RCB: ಆರ್ ಸಿಬಿ ತಂಡದ ಅಧಿಕೃತ ಪೇಮೆಂಟ್ಸ್ ಪಾಲುದಾರ ನವಿ ಯುಪಿಐ, ಫ್ಯಾನ್ಸ್ ಗಮನಿಸಿ
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ದೇಶದ ಕೋಟ್ಯಾಂತರ ಅಭಿಮಾನಿಗಳು ಟಿ 20 IPL 2026 ಪಂದ್ಯಾವಳಿ ಶುರುವಾಗುವುದನ್ನು ಕಾಯುತ್ತಿದ್ದಾರೆ. ಅದರಲ್ಲೂ ಕರ್ನಾಟಕದ ಲಕ್ಷಾಂತರ ಫ್ಯಾನ್ಸ್ ಆರ್ಸಿಬಿ ಮ್ಯಾಚ್ ನೋಡಲು ಕಾತರರಾಗಿದ್ದಾರೆ. ಇಂದಿನಿಂದ (ಮಾ.28) ಐಪಿಎಲ್ಗೆ ಚಾಲನೆ ಸಿಗಲಿದೆ. ಈ ಂಮಧ್ಯೆ ನವಿ ಯುಪಿಐ (Navi UPI) 2026ರ ಟಿ20 ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದೊಂದಿಗೆ ತನ್ನ ಸಹಭಾಗಿತ್ವ ಪಡೆದುಕೊಂಡಿದೆ. ಅಧಿಕೃತ ಪೇಮೆಂಟ್ಸ್ ಪಾರ್ಟ್ನರ್ ಆಗಿ ಮುಂದುವರಿಯಲಿದೆ.
ಈ ವರ್ಷದ ಸಹಭಾಗಿತ್ವದ ವಿಶೇಷತೆಯಾಗಿ, ನವಿ ಯುಪಿಐ 'ಫಾಸ್ಟೆಸ್ಟ್ ಮೊಮೆಂಟ್ ಆಫ್ ದ ಮ್ಯಾಚ್ ಪವರ್ಡ್ ಬೈ ನವಿ ಯುಪಿಐ' ಎಂಬ ಹೊಸ ಪ್ರಶಸ್ತಿಯನ್ನು ಪರಿಚಯಿಸುತ್ತಿದೆ. ವಿಜೇತ ಆಟಗಾರರಿಗೆ ರೂಪಾಯಿ 50,000 ಬಹುಮಾನದ ಮೊತ್ತವನ್ನು ನವಿ ಯುಪಿಐ ಮೂಲಕ ತಕ್ಷಣವೇ ವರ್ಗಾಯಿಸಲಾಗುತ್ತದೆ ಎಂದು ನವಿ ಲಿಮಿಟೆಡ್ ಮುಖ್ಯಸ್ಥರು ತಿಳಿಸಿದ್ದಾರೆ.

ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಜೀವ್ ನರೇಶ್ ಅವರು, 'ಆರ್ಸಿಬಿ ಜೊತೆಗಿನ ಸಹಭಾಗಿತ್ವ ಮುಂದುವರಿಸುತ್ತಿರುವುದು ಸಂತೋಷ ತಂದಿದೆ. ಕ್ರಿಕೆಟ್ನಲ್ಲಿ ವೇಗದ ಕ್ಷಣಗಳೇ ಫಲಿತಾಂಶ ನಿರ್ಧರಿಸುತ್ತವೆ. ನಮ್ಮ 'ಫಾಸ್ಟೆಸ್ಟ್ ಮೊಮೆಂಟ್ ಆಫ್ ದ ಮ್ಯಾಚ್' ಪರಿಕಲ್ಪನೆಯು ನವಿ ಯುಪಿಐನ ವೇಗ ಮತ್ತು ತಕ್ಷಣದ ಪಾವತಿ ಸೇವೆಯನ್ನು ಪ್ರತಿಬಿಂಬಿಸುತ್ತದೆ' ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ರಾಜೇಶ್ ವಿ ಮೆನನ್ ಸಿಇಒ, ಆರ್ಸಿಬಿ ಮಾತನಾಡಿ ನವಿ ಸಂಸ್ಥೆಯು ತನ್ನ ನವೀನ ತಂತ್ರಜ್ಞಾನದ ಮೂಲಕ ಪಾವತಿ ವ್ಯವಸ್ಥೆಯನ್ನು ಸುಲಭಗೊಳಿಸಿದೆ. ಆರ್ಸಿಬಿ ತಂಡದ ವೇಗ ಮತ್ತು ಪ್ರಭಾವಕ್ಕೆ ಈ ಸಹಭಾಗಿತ್ವವು ಪೂರಕವಾಗಿದೆ" ಎಂದರು.
