IPL 2026 RCB: ಐಪಿಎಲ್ 2026 ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಆಘಾತ
IPL 2026 RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಭರ್ಜರಿಯಾಗಿ ಗೆಲ್ಲುವ ಮೂಲಕ ಆರ್‌ಸಿಬಿ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇದೀಗ ಎಲ್ಲರ ಚಿತ್ತ 2026ರ 19ನೇ ಸೀಸನ್‌ನತ್ತ ನೆಟ್ಟಿದೆ. ಬಲಿಷ್ಠ ತಂಡವನ್ನ ಹೊಂದಿರುವ ಬೆಂಗಳೂರು ಈ ಬಾರಿಯೂ ಕಪ್ ಗೆಲ್ಲಲ್ಲೇಬೇಕು ಎಂಬ ಹಠ ತೊಟ್ಟಿದೆ. ಆದರೆ, ಈ ನಡುವೆಯೇ ಆವೃತ್ತಿ ಆರಂಭಕ್ಕೂ ಮುನ್ನವೇ ರಜತ್ ಪಾಟೀದಾರ್ ಬಳಗಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆಡಿದ 17 ಸೀಸನ್‌ಗಳಿಂದಲೂ ಆರ್‌ಸಿಬಿ ಒಂದೇ ಒಂದು ಟ್ರೊಫಿ ಗೆದ್ದಿರಲಿಲ್ಲ. ಆದರೆ, ಈ ಕನಸ್ಸನ್ನು 2025ರಲ್ಲಿ ನನಸು ಮಾಡಿಕೊಳ್ಳುವ ಮೂಲಕ ಟ್ರೋಫಿ ಇಲ್ಲ ಎನ್ನುವ ಕೊರಗಿಗೆ ತೆರೆ ಎಳೆಯಿತು. ಇತ್ತೀಚೆಗಷ್ಟೇ ಐಪಿಎಲ್ 2026 ಮಿನಿ ಹರಾಜು ಪ್ರಕ್ರಿಯೆ ಕೂಡ ಮುಗಿದಿದೆ. ಇದೀಗ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಈ ನಡುವೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಘಾತಕ್ಕೆ ಒಳಗಾಗಿದೆ. ಅದೇನು ಎನ್ನುವ ಪ್ರಶ್ನೆಗೆ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ನಾಲ್ವರು ಸ್ಟಾರ್ ಆಟಗಾರರಿಗೆ ಗಾಯ: ಐಪಿಎಲ್ 2026 ಆರಂಭಕ್ಕೆ ಸಿದ್ಧತೆಗಳು ಆರಂಭ ಆಗಿವೆ. ಈ ವೇಳೆಯೇ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡಕ್ಕೆ ಆಘಾತ ಆಗಿದ್ದು, ತಂಡದ ನಾಯಕ ರಜತ್ ಪಾಟೀದಾರ್ ಸೇರಿ ನಾಲ್ವರು ಆಟಗಾರರು ಗಾಯಗೊಂಡಿದ್ದಾರೆ. 2026ರ ಟಿ-20 ವಿಶ್ವಕಪ್ ಮುಗಿದ ಬಳಿಕ, ಐಪಿಎಲ್ ಆರಂಭ ಆಗಲಿದೆ.
ಗಾಯಗೊಂಡಿರುವ ಆಟಗಾರರ ವಿವರ: ಐಪಿಎಲ್ ಆಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ರಜತ್ ಪಾಟಿದಾರ್, ಸ್ಟಾರ್ ಬೌಲರ್ ಜೋಶ್ ಹ್ಯಾಜಲ್‌ವುಡ್, ಆಲ್ರೌಂಡರ್ ಟಿಮ್ ಡೇವಿಡ್, ಫಿಲ್ ಸಾಲ್ಟ್ ಸೇರಿದಂತೆ ನಾಲ್ವರು ಪ್ರಮುಖ ಆಟಗಾರರು ಗಾಯಗೊಂಡಿದ್ದಾರೆ. ಇವೆರೆಲ್ಲರೂ ಸಹ ತಂಡಕ್ಕೆ ಪ್ರಮುಖ ಆನೆಬಲ ಇದ್ದಂತೆ. ಇವರೇ ಇದೀಗ ಇಂಜುರಿಗೆ ಒಳಗಾಗಿರುವುದು ಆರ್‌ಸಿಬಿಗೆ ದೊಡ್ಡ ಚಿಂತೆಯಾಗಿದೆ.
ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿರುವ ಆರ್‌ಸಿಬಿ ನಾಯಕ ಪಾಟಿದಾರ್ ಅವರು ಗಾಯಕ್ಕೆ ಒಳಗಾಗಿದ್ದಾರೆ. ಆದರೆ, ಪಾಟಿದರ್ ಗಾಯಕ್ಕೆ ತುತ್ತಾಗಿರುವುದು ಐಪಿಎಲ್ 2026ರ ಆರಂಭಕ್ಕೂ ಮುಂಚಿತವಾಗಿ ಆರ್‌ಸಿಬಿ ತಂಡದ ಆತಂಕಕ್ಕೆ ಕಾರಣವಾಗಿದೆ. ಇನ್ನೂ ಹೊಡಿಬಡಿ ದಾಂಡಿಗ ಬ್ಯಾಟರ್ ಟಿಮ್ ಡೇವಿಡ್ ಬಿಗ್ ಬ್ಯಾಷ್ ಲೀಗ್ ಸಮಯದಲ್ಲಿ ಗಾಯಕ್ಕೆ ಒಳಗಾಗಿದ್ದರು. ಪರ್ತ್ ಕ್ರೀಡಾಂಗಣದಲ್ಲಿ ನಡೆದ ಹೋಬಾರ್ಟ್ ಹರಿಕೇನ್ಸ್ ಮತ್ತು ಪರ್ತ್ ಸ್ಕಾರ್ಚರ್ಸ್ ನಡುವಿನ ಪಂದ್ಯದ ವೇಳೆ ಗಾಯಗೊಂಡಿದ್ದರು. ಇದು ಕೂಡ ಆರ್ಸಿಬಿ ತಂಡ ಆತಂಕಕ್ಕೆ ಒಂಗಾಗುವಂತೆ ಮಾಡಿದೆ.
ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಐಪಿಎಲ್ 2026ಕ್ಕೂ ಮುನ್ನ ಗಾಯಗೊಂಡಿರುವುದು ಆರ್‌ಸಿಬಿ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಹೇಜಲ್‌ವುಡ್ ಕಳೆದ ನವೆಂಬರ್ನಿಂದಲೂ ಗಾಯದಿಂದ ಬಳಲುತ್ತಿದ್ದು, ಇದರಿಂದ ಅವರನ್ನು ಮುಂದಿನ ಸರಣಿಯಿಂದಲೂ ಹೊರಗಿಡಲಾಗಿದೆ.
ಇಂಗ್ಲೆಂಡ್ ಸ್ಫೋಟಕ ಬ್ಯಾಟರ್ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ ಟಿ-20 ಲೀಗ್ನಲ್ಲಿ ಬೆನ್ನಿನ ಗಾಯದಿಂದ ಬಳಲುತ್ತಿದ್ದು, ಅವರನ್ನು ILT20 ಲೀಗ್ನ ಅರ್ಹತಾ ಪಂದ್ಯಗಳಿಂದ ಹೊರಗುಳಿದಿದ್ದರು. ಇನ್ನೂ ಆರ್‌ಸಿಬಿ ಪರ ಅವರು ಉತ್ತಮ ಆರಂಭಿಕ ಸ್ಥಾನ ತುಂಬಬಲ್ಲ ಆಟಗಾರರಾಗಿದ್ದಾರೆ. ಆದರೆ, ಇದೀಗ ಅವರು ಗಾಯದಿಂದ ಬಳಲುತ್ತಿರುವುದೇ ಬೆಂಗಳೂರು ತಂಡಕ್ಕೆ ಸವಾಲಾಗಿದೆ. ಈ ಹಿಂದಿ ಆವೃತ್ತಿಯಲ್ಲಿ ಇವರು ಗಾಯಗೊಂಡು ಹೊರಗುಳಿದ ವೇಳೆ ಜೇಕಬ್ ಬೆಥೆಲ್ ಅವರೇ ಆ ಸ್ಥಾನವನ್ನು ಉತ್ತಮವಾಗಿ ನಿಭಾಯಿಸಿದ್ದರು. ಮತ್ತೊಂದೆಡೆ ಆರ್‌ಸಿಬಿ ಧೈರ್ಯ ಏನೆಂದರೆ, ಒಂದು ವೇಳೆ ಸಾಲ್ಟ್ ಹೊರಗುಳಿದರೆ, ಬೆಥೆಲ್ ಸ್ಥಾನ ತುಂಬುತ್ತಾರೆಂಬುದು.
ಮತ್ತೊಂದೆಡೆ ನೋಡೋದಾದ್ರೆ ಒಬ್ಬ ಆಟಗಾರ ಹೊರಗುಳಿದರೆ, ಆ ಸ್ಥಾನ ತುಂಬಬಲ್ಲ ಆಟಗಾರರು ಇದ್ದಾರೆ. ಅಂತಹ ಬಲಿಷ್ಠ ತಂಡವನ್ನು ಆರ್‌ಸಿಬಿ ಒಳಗೊಂಡಿದೆ. ಹಿಂದಿನ ಬಾರಿ ಟ್ರೋಫಿ ಗೆಲುವಿಗೆ ಇದು ಒಂದು ಪ್ರಮುಖ ಕಾರಣ ಅಂದ್ರೆ ತಪ್ಪಾಗಲಾರದು. ಇನ್ನೂ ಈ ಬಾರಿ ಕೂಡ ತಂಡವನ್ನು ಮತ್ತಷ್ಟು ಬಲಿಷ್ಠ ಮಾಡಿಕೊಂಡಿದ್ದು, ಟ್ರೋಫಿ ಗೆಲ್ಲುವ ಭರವಸೆಯಲ್ಲಿದೆ.












Click it and Unblock the Notifications