IPL 2025: 'ವಿರಾಟ್‌ ಕೊಹ್ಲಿಗಿಂತ ಶ್ರೇಯಸ್‌ ಅಯ್ಯರ್ ಬೆಟರ್': ಭಾರೀ ವೈರಲ್‌

Virat Kohli Troll: ನಿನ್ನೆ ನಡೆದ ಐಪಿಎಲ್ 2025ರ ಆವೃತ್ತಿಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗುಜರಾತ್ ಟೈಟನ್ಸ್ ವಿರುದ್ಧ ಭರ್ರಿ ಗೆಲು ಸಾಧಿಸಿದೆ. ಈ ಮೂಲಕ ಶ್ರೇಯಸ್ ಅಯ್ಯರ್ ನೇತೃತ್ವದ ನಾಯಕತ್ವದ ಪಂಜಾಬ್ ಕಿಂಗ್ಸ್ 18ನೇ ಆವೃತ್ತಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಶತಕ ತ್ಯಾಗ ಮಾಡಿರುವ ನಾಯಕ ಶ್ರೇಯಸ್‌ ಅಯ್ಯರ್‌ ಇಟ್ಟುಕೊಂಡು ಕೆಲವರು ವಿರಾಟ್ ಕೊಹ್ಲಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟ್‌ ಮಾಡಿದ ಪಂಜಾಬ್ ಕಿಂಗ್ಸ್ ನಿಗಧಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಬರೋಬ್ಬರಿ 243 ರನ್ ಕಲೆಹಾಕುವ ಮೂಲಕ ಗುಜರಾತ್‌ಗೆ 244 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಪಂಜಾಬ್‌ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ನಾಯಕ ಶ್ರೇಯಸ್‌ ಅಯ್ಯರ್ ಕೇವಲ 42 ಬಾಲ್ನಲ್ಲಿ 97 ರನ್‌ಗಳಿಸಿ ಔಟಾಗದೇ ಉಳಿದರು.

IPL 2025 Shreyas Iyer is Better than Virat Kohli Troll by Some Cricket Fans

ಈ ಗುರಿಯನ್ನು ಬೆನ್ನತ್ತಿದ್ದ ಗುಜರಾತ್ ಟೈಟನ್ಸ್ ನಿಗದಿತ 20 ಓವರ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 232 ರನ್‌ ಕಲೆಹಾಕಿದ ಬರೀ 11 ರನ್‌ಗಳ ಅಂತರದಲ್ಲಿ ಸೋಲನುಭವಿಸಿತು. ಗುಜರಾತ್ ಪರ ಬ್ಯಾಟ್‌ ಮಾಡಿದ ಸಾಯಿ ಸುದರ್ಶನ್ 74 ರನ್ ಚಚ್ಚಿದರೆ, ನಾಯಕ ಶುಭ್ಮನ್ ಗಿಲ್ 33, ಜೋಸ್ ಬಟ್ಲರ್ 54, ಶೆರ್ಫೇನ್ ರುದರ್ಫೋರ್ಡ್ 46 ರನ್ ಬಾರಿಸಿದರು. ಆದರೆ ಕೊನೆಯಲ್ಲಿ ತೆವಾಟಿಯಾ ಮತ್ತು ಶೆರ್ಫೆನ್ ಔಟಾದ ಹಿನ್ನೆಲೆ ಗುಜರಾಟ್‌ ಟೈಟಾನ್ಸ್‌ 11 ರನ್ಗಳಿಂದ ಸೋಲನುಭವಿಸಿತು.

