ ಸಾಲಿನಲ್ಲಿ ರಚಿನ್ ರವೀಂದ್ರ ಕೂಡ ಇದ್ದಾರೆ ಎನ್ನುವ ಮಾಹಿತಿಯಿದೆ.
ಇವರನ್ನು ಐಪಿಎಲ್ 2026ರ ಮಿನಿ ಹರಾಜಿಗೆ ಮುಂಚಿತವಾಗಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬಿಡುಗಡೆ ಮಾಡಿದೆ. ಐಪಿಎಲ್ 2025ರ ಋತುವಿನಲ್ಲಿ ಅವರು 8 ಪಂದ್ಯಗಳಲ್ಲಿ 128 ಸ್ಟ್ರೈಕ್-ರೇಟ್‌ನಲ್ಲಿ 191 ರನ್‌ಗಳನ್ನು ಗಳಿಸಿದ್ದರು. ಇನ್ನೂ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 19ರ ಮಿನಿ ಹರಾಜು ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗಾಗಿ ಬರೋಬ್ಬರಿ 1355 ಆಟಗಾರರು ಹೆಸರು ನೋಂದಣು ಮಾಡಿಕೊಂಡಿದ್ದಾರೆ. ಇವರಲ್ಲಿ ಆಟಗಾರರಲ್ಲಿ 45 ಮಂದಿ ಗರಿಷ್ಠ ಬೇಸ್ ಪ್ರೈಸ್ ಘೋಷಣೆ ಮಾಡಿದ್ದಾರೆ. ಐಪಿಎಲ್ ಹರಾಜಿನ ಗರಿಷ್ಠ ಮೂಲ ಬೆಲೆ 2 ಕೋಟಿ ರೂಪಾಯಿ ಇದೀಗ ನಲ್ವತ್ತೈದು ಆಟಗಾರರು ತಮ್ಮ ಆರಂಭಿಕ ಹರಾಜು ಮೊತ್ತ 2 ಕೋಟಿ ರೂ. ಎಂದು ಘೋಷಿಸಿದ್ದಾರೆ. ಈ ಪಟ್ಟಿಯಲ್ಲಿ ಭಾರತೀಯರಾದ ವೆಂಕಟೇಶ್ ಅಯ್ಯರ್ ಹಾಗೂ ರವಿ ಬಿಷ್ಣೋಯ್ ಕೂಡ ಇದ್ದಾರೆ.
ಆರ್‌ಸಿಬಿ ಉಳಿಸಿಕೊಂಡ ಆಟಗಾರರು
* ರಜತ್ ಪಾಟಿದಾರ್ (ನಾಯಕ)
* ವಿರಾಟ್ ಕೊಹ್ಲಿ
* ದೇವದತ್ ಪಡಿಕ್ಕಲ್
* ಫಿಲ್ ಸಾಲ್ಟ್
* ಜಿತೇಶ್ ಶರ್ಮಾ (ವಿಕೆಟ್ ಕೀಪರ್)
* ಕೃನಾಲ್ ಪಾಂಡ್ಯ
* ಟಿಮ್ ಡೇವಿಡ್
* ರೊಮಾರಿಯೋ ಶೆಫರ್ಡ್
* ಜೋಶ್ ಹ್ಯಾಜಲ್‌ವುಡ್
* ಯಶ್ ದಯಾಳ್
* ಭುವನೇಶ್ವರ್ ಕುಮಾರ್
* ನುವಾನ್ ತುಷಾರ
* ರಸಿಖ್ ಸಲಾಮ್
* ಅಭಿನಂದನ್ ಸಿಂಗ್
* ಸ್ವಪ್ನಿಲ್ ಸಿಂಗ್
* ಜಾಕೋಬ್ ಬೆಥೆಲ್
* ಸುಯೇಶ್ ಶರ್ಮಾ
ಆರ್‌ಸಿಬಿ ಕೈಬಿಟ್ಟ ಆಟಗಾರರು
* ಲಿಯಾಮ್ ಲಿವಿಂಗ್‌ಸ್ಟೋನ್
* ಲುಂಗಿ ಎನ್‌ಗಿಡಿ
* ಮಯಾಂಕ್ ಅಗರ್ವಾಲ್
* ಮನೋಜ್ ಭಾಂಡಗೆ
* ಬ್ಲೆಸ್ಸಿಂಗ್ ಮುಜರಬಾನಿ
* ಸ್ವಸ್ತಿಕ್ ಚಿಕಾರ
* ಮೋಹಿತ್ ರಾಥಿ












Click it and Unblock the Notifications