ಮುಕುಲ್ ಚೌಧರಿ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ ವಿರುದ್ಧ ಲಕ್ನೋಗೆ 3 ವಿಕೆಟ್ಗಳ ರೋಚಕ ಜಯ
IPL 2026 KKR VS LSG: ಈಡನ್ ಗಾರ್ಡನ್ಸ್ನಲ್ಲಿ ಗುರುವಾರ (ಏಪ್ರಿಲ್ 9) ನಡೆದ ಐಪಿಎಲ್ 2026ರ 15ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 3 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಹರಾಜಿನಲ್ಲಿ 2.6 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿಸಲಾಗಿದ್ದ ಅನ್ಕ್ಯಾಪ್ಡ್ ಆಟಗಾರ ಮುಕುಲ್ ಚೌಧರಿ, ಅಸಾಧ್ಯವೆನಿಸಿದ್ದ ಪಂದ್ಯವನ್ನು ಏಕಾಂಗಿಯಾಗಿ ನಿಂತು ಗೆಲ್ಲಿಸಿಕೊಡುವ ಮೂಲಕ ಗಮನ ಸೆಳೆದಿದ್ದಾರೆ.
ಟಾಸ್ ಗೆದ್ದ ಲಕ್ನೋ ಸೂರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಕೊಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು. ನಾಯಕ ಅಜಿಂಕ್ಯ ರಹಾನೆ 41, ಅಂಗ್ಕ್ರಿಶ್ ರಘುವಂಶಿ 45 ಮತ್ತು ರೋವ್ಮನ್ ಪೊವೆಲ್ ಅಜೇಯ 39, ಕ್ಯಾಮೆರಾನ್ ಗ್ರೀನ್ ಅಜೇಯ 32 ರನ್ಗಳ ನೆರವಿನಿಂದ ಈ ಕೆಕೆಆರ್ ಬೃಹತ್ ರನ್ ಗಳಿಸಿತು.

ಮಿಂಚಿನ ಆಟ ಆಡಿದ ಮುಕುಲ್ ಚೌಧರಿ
ಬಳಿಕ ಕೆಕೆಆರ್ ನೀಡಿದ 182 ರನ್ಗಳ ಗುರಿ ಬೆನ್ನತ್ತಿದ ಲಕ್ನೋ ಸೂಪರರ್ ಜೈಂಟ್ಸ್ ತಂಡವು ಒಂದು ಹಂತದಲ್ಲಿ 128 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿತ್ತಿ. ಆದರೆ, ಮುಕುಲ್-ಬದೋನಿ ಉತ್ತಮ ಜೊತೆಯಾಟ ಆಡಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ಆಯುಷ್ ಬದೋನಿ ಅರ್ಧಶತಕ (54 ರನ್) ಸಿಡಿಸಿ ಆಸರೆಯಾದರು.
ಎಲ್ಎಸ್ಜಿ ಗೆಲುವಿನ ರುವಾರಿ ಮುಕುಲ್ ಚೌಧರಿ
ಇನ್ನೂ ಕೊನೆಯ ಹಂತದಲ್ಲಿ ಅಬ್ಬರಿಸಿದ ಮುಕುಲ್ ಚೌಧರಿ ಕೇವಲ 27 ಎಸೆತಗಳಲ್ಲಿ 2 ಬೌಂಡರಿ, 7 ಸಿಕ್ಸರ್ಗಳೊಂದಿಗೆ 54 ರನ್ ಚಚ್ಚುವ ಮೂಲಕ ಕೊನೆಯ ಎಸೆತದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ರಿಷಬ್ ಪಂತ್ ನಾಯಕತ್ವದ ಎಲ್ಎಸ್ಜಿಗೆ ಇದು ಸತತ ಎರಡನೇ ಗೆಲುವಾಗಿದೆ. ಇನ್ನೂ ಅಜಿಂಕ್ಯ ರಹಾನೆ ನಾಯಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ನಾಲ್ಕು ಪಂದ್ಯಗಳಲ್ಲಿ ಮೂರನೇ ಸೋಲಾಗಿದ್ದು, ಅಂಕಪಟ್ಟಿಯಲ್ಲಿ ಹಿನ್ನೆಡೆ ಅನುಭವಿಸಿದೆ.