ಪಂಜಾಬ್‌ ಬೌಲರ್‌ಗಳು ಆರಂಭದಲ್ಲಿ ಸರಿತಯಾಗಿ ಪ್ರದರ್ಶಬ್‌ ತೋರದ ಕಾರಣ ಹೆಚ್ಚು ರನ್‌ಗಳು ಬಂದವು. ಆದರೆ ಕೊನೆ ಹಂತದಲ್ಲಿ ಪಂಜಾಬ್ ಬೌಲರ್‌ಗಳು ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಕೊನೇ ಓವರ್‌ನಲ್ಲಿ ಗೆಲ್ಲಲು ಗುಜರಾತ್‌ಗೆ 27 ರನ್‌ಗಳ ಅವಶ್ಯಕತೆ ಇತ್ತು. ಈ ವೇಳೇ ಹರ್ಷದೀಪ್ ಸಿಂಗ್ ಕೇವಲ 15 ರನ್ ನೀಡಿ ಒಂದು ವಿಕೆಟ್ ಪಡೆದು ಪಂಜಾಬ್ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ಅಲ್ಲದೆ, ಪಂಜಾಬ್ಸ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ತಂಡದ ಗೆಲುವಿಗಾಗಿ ತಾವು ಸಿಡಿಸಬೇಕಾದ ಶತಕವನ್ನೇ ತ್ಯಾಗ ಮಾಡಿ ಗಮನ ಸೆಳೆದರು. 97 ರನ್ಗಳಿಸಿದ್ದ ಅಯ್ಯರ್, ಶತಕಕ್ಕೆ ಇನ್ನೂ ಕೇವಲ ಮೂರು ರನ್‌ಗಳು ಮಾತ್ರ ಬೇಕಿತ್ತು ಅಷ್ಟೇ. ಶತಕಕ್ಕೆ ಅವಕಾಶವಿದ್ದರೂ ಸಹ ತಂಡದ ಬೃಹತ್‌ ಮೊತ್ತದ ರನ್‌ಗಳ ಕಡೆ ಗಮನಹರಿಸಿದ್ದರು. ಅಲ್ಲದೆ, ನಾನ್ ಸ್ಟ್ರೈಕ್ನಲ್ಲಿ ನಿಂತು ಶಶಾಂಕ್ ಸಿಂಗ್‌ಗೆ ಸಿಂಗಲ್ ತರದೇ ಶಾಟ್‌ ಮಾಡುವಂತೆಯೂ ಪ್ರೋತ್ಸಾಹಿಸಿದರು. ಅದರಂತೆಯೇ ಕೊನೇ ಓವರ್ ಶಶಾಂಕ್‌ ಸಿಂಗ್ ಅವರೇ ಆಡಿ ಉತ್ತಮ ರನ್‌ಗಳನ್ನು ತಂದುಕೊಟ್ಟರು.

ಈ ಮೂಲಕ ಪಂಜಾಬ್‌ 243 ರನ್‌ಗಳನ್ನು ಕಲೆಹಾಕಿತು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಟ್ರೋಲ್ ಆಗಿದ್ದಾರೆ. ಅಯ್ಯರ್ ಅವರಿಗೆ ಶತಕ ಬಾರಿಸುವ ಅವಕಾಶವಿತ್ತು. ಕೊನೆಯ ಎರಡು ಓವರ್ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿದ್ದ ಶಶಾಂಕ್ ಸಿಂಗ್ಗೆ ಶಾಟ್ ಮಾಡುವಂತೆ ಅಯ್ಯಯ್ ಪ್ರೋತ್ಸಾಯಿಸಿದರು. ಅದರಂತೆಯೇ ಶಶಾಂಕ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ್‌ ಮಾಡಿದರು. ಮತ್ತೊಂದೆಡೆ ಅಯ್ಯರ್‌ ಶತಕ ತ್ಯಾಹ ಮಾಡಿದರು.

ಅಯ್ಯರ್ ಶತಕಕ್ಕೆ ಇನ್ನೂ ಕೇವಲ ಮೂರು ರನ್‌ಗಳು ಮಾತ್ರ ಬೇಕಿತ್ತು. ಆಗ ಶಶಾಂಕ್ ಸಿಂಗ್ ಸಿಂಗಲ್ ತೆಗೆದು ಸ್ಟ್ರೈಕ್ ಕೊಡುವುದಾಗಿ ಹೇಳಿದ್ದರು. ಆದರೆ, ಅಯ್ಯರ್ ಅದನ್ನು ನಿರಾಕರಿಸಿ ಬಿಗ್ ಶಾಟ್‌ ಮಾಡುವಂತೆ ಹೇಳಿದರು. ಅದರಂತೆಯೇ ಶಶಾಂಕ್ ಕೇವಲ 16 ಬಾಲ್ನಲ್ಲಿ 44 ರನ್‌ಗಳನ್ನು ಚಚ್ಚಿದರು. ಇದರ ಬೆನ್ನಲ್ಲೇ ಕೆಲವು ಕ್ರಿಕೆಟ್ ಅಭಿಮಾನಿಗಳು ವಿರಾಟ್ ಕೊಹ್ಲಿಯನ್ನು ಟ್ರೋಲ್‌ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರಿಗೆ ಹೋಲಿಕೆ ಮಾಡಿದರೆ ಶೇಯಸ್‌ ಅಯ್ಯರ್ ಅವರು ವಿಶೇಷವಾಗಿ ಕಾಣುತ್ತಾರೆ. ಅಯ್ಯರ್ಗೆ ಯಾವುದೇ ಸ್ವಾರ್ಥವಿಲ್ಲ. ಅವರೊಗೆ ವೈಯಕ್ತಿಕ ಹಿತಾಸಕ್ತಿ ಮುಖ್ಯವಲ್ಲ, ಬದಲಿಗೆ ತಂಡದ ಗೆಲುವೇ ಮುಖ್ಯ ಎಂದು ಶ್ರೇಯಸ್‌ ಅಯ್ಯರ್‌ ಅವನ್ನು ಹೊಗಳುವ ಮೂಲಕ ಕೊಹ್ಲಿ ಅವರನ್ನು ಟೀಕೆ ಮಾಡುತ್ತಿದ್ದಾರೆ. ಇದೇ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+