RCB- ಕ್ರಿಕೇಟ್ ಪ್ರೇಮಿಗಳ ಗಮನಕ್ಕೆ
ಇನ್ನೂ ಬೆಂಗಳೂರಿನಲ್ಲಿ ಆರ್ಸಿಬಿ ಪಂದ್ಯಾವಳಿ ನಡೆಯುವವ ದಿನದಂದು (ಮಾ.28) ಆರ್ಸಿಬಿ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು, ಅವರ ಸಂಚಾರಕ್ಕೆ ಅನುಕೂಲವಾಗುವಂತೆ ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ರೈಲು ನಿಲ್ದಾಣಗಳ ಟರ್ಮಿನಲ್ನಿಂದ ಕೊನೆ ರೈಲು ಹೊರಡುವ ಸಮಯ ರಾತ್ರಿ 11 ಗಂಟೆಗೆ ಬದಲಾಗಿ ತಡರಾತ್ರಿ 2ಗಂಟೆವರೆಗೆ ವಿಸ್ತರಿಸಲಾಗಿದೆ. ಎರಡು ಬದಿ ಟಿಕೆಟ್, ಪೇಪರ್ ಟಿಕೆಟ್, ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಇರಲಿದೆ.
ಇನ್ನೂ ಒಟ್ಟು 44ಮೆಟ್ರೋ ನಿಲ್ದಾಣಗಳಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ. ಅಹಿತಕರ ಘಟನೆಗಳು ಎದುರಾದಲ್ಲಿ ಮೆಟ್ರೋ ನಿಲ್ದಾಣಗಳ ಗೇಟ್ ಬಂದ್ ಮಾಡುವ ಅಧಿಕಾರ ಹೊಂದಿದ್ದೇವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಗದ್ದಲ, ನೂಕು ನುಗ್ಗಾಟ ಆಗದಂತೆ ಸಾರ್ವಜನಿಕರು, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವವರು ಸಹಕರಿಸುವಂತೆ ಕೋರಲಾಗಿದೆ.
-
MI Vs KKR: 14 ವರ್ಷಗಳ ಬಳಿಕ ಹೊಸ ಇತಿಹಾಸ ಬರೆದ ಮುಂಬೈ ಇಂಡಿಯನ್ಸ್; ಕೆಕೆಆರ್ ವಿರುದ್ಧ ಭರ್ಜರಿ ಜಯ -
Who is Jacob Duffy?: ಐಪಿಎಲ್ 2026 ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಪರ ಮಿಂಚಿದ ಜೇಕಬ್ ಡಫಿ ಯಾರು? -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
IPL 2026 RCB Vs SRH: ಎಸ್ಆರ್ಎಚ್ನಿಂದ 13,00,00,000 ರೂಪಾಯಿ ಮೌಲ್ಯದ ಸ್ಟಾರ್ ಆಟಗಾರ ಔಟ್ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳಿಗೆ ಆರ್ಸಿಬಿ-ಎಸ್ಆರ್ಎಚ್ ಆಟಗಾರರಿಂದ ವಿಶೇಷ ಗೌರವ -
ಚಿನ್ನಸ್ವಾಮಿಯಲ್ಲಿ ಕನ್ನಡಿಗ ದೇವ್, ವಿರಾಟ್ ಅಬ್ಬರದ ಬ್ಯಾಟಿಂಗ್: ಆರ್ಸಿಬಿ ವಿರುದ್ಧ ಎಸ್ಆರ್ಎಚ್ ಹೀನಾಯು ಸೋಲು -
ಲೈವ್ ಕಾಮೆಂಟರಿಯಲ್ಲೇ ವೀರೇಂದರ್ ಸೆಹ್ವಾಗ್-ಆರ್.ಅಶ್ವಿನ್ ಕಿತ್ತಾಟ; ಹಿರಿಯ ಆಟಗಾರರ ವರ್ತನೆಗೆ ಕ್ರೀಡಾಭಿಮಾನಿಗಳ ಆಕ್ರೋಶ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
Virat Kohli: ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ಬಳಿಕ ತನ್ನ ಆಟದ ಯಶಸ್ಸಿನ ರಹಸ್ಯ ಬಿಚ್ಚಿಟ್ಟ ವಿರಾಟ್ ಕೊಹ್ಲಿ -
IPL VIP Ticket: ಐಪಿಎಲ್ ಟಿಕೆಟ್ ನನಗಂತೂ ಬೇಡ: ಆರ್ಸಿಬಿ ಪಂದ್ಯದ ಟಿಕೆಟ್ ನಿರಾಕರಿಸಿದ ಬಿಜೆಪಿ ಶಾಸಕ ಸುರೇಶ್ ಕುಮಾರ್ -
IPL 2026: RCB ಫ್ಯಾನ್ಸ್ಗಾಗಿ ಬಿಎಂಟಿಸಿ ಬಸ್ಗಳ ಕಾರ್ಯಾಚರಣೆ, ಎಲ್ಲಿಂದ ಎಲ್ಲಿಗೆ? ಮಾರ್ಗ ಡಿಟೇಲ್ಸ್ -
Traffic Alert: ಬೆಂಗಳೂರು ಹೊರ ವರ್ತುಲ ಸವಾರರೇ ಗಮನಿಸಿ, ರಸ್ತೆ ಸಂಚಾರ ನಿರ್ಬಂಧ













Click it and Unblock the Notifications