IPL 2025 RCB: ಸ್ಫೋಟಕ ಆಲ್‌ರೌಂಡರ್ ಆರ್‌ಸಿಬಿ ತೊರೆಯುವ ಸಾಧ್ಯತೆ

IPL 2025 RCB: ಐಪಿಎಲ್‌ 2025ನೇ ಆವೃತ್ತಿಯಲ್ಲಿ ಆರ್‌ಸಿಬಿ ಬ್ಯಾಟಿಂಗ್‌, ಬೌಲಿಂಗ್‌ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಬಂದಿದೆ. ಇದೀಗ ಪ್ಲೇ ಆಫ್‌ ತಲುಪುವ ಬೆನ್ನಲ್ಲೇ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಆರ್‌ಸಿಬಿ ಸದ್ಯ ಇದೀಗ ಪಾಯಿಂಟ್ಸ್‌ ಟೇಬಲ್‌ನಲ್ಲಿ 16 ಅಂಕಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ. ಇನ್ನು ತಂಡ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದು, ಪ್ಲೇ ಆಫ್‌ ತಲುಪುವ ಸನಿಹದಲ್ಲಿದೆ. ಈ ಬೆನ್ನಲ್ಲೇ ಸ್ಫೋಟಕ ಆಲ್‌ರೌಂಡರ್‌ವೊಬ್ಬರು ತಂಡ ತೊರೆಯುವ ಬಗ್ಗೆ ಮಾಹಿತಿಯೊಂದು ಲಭ್ಯವಾಗಿದೆ.

IPL 2025 Romario Shepherd likely to leave RCB team Before playoffs

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಒಬ್ಬರು ಕೈಕೊಟ್ಟರೆ ಮತ್ತೊಬ್ಬರು ಕೈಹಿಡಿಯುತ್ತಾರೆ. ಅಂತಹ ಸ್ಫೋಟಕ ಆಗರರನ್ನು ಆರ್‌ಸಿಬಿ ಹೊಂದಿದೆ. ಇದೀಗ ಇತ್ತೀಚೆಗಷ್ಟೇ ಸಿಎಸ್‌ಕೆ ವಿರುದ್ಧ ಬರೀ 14 ಎಸೆತಗಳಲ್ಲಿ 53 ರನ್‌ಗಳನ್ನು ಕಲೆಹಾಕಿದ ಶೆಫರ್ಡ್‌ ಪ್ಲೇ ಆಫ್‌ಗೂ ಮುನ್ನ ತಂಡ ತೊರೆಯುವ ಸಾಧ್ಯತೆಯಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಆಡಿದ್ದ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಅಬರು ಬ್ಲಾಕ್‌ ಡ್ರ್ಯಾಗನ್‌ ಅಂತಲೇ ಹೆಸರುವಾಸಿಯಾಗಿದ್ದಾರೆ. ಕೇವಲ 14 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ 53 ರನ್‌ಗಳನ್ನು ಕಲೆಹಾಕಿ ಸಿಎಸ್‌ಕೆ ತಂಡಕ್ಕೆ ಭಯ ಹುಟ್ಟಿಸಿದ್ದರು. ಅಲ್ಲದೆ, ಅಂದು ಬೃಹತ್‌ ಮೊತ್ತದತ್ತ ಕೊಂಡೊಯ್ಯುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು.

Take a Poll

ಆದರೆ, ಇದೀಗ ವೆಸ್ಟ್ ಇಂಡೀಸ್ ತಂಡದ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸದ ಏಕದಿನ ಸರಣಿಗೆ ಆಯ್ಕೆ ಆದ ಹಿನ್ನೆಲೆ ಶೆಫರ್ಡ್ ಆರ್‌ಸಿಬಿಯನ್ನು ತೊರೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಂದು ವೇಳೆ ಇವರು ತಂಡ ತೊರೆಯುವ ನಿರ್ಧಾರ ಮಾಡಿದರೆ, ಆರ್‌ಸಿಬಿಗೆ ತುಸು ಹೊಡೆತ ಬಿದ್ದಂತಾಗಲಿದೆ.

ಆರ್‌ಸಿಬಿ ಪರ ಬ್ಯಾಟ್‌ ಬೀಸಿದ್ದ ಶೆಫರ್ಡ್ ಸಿಎಸ್‌ಕೆ ತಂಡದ ಬೌಲರ್‌ಗಳ ಬೆವರಿಸಿಳಿದ್ದರು. ಮತ್ತೊಂದೆಡೆ ಸಿಎಸ್‌ಕೆ ತಂಡದ ಬೌಲರ್‌ಗಳು ಇವರಿಗೆ ಇನ್ನೂ ಹೇಗೆ ಬೌಲಿಂಗ್‌ ಮಾಡೋದು ಎಂದು ಯೋಚನೆ ಮಾಡುವಂತಾಗಿತ್ತು. ಅಷ್ಟರ ಮಟ್ಟಿಗೆ ಸ್ಫೋಟಕ ಬ್ಯಾಟಿಂಗ್‌ ಆಡಿ ಗಮನ ಸೆಳೆದಿದ್ದರು.

ಖಲೀಲ್ ಅಹ್ಮದ್‌ ಮಾಡಿದ 19ನೇ ಓವರ್​​ನಲ್ಲಿ 33 ರನ್‌, ಇನ್ನು ಕೊನೆಯ ಪತಿರಾಣ ಓವರ್‌ನಲ್ಲಿ 20 ರನ್‌ ಸಿಡಿಸಿದದರು. ಈ ಮೂಲಕ ಶೆಫರ್ಡ್ ಕೇವಲ 14 ಎಸೆತಗಳಲ್ಲಿ 53 ರನ್ ಕಲೆಹಾಕಿ ಐಪಿಎಲ್ ಇತಿಹಾಸದಲ್ಲೇ ಎರಡನೇ ಅತಿ ವೇಗದ ಅರ್ಧಶತಕ ಸಿಡಿಸಿದವರ ಪಟ್ಟಿಗೆ ಸೇರ್ಪಡೆಯಾದರು.

ಈ ಆವೃತ್ತಿಯಲ್ಲಿ ರೊಮಾರಿಯೊ ಶೆಫರ್ಡ್ ಬೆಂಚ್‌ ಕಾಯುತ್ತಿದ್ದರು. ಅವರಿಗೆ ಅವಕಾಶವೇ ಸಿಕ್ಕಿರಲಿಲ್ಲ. ಲಿವಿಂಗ್‌ಸ್ಟೋನ್ ಸತತ ವಿಫಲರಾದ ಬಳಿಕ ಶೆಫರ್ಡ್‌ಗೆ ತಂಡದಲ್ಲಿ ಆಡಲು ಅವಕಾಶ ಕಲ್ಪಿಸಲಾಯಿತು. ಈ ಅವಕಾಶವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡ ಶೆಫರ್ಡ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಆದರೆ ಇದೀಗ ವೆಸ್ಟ್ ಇಂಡೀಸ್ ತಂಡದ ಏಕದಿನ ಸರಣಿಗಳನ್ನು ಆಡುವ ಹಿನ್ನೆಲೆ ಶೆಫರ್ಡ್‌ ಆರ್‌ಸಿಬಿ ತೊರೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+