Iran 10 Demands: ಕದನ ವಿರಾಮಕ್ಕೆ ಇರಾನ್ ವಿಧಿಸಿರುವ 10 ಷರತ್ತುಗಳ ವಿವರ ಇಲ್ಲಿದೆ, ನ್ಯೂಕ್ಲಿಯರ್ ಬೇಡ ಎಂದಿದ್ಯಾಕೆ
Iran 10 Demands: ಅಮೆರಿಕ, ಇಸ್ರೇಲ್ Vs ಇರಾನ್‌ಗಳ ನಡುವೆ ನಡೆಯುತ್ತಿದ್ದ ಯುದ್ಧಕ್ಕೆ ಸಂಬಂಧಿಸಿದಂತೆ ಇದೀಗ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಲಾಗಿದೆ. ಪಾಕಿಸ್ತಾನದ ಮಧ್ಯಪ್ರವೇಶದಿಂದಾಗಿ ಈ ಕದನ ವಿರಾಮ ಘೋಷಣೆ ಆಗಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್‌ನ ಸಹ ದೃಢಪಡಿಸಿದೆ. ಇದೀಗ ಇರಾನ್ 10 ಷರತ್ತುಗಳನ್ನು ವಿಧಿಸಿದೆ. ಆ ಷರುತ್ತುಗಳೇನು ಇದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
ಇರಾನ್ ಪ್ರಕಾರ ಬದ್ಧ ಕದನ ವಿರಾಮಕ್ಕಾಗಿ 10 ಷರತ್ತುಗಳನ್ನು ವಿಧಿಸಲಾಗಿದೆ. ಆ ಷರತ್ತುಗಳ ವಿವರ ಇಲ್ಲಿದೆ.
1. ಇರಾಕ್, ಲೆಬನಾನ್ ಮತ್ತು ಯೆಮೆನ್ ಮೇಲಿನ ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸುವುದು
2. ಯಾವುದೇ ಸಮಯದ ಮಿತಿಯಿಲ್ಲದೆ ಇರಾನ್ ಮೇಲಿನ ಯುದ್ಧವನ್ನು ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ನಿಲ್ಲಿಸಬೇಕು.
3. ಪ್ರದೇಶದಲ್ಲಿನ ಎಲ್ಲಾ ಸಂಘರ್ಷಗಳನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು.

4. ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವುದು
5. ಹಾರ್ಮುಜ್ ಜಲಸಂಧಿಯಲ್ಲಿ ಸ್ವಾತಂತ್ರ್ಯ ಮತ್ತು ಸಂಚರಣೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರೋಟೋಕಾಲ್ ಮತ್ತು ಷರತ್ತುಗಳನ್ನು ಸ್ಥಾಪಿಸುವುದು
6. ಇರಾನ್‌ಗೆ ಪುನರ್ ನಿರ್ಮಾಣ ವೆಚ್ಚಗಳಿಗೆ ಪರಿಹಾರದ ಸಂಪೂರ್ಣ ಪಾವತಿ
7. ಇರಾನ್ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ಸಂಪೂರ್ಣ ಬದ್ಧತೆ
8. ಯುನೈಟೆಡ್ ಸ್ಟೇಟ್ಸ್ / ಅಮೆರಿಕ ಹೊಂದಿರುವ ಇರಾನಿನ ನಿಧಿಗಳು ಮತ್ತು ಜಪ್ತಿ ಮಾಡಿದ ಆಸ್ತಿಗಳ ಬಿಡುಗಡೆ
9. ಇರಾನ್ ಯಾವುದೇ ನ್ಯೂಕ್ಲಿಯರ್ (ಅಣು) ಶಸ್ತ್ರಾಸ್ತ್ರಗಳನ್ನು ಪಡೆಯುವುದಿಲ್ಲ ಎಂದು ಸಂಪೂರ್ಣವಾಗಿ ಭರವಸೆ ನೀಡಿದೆ
10. ಮುಂದೆ ಯಾವುದೇ ದಾಳಿಗಳನ್ನು ಮಾಡುವುದಿಲ್ಲ ಎನ್ನುವ ಭರವಸೆ.
ಮೇಲಿನ ಷರತ್ತುಗಳ ಅನುಮೋದನೆಯ ನಂತರ ಎಲ್ಲಾ ರಂಗಗಳಲ್ಲಿ ತಕ್ಷಣದ ಕದನ ವಿರಾಮ ಜಾರಿಗೆ ಬರುತ್ತದೆ ಎಂದು ಇರಾನ್ ಹೇಳಿದೆ.












Click it and Unblock the Notifications