ಕೆಕೆಆರ್ಗೆ ಮುಳುವಾದ ಮುಕುಲ್ ಚೌಧರಿ
ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಸೋಲಿನ ದವಡೆಯಲ್ಲಿದ್ದಾಗ, ಆಪದ್ಭಾಂದವನಂತೆ ಬಂದು ತಂಡವನ್ನು ದಡ ಸೇರಿಸಿದವರು ಮುಕುಲ್ ಚೌಧರಿ. ಕೇವಲ 27 ಎಸೆತಗಳಲ್ಲಿ 54 ರನ್ ಸಿಡಿಸಿದ ಇವರು, ತಮ್ಮ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 7 ಭರ್ಜರಿ ಸಿಕ್ಸರ್ ಚಚ್ಚುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಯಾರು ಈ ಮುಕುಲ್ ಚೌಧರಿ?
ಮುಕುಲ್ ಚೌಧರಿ ದೇಶೀಯ ಕ್ರಿಕೆಟ್ನಲ್ಲಿ ಮಿಂಚುತ್ತಿರುವ ಅನ್ಕ್ಯಾಪ್ಡ್ ಆಟಗಾರ. ಇವರು ತಮ್ಮ ಸ್ಫೋಟಕ ಬ್ಯಾಟಿಂಗ್ ಶೈಲಿಯಿಂದಲೇ ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸಿಗಳ ಗಮನ ಸೆಳೆದಿದ್ದರು. ಐಪಿಎಲ್ 2026ರ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಇವರ ಮೇಲೆ ಭರವಸೆಯಿಟ್ಟು 2.6 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಮೊದಲ ಕೆಲವು ಪಂದ್ಯಗಳಲ್ಲಿ ಅವಕಾಶಕ್ಕಾಗಿ ಕಾದಿದ್ದ ಇವರು, ಸಿಕ್ಕ ಮೊದಲ ಅವಕಾಶದಲ್ಲೇ ತಮ್ಮ ಪ್ರದರ್ಶನವನ್ನು ಸಾಬೀತುಪಡಿಸಿದ್ದಾರೆ.
ಕೆಕೆಆರ್ ಬೌಲರ್ಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಸುನಿಲ್ ನರೈನ್ ಅವರಂತಹ ದಿಗ್ಗಜರ ಎದುರು ಸಿಕ್ಸರ್ಗಳ ಸುರಿಮಳೆಯನ್ನೇ ಸುರಿಸಿದರು. ಲಕ್ನೋ ತಂಡವು 128 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿತ್ತು. ಆದರೆ ಮುಕುಲ್ ಚೌಧರಿ ಕ್ರೀಸ್ಗೆ ಬಂದ ನಂತರ ಪಂದ್ಯದ ಚಿತ್ರಣವೇ ಬದಲಾಯಿತು.
ಕೊನೆಯ ಓವರ್ಗಳಲ್ಲಿ ಬೌಂಡರಿಗಿಂತ ಸಿಕ್ಸರ್ಗಳ ಮೇಲೆಯೇ ಕಣ್ಣಿಟ್ಟಿದ್ದ ಮುಕುಲ್, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಪಂದ್ಯವು ಕೊನೆಯ ಎಸೆತದವರೆಗೆ ಸಾಗಿತ್ತು. ಒತ್ತಡದ ನಡುವೆಯೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಮುಕುಲ್, ಲಕ್ನೋ ಗೆಲ್ಲಿಸುವ ಮೂಲಕ 2 ಅಂಕಗಳನ್ನು ತಂದುಕೊಟ್ಟರು.
