ಕೆಕೆಆರ್ - ಪಂಜಾಬ್ ಕಿಂಗ್ಸ್ ಪಂದ್ಯಕ್ಕೆ ಮಳೆ ಅಡ್ಡಿ; ಎರಡೂ ತಂಡಗಳಿಗೆ ತಲಾ ಒಂದು ಅಂಕ

IPL 2026 KKR Vs PBKS: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಈ ಹಿನ್ನೆಲೆ ಎರಡು ತಂಡಗಳಿಗೆ ತಲಾ ಒಂದು ಅಂಕ ನೀಡಲಾಗಿದೆ.

ಕೊಲ್ಕತ್ತಾ ನೈಟ್‌ ರೈಡರ್ಸ್‌ ನಾಯಕ ಅಜಿಂಕ್ಯ ರಹಾನೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ಕೇವಲ 3.4 ಓವರ್‌ಗಳಿಗೆ ಮಳೆ ಅಡ್ಡಿಪಡಿಸಿತು. ಆರಂಭದಲ್ಲೇ ಕೆಕೆಆರ್ ಆಘಾತ ಅನುಭವಿಸಿತ್ತು. ಪಂಜಾಬ್ ಕಿಂಗ್ಸ್‌ನ ಜೇವಿಯರ್ ಬಾರ್ಟ್ಲೆಟ್ ಎಸೆದ ಎರಡನೇ ಓವರ್‌ನಲ್ಲಿ ವಿದೇಶಿ ಆಟಗಾರರಾದ ಫಿನ್ ಅಲೆನ್ ಮತ್ತು ಕ್ಯಾಮರೂನ್ ಗ್ರೀನ್ ವಿಕೆಟ್ ಕಳೆದುಕೊಂಡಿತು. 3.4 ಓವರ್‌ಗಳಲ್ಲಿ 25 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿತ್ತು.

IPL 2026 KKR vs PBKS Match Abandoned Due to Rain at Eden Gardens Stadium Both Teams Share Points

ಬಳಿಕ ಮಳೆ ಮುಂದುವರೆದ ಕಾರಣ ಕಾರಣ ಪಂದ್ಯವನ್ನು ರದ್ದುಪಡಿಸಲಾಯಿತು. ನಿಯಮದಂತೆ ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗಿದೆ. ಈ ಫಲಿತಾಂಶದೊಂದಿಗೆ ಕೆಕೆಆರ್ ಈ ಸೀಸನ್‌ನಲ್ಲಿ ಮೊದಲ ಅಂಕಪಟ್ಟಿಯಲ್ಲಿ 8ನೇ ಸ್ಥಾನ ಅಲಂಕರಿಸಿದರೆ, ಪಂಜಾಬ್ ಕಿಂಗ್ಸ್ ಅಗ್ರಸ್ಥಾನಕ್ಕೇರಿದೆ.

ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯವು ಮಳೆಯಿಂದಾಗಿ ಅರ್ಧಕ್ಕೆ ನಿಂತ ಕಾರಣ, ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ನೀಡಲಾಯಿತು. ಈ ಫಲಿತಾಂಶವು ಕೆಕೆಆರ್ ತಂಡಕ್ಕೆ ವರದಾನವಾದರೆ, ಪಂಜಾಬ್ ಕಿಂಗ್ಸ್ ತಂಡಕ್ಕೆ ಸ್ವಲ್ಪ ನಿರಾಸೆ ಮೂಡಿಸಿದೆ.

ಪಂದ್ಯದ ಗತಿ ಬದಲಿಸಿದ ಮಳೆ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ನಿರ್ಧಾರ ಕೈಗೂಡಲಿಲ್ಲ. ತಂಡದ ಸ್ಟಾರ್ ಆಟಗಾರರಾದ ಫಿನ್ ಅಲೆನ್ ಮತ್ತು ಕ್ಯಾಮರೂನ್ ಗ್ರೀನ್ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. 4ನೇ ಓವರ್ ನಡೆಯುತ್ತಿದ್ದಾಗ ಕೆಕೆಆರ್ 25 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಕೆಕೆಆರ್ ಬ್ಯಾಟರ್‌ಗಳು ಪರದಾಡುತ್ತಿದ್ದ ಸಮಯದಲ್ಲೇ ಮಳೆ ಆರಂಭವಾಯಿತು. ಪಂದ್ಯವನ್ನು ಸ್ಥಗಿತಗೊಳಿಸಿದ ಅಂಪೈರ್‌ಗಳು ರಾತ್ರಿ 11:14ರ ವರೆಗೆ ಕಾದರು. ಮಳೆ ನಿಂತರೂ ಸಹ, ಮೈದಾನದ ಬೌಂಡರಿ ಲೈನ್ ಬಳಿ ನೀರು ನಿಂತಿದ್ದರಿಂದ ಪಂದ್ಯ ಆರಂಭಿಸಲು ಸಾಧ್ಯವಾಗಲಿಲ್ಲ. ಅಂಪೈರ್‌ಗಳು ಪಂದ್ಯ ರದ್ದುಗೊಳಿಸಿದರು.

ಮೊದಲ ಎರಡು ಪಂದ್ಯಗಳನ್ನು ಸೋತು ಸುಣ್ಣವಾಗಿದ್ದ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡಕ್ಕೆ ಈ ಪಂದ್ಯದ ರದ್ದತಿಯಿಂದಾಗಿ 1 ಅಂಕ ಲಭಿಸಿದೆ. ಸೋಲಿನ ಸುಳಿಯಲ್ಲಿದ್ದ ತಂಡಕ್ಕೆ ಮಳೆರಾಯ ಅದೃಷ್ಟ ತಂದಿದ್ದಾನೆ ಎನ್ನಲಾಗುತ್ತಿದೆ.

ಇತ್ತ ಸತತ ಎರಡು ಗೆಲುವುಗಳೊಂದಿಗೆ ಬೀಗಿದ್ದ ಪಂಜಾಬ್ ಕಿಂಗ್ಸ್, ಈ ಪಂದ್ಯ ಗೆದ್ದು 6 ಅಂಕ ಪಡೆಯುವ ಭರವಸೆಯಲ್ಲಿತ್ತು. ಆದರೆ 1 ಅಂಕಕ್ಕೆ ತೃಪ್ತಿಪಡಬೇಕಾಯಿತು. ಆದಾಗ್ಯೂ, ಒಟ್ಟು 5 ಅಂಕಗಳೊಂದಿಗೆ ಪಂಜಾಬ್ ಈಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+