Vastu Tips: ವಾಸ್ತು ಪ್ರಕಾರ ನಮ್ಮ ಮನೆಯ ಸುತ್ತಮುತ್ತಲಿನ ವಿನ್ಯಾಸ ಹೇಗಿರಬೇಕು

ಮನೆ ನಿರ್ಮಾಣದಲ್ಲಿ ವಾಸ್ತು ಶಾಸ್ತ್ರದ ತುಂಬಾ ಮಹತ್ವ ಪ್ರಮುಖ ಸ್ಥಾನವಿದೆ. ಮನೆ ಕಟ್ಟುವಾಗ ನಾವು ಅದರ ವಿನ್ಯಾಸ, ದಿಕ್ಕು ಮತ್ತು ಕೊಠಡಿಗಳ ವ್ಯವಸ್ಥೆ ಸೇರಿದಂತೆ ಅನೇಕ ಅಂಶಗಳನ್ನು ವಾಸ್ತು ಶಾಸ್ತ್ರದ ತತ್ವಗಳ ಆಧಾರದ ಮೇಲೆ ಅವುಗಳನ್ನು ನಾವು ಪರಿಶೀಲಿಸಲಾಗುತ್ತದೆ. ಆದರೆ ಮನೆಯ ಗೋಡೆಗಳು ಮತ್ತು ಆವರಣದ ಗೋಡೆಗಳಿಗೂ ಅನ್ವಯ ಆಗುತ್ತದೆ ಎಂಬ ಪ್ರಶ್ನೆ ಬಹುತೇಕ ಜನರಲ್ಲಿ ಮೂಡುತ್ತದೆ.

ಸಾಮಾನ್ಯವಾಗಿ ಮನೆಯ ಗೋಡೆಗಳು ವಾಸ್ತು ದೋಷಗಳನ್ನು ಉಂಟುಮಾಡುವುದಿಲ್ಲ. ಆದರೂ ಸಂಪೂರ್ಣ ಮನೆಯು ವಾಸ್ತು ಪ್ರಕಾರ ನಿರ್ಮಾಣ ಆಗುತ್ತಿದ್ದರೆ, ಕಾಂಪೌಂಡ್‌ ಅಥವಾ ಆವರಣದ ಗೋಡೆಗಳನ್ನು ಅದೇ ನಿಯಮಗಳಿಗೆ ಅನುಸಾರವಾಗಿ ನಿರ್ಮಾಣ ಮಾಡುವುದು ಉತ್ತಮ ಎಂದು ವಾಸ್ತು ತಜ್ಞರ ಅಭಿಪ್ರಾಯ ಪಡುತ್ತಾರೆ. ಯಾಕೆಂದರೆ ನಮ್ಮ ಮನೆಯ ಸುತ್ತಲಿನ ಪರಿಸರ ಮತ್ತು ನೆರೆಯ ಕಟ್ಟಡಗಳ ಪ್ರಭಾವವು ನಮ್ಮ ಮನೆಯ ಮೇಲೆ ಬೀರುತ್ತದೆ.

Vastu Tips

ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಮನೆಯ ಹಾಗು ಅದರ ಸುತ್ತಲಿನ ಆವರಣ ಆಯತಾಕಾರದಲ್ಲಿ ಇರುವುದು ಉತ್ತಮ. ಈ ನಿಯಮವನ್ನು ಪಾಲಿಸದಿದ್ದರೆ ನಮಗೆ ಆರ್ಥಿಕ ತೊಂದರೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು ಎಂಬ ನಂಬಿಕೆ ಇದೆ. ಆದ್ದರಿಂದ ಮನೆಯ ಆವರಣದ ಗೋಡೆಯ ಎತ್ತರ ಮತ್ತು ಗೋಡೆಯ ಗಾತ್ರ ಮನೆಯ ವಿನ್ಯಾಸಕ್ಕೆ ಅನುಗುಣವಾಗಿ ನಾವು ನಿರ್ಧರಿಸುವುದು ಮುಖ್ಯ ಎಂದು ತಜ್ಞರ ಸೂಚಿಸುತ್ತಾರೆ.

ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನ ಗೋಡೆಗಳು ಎತ್ತರವಾಗಿ ಮತ್ತು ಸ್ವಲ್ಪ ದಪ್ಪವಾಗಿರುವುದು ಒಳ್ಳೆಯದು. ಇದರಿಂದಾಗಿ ನಮ್ಮ ಮನೆಯೊಳಗೆ ನಕಾರಾತ್ಮಕ ಶಕ್ತಿಯು ಮನೆಯ ಒಳಗೆ ಪ್ರವೇಶಿಸದಂತೆ ತಡೆಯುತ್ತದೆ ಎಂದು ಹೇಳಲಾಗುತ್ತದೆ. ಇನ್ನೊಂದೆಡೆ ಪೂರ್ವ ಮತ್ತು ಉತ್ತರ ದಿಕ್ಕಿನ ಗೋಡೆಗಳು ತೆಳ್ಳಗಾಗಿಯೂ ಮತ್ತು ಕಡಿಮೆ ಎತ್ತರದಲ್ಲಿಯೂ ಇರಬೇಕು. ಈ ತರಹದ ವಿನ್ಯಾಸವು ಮನೆಯ ಒಳಗೆ ಸಕಾರಾತ್ಮಕ ಶಕ್ತಿಯನ್ನು ಮನೆಯ ಒಳಗೆ ಪ್ರವೇಶಿಸುವಂತೆ ಸಹಾಯ ಮಾಡುತ್ತದೆ ಎಂಬ ನಂಬಿಕೆ ಇದೆ.

ಇದಲ್ಲದೆ ಬಾಲ್ಕನಿಯ ಗೋಡೆಯು ಎಲ್ಲಿಯೂ ಮುರಿದಿರಬಾರದು ಅಥವಾ ಬಿರುಕು ಬಿಟ್ಟಿರಬಾರದು. ಈ ತರಹದ ದೋಷಗಳು ಮನೆಯೊಳಗೆ ಅಶಾಂತಿ ಮತ್ತು ಅಸ್ಥಿರತೆ ತರಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಆದ್ದರಿಂದ ಮನೆಯ ಗೋಡೆಯ ನಿರ್ಮಾಣ, ನಿರ್ವಹಣೆ ಮತ್ತು ದುರಸ್ತಿ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿಸುವುದು ಉತ್ತಮ ಎಂದು ತಜ್ಞರ ಅಭಿಪ್ರಾಯ ಆಗಿದೆ.

ಮನೆಯ ಮುಖ್ಯ ದ್ವಾರಕ್ಕೆ ಹೊಂದುವಂತೆ ಆವರಣದ ಗೋಡೆಯ ಗೇಟ್‌ನ್ನು ಸರಿಯಾದ ದಿಕ್ಕಿನಲ್ಲಿ ಸ್ಥಾಪಿಸುವುದೂ ತುಂಬಾ ಮಹತ್ವದ್ದು. ಮನೆಯ ಗೇಟ್‌ ವಾಸ್ತು ಪ್ರಕಾರ ಶುಭಕರವಾದ ದಿಕ್ಕಿನಲ್ಲಿ ಇದ್ದರೆ ಮನೆಗೆ ಮಂಗಳಕರ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯ ವಾತಾವರಣ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+