ರಿಷಬ್ ಪಂತ್ ನಾಯಕತ್ವದ ಲಕ್ನೋ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಒಬ್ಬ ಫಿನಿಶರ್ನ ಅಗತ್ಯವಿತ್ತು. ಮುಕುಲ್ ಚೌಧರಿ ಅವರ ಈ ಇನ್ನಿಂಗ್ಸ್ ನೋಡಿದ ನಂತರ, ಲಕ್ನೋಗೆ ಒಬ್ಬ ಭರವಸೆಯ ಮ್ಯಾಚ್ ವಿನ್ನರ್ ಸಿಕ್ಕಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮುಕುಲ್ ಅವರ ಈ ಪವರ್-ಹಿಟ್ಟಿಂಗ್ ಸಾಮರ್ಥ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ 2.6 ಕೋಟಿಗೆ ಸಿಕ್ಕ ಈ ಆಟಗಾರ ಈಗ ಲಕ್ನೋ ತಂಡದ ಪಾಲಿಗೆ ಕೋಟಿ ಕೋಟಿ ಬೆಲೆಯ ಆಸ್ತಿ ಆಗಿದ್ದಾರೆ ಅಂದರೆ ತಪ್ಪಾಗಲಾರದು.
-
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
Iran 10 Demands: ಕದನ ವಿರಾಮಕ್ಕೆ ಇರಾನ್ ವಿಧಿಸಿರುವ 10 ಷರತ್ತುಗಳ ವಿವರ ಇಲ್ಲಿದೆ, ನ್ಯೂಕ್ಲಿಯರ್ ಬೇಡ ಎಂದಿದ್ಯಾಕೆ -
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ -
ನಿಮ್ಮ ಸಂಬಳಕ್ಕೆ ಎಷ್ಟು ಬೆಲೆಯ ಮನೆ ಖರೀದಿಸಬಹುದು? Viral ಆಗುತ್ತಿದೆ ಬೆಂಗಳೂರಿನ ಸಿಎ ತಿಳಿಸಿದ 20-30-40 ರೂಲ್ -
Gold Rate April 8: ಯುದ್ಧ ನಿಂತ ಬೆನ್ನಲ್ಲೇ ಚಿನ್ನ - ಬೆಳ್ಳಿ ಬೆಲೆ ಭಾರೀ ಹೆಚ್ಚಳ, ಎಷ್ಟಿದೆ ಇಂದಿನ ಚಿನ್ನದ ಬೆಲೆ -
Bengaluru Road: ಬನ್ನೇರುಘಟ್ಟ ರಸ್ತೆ ಪ್ರಯಾಣಿಕರಿಗೆ ಗುಡ್ನ್ಯೂಸ್: ಸಮಗ್ರ ಅಭಿವೃದ್ಧಿಗೆ ಜಿಬಿಎ ಮಾಸ್ಟರ್ ಪ್ಲಾನ್ -
Donald Trump: ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್ ಕಳಪೆ ಕೆಲಸ ಮಾಡಿದೆ: ಡೊನಾಲ್ಡ್ ಟ್ರಂಪ್ -
Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್ -
Iran-US-Israel War: ಪಾಕಿಸ್ತಾನದ ಮಧ್ಯಪ್ರವೇಶದಿಂದಾಗಿ ಇರಾನ್ ಮೇಲೆ ವಿನಾಶಕಾರಿ ಬಾಂಬ್ ದಾಳಿ ಇಲ್ಲ: ಡೊನಾಲ್ಡ್ ಟ್ರಂಪ್ -
IIT Baba Love Story: ಬೆಂಗಳೂರು ಮೂಲದ ಪ್ರತೀಕಾ ಕೈಹಿಡಿದ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ -
ಇರಾನ್-ಅಮೆರಿಕ ಯುದ್ಧದಲ್ಲಿ ಶರಣಾಗಿದ್ದು ಪಾಕಿಸ್ತಾನ: ಕೃಷ್ಣಭಟ್ ಬರಹ












Click it and Unblock the Notifications