IPL 2026 Mini Auction: ಐಪಿಎಲ್‌ 2026 ಮಿನಿ ಹರಾಜು ಸಮಯ ಮತ್ತು ಲೈವ್ ಸ್ಟ್ರೀಮಿಂಗ್ ವಿವರಗಳು

IPL 2026 Mini Auction: ಐಪಿಎಲ್‌ 2026 ಮಿನಿ ಹರಾಜು ಪ್ರಕ್ರಿಯೆ ಇಂದು (ಡಿಸೆಂಬರ್ 16) ನಡೆಯಲಿದೆ. ಹಾಗಾದ್ರೆ, ಎಷ್ಟು ಆಟಗಾರರು ಪಾಲ್ಗೊಳ್ಳಲಿದ್ದಾರೆ? ಸ್ಥಳ ಹಾಗೂ ಸಮಯಗಳ ವಿವರ ಹಾಗೂ ಯಾರು ನಡೆಸಿಕೊಡಲಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಐಪಿಎಲ್ 2026 ರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 16ರ ಮಂಗಳವಾರ ಅಬುಧಾಬಿಯ ಎತಿಹಾದ್ ಅರೆನಾದಲ್ಲಿ ನಡೆಯಲಿದೆ. ಇದು ಭಾರತದ ಹೊರಗೆ ನಡೆಯುತ್ತಿರುವ ಮೂರನೇ ಐಪಿಎಲ್ ಹರಾಜು ಆಗಲಿದೆ. ಖ್ಯಾತ ಹರಾಜುದಾರೆ, ಮಲ್ಲಿಕಾ ಸಾಗರ್ ಅವರು ಹರಾಜು ಪ್ರಕ್ರಿಯೆಗಳನ್ನು ನಡೆಸಿಕೊಡಲಿದ್ದಾರೆ.
ಯುಎಇ ಸಮಯದ ಪ್ರಕಾರ, ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಹಾಗೂ ಭಾರತೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ 2:30ಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಹರಾಜಿನಲ್ಲಿ 359 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈ ಪೈಕಿ 244 ಭಾರತೀಯ ಆಟಗಾರರು ಮತ್ತು 115 ವಿದೇಶಿ ಕ್ರಿಕೆಟಿಗರು ನೋಂದಣಿ ಮಾಡಿಕೊಂಡಿದ್ದಾರೆ.

IPL 2026 Mini Auction Date Time Venue Players List and Live Telecast Details

ಮಾಹಿತಿ ಪ್ರಕಾರ, ಇದೀಗ ಮತ್ತೆ ಮಿನಿ ಹರಾಜಿನ ಆಟಗಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ತಂಡಗಳ ಮನವಿ ಮೇರೆಗೆ ಹೆಚ್ಚುವರಿಯಾಗಿ 19 ಆಟಗಾರರ ಹೆಸರುಗಳನ್ನು ಹರಾಜು ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇದೀಗ ಒಟ್ಟು ಆಟಗಾರರ ಸಂಖ್ಯೆ 369ಕ್ಕೆ ಏರಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಒಟ್ಟು 40 ಆಟಗಾರರು ತಮ್ಮ ಮೂಲ ಬೆಲೆಯನ್ನು ಗರಿಷ್ಠ 2 ಕೋಟಿ ರೂಪಾಯಿಗೆ ನಿಗದಿ ಮಾಡಿದ್ದಾರೆ. ಇವರಲ್ಲಿ ಕೇವಲ ಇಬ್ಬರು ಭಾರತೀಯರು ಮಾತ್ರ ಸ್ಥಾನ ಪಡೆದಿದ್ದಾರೆ. ವೆಂಕಟೇಶ್ ಅಯ್ಯರ್ ಮತ್ತು ರವಿ ಬಿಷ್ಣೋಯ್ ಇದ್ದಾರೆ.

ಐಪಿಎಲ್‌ ಹರಾಜು 2026ರ ನೇರ ಪ್ರಸಾರದ ವಿವರ

* ನೇರ ಪ್ರಸಾರ ಎಲ್ಲಿ ವೀಕ್ಷಿಸಬಹುದು?: ಐಪಿಎಲ್ 2026ರಹರಾಜಿನ ನೇರ ಪ್ರಸಾರವು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲಭ್ಯ ಇರುತ್ತದೆ. ಅಥವಾ JioHotstar ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯ ಇರುತ್ತದೆ.

* ಸ್ಥಳ: ಅಬುಧಾಬಿಯ ಎತಿಹಾದ್ ಅರೆನಾ

* ಸಮಯ: ಯುಎಇ ಕಾಲಮಾನದ ಪ್ರಕಾರ ಮಧ್ಯಾಹ್ನ 1 ಗಂಟೆ (ಭಾರತೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ (2:30)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+