Virat Kohli New Record: ಸಿಎಸ್‌ಕೆ ವಿರುದ್ಧ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ
Virat Kohli New Record: ಐಪಿಎಲ್ 2025ರ 8ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಆರಂಭವಾಗಿದೆ. ಇನ್ನೂ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಹೊಸ ದಾಖಲೆಯೊಂದನ್ನು ಮಾಡಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಹಾಗಾದ್ರೆ ಆ ದಾಖಲೆ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಿಎಸ್‌ಕೆ ತಂಡವು ಟಾಟ್ ಗೆದ್ದು ಮೊದಲು ಬೌಲಿಂಗ್ ಅಯ್ಕೆ ಮಾಡಿತು. ಇನ್ನು ಆರ್‌ಸಿಬಿ ಪರ ಮೊದಲ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದ ವಿರಾಟ್ ಕೊಹ್ಲಿ 31 ರನ್ ಬಾರಿಸಿ ನೂರ್ ಅಹ್ಮದ್ ಬೌಲಿಂಗ್‌ನಲ್ಲಿ ರಚಿನ್ ರಂವೀದ್ರಗೆ ಕ್ಯಾಚ್ ನೀಡಿ ಪೆವಿಲಿಯನ್‌ನತ್ತ ತೆರಳಿದರು. ಅವರು ಔಟಾದರೂ ಕೂಡ ಸಿಎಸ್‌ಕೆ ವಿರುದ್ಧ ಹೊಸ ದಾಖಲೆಯೊಂದು ನಿರ್ಮಾಣ ಮಾಡಿದ್ದಾರೆ.

ಚೆನ್ನೈನ ಎಎಂ ಚಿದಂಬರಂ ಕ್ರೀಡಾಂಗಣದಲ್ಲಿಂದು ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು 31 ರನ್‌ಗಳನ್ನು ಬಾರಿಸುವ ಮೂಲಕ ಚೆನ್ನೈ ವಿರುದ್ಧ ಹೊಸ ದಾಖಲೆಯೊಂದನ್ನು ಬರೆದಿದ್ಧಾರೆ.
ಈಗಾಗಲೇ ಸಿಎಸ್‌ಕೆ ಹಾಗೂ ಆರ್‌ಸಿಬಿ ಎರಡೂ ತಂಡಗಳು ಸಹ ತಮ್ಮ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿವೆ. ಇಂದಿನ ಪಂದ್ಯದಲ್ಲಿ ಯಾವುದೇ ತಂಡ ಗೆದ್ದರು ಕೂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಅದಕ್ಕೂ ಮುಂಚೆ ಅತೀ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ.
ಆರ್‌ಸಿಬಿಯ ವಿರಾಟ್ ಕೊಹ್ಲಿ ಮತ್ತು ಸಿಎಸ್‌ಕೆ ತಂಡದ ಎಂಎಸ್ ಧೋನಿ ಇಬ್ಬರೂ ಕೂಡ ಅನುಭವಿ ಆಟಗಾರು. ಮಾತ್ರವಲ್ಲ ಇಬ್ಬರೂ ಕೂಡ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮಾತ್ರವಲ್ಲ ವಿರಾಟ್ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಫಾರ್ಮ್ ನಲ್ಲಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ.
ವಿರಾಟ್ ಕೊಹ್ಲಿ ಅವರು ಸಿಎಸ್‌ಕೆ ವಿರುದ್ಧ ಸದ್ಯ 1,084 ರನ್‌ಗಳನ್ನು ಸಿಡಿಸಿದ್ದಾರೆ. ಆ ಮೂಲಕ ಸಿಎಸ್‌ಕೆ ವಿರುದ್ಧ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಇದಕ್ಕೂ ಮುಂಚೆ 1,057 ರನ್ ಸಿಡಿಸಿರುವ ಶಿಖರ್ ಧವನ್ ಈ ಸ್ಥಾನದಲ್ಲಿದ್ದರು. ಈ ರೆಕಾರ್ಡ್ ಮುರಿಯಲು ಕೊಹ್ಲಿ ಇನ್ನೂ 5 ರನ್‌ಗಳಷ್ಟೇ ಅಗತ್ಯವಿದ್ದು, ಇಂದು ಆ ದಾಖಲೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಮತ್ತೊಂದೆಡೆ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 55 ರನ್ ಸಿಡಿಸಿದ್ದರೆ, ಟಿ-20 ಮಾದರಿಯೊಂದರಲ್ಲೇ 13,000 ರನ್ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗುತ್ತಿದ್ದರು. ಆದರೆ ಇದು ಸ್ವಲ್ಪದರಲ್ಲೇ ಕೈತಪ್ಪಿ ವಿರಾಟ್ ಕೊಹ್ಲಿ ದಾಖಲೆ ಕನಸು ಭಗ್ನವಾದಂತಾಗಿದೆ.
ಅಷ್ಟೇ ಅಲ್ಲದೆ, ಇದೇ ಪಂದ್ಯದಲ್ಲಿ 38 ರನ್ ಗಳಿಸಿದ್ದರೆ ವಿರಾಟ್ ಕೊಹ್ಲಿ ಅವರ ಟಿ-20 ಕ್ರಿಕೆಟ್‌ನಲ್ಲಿ ಆರಂಭಿಕ ಆಟಗಾರನಾಗಿ 5,000 ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಲಿದ್ದರು. ಇನ್ನು ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆ ನೋಡುವುದಾರೆ, ಅವರು ಇದುವರೆಗೆ 252 ಪಂದ್ಯಗಳನ್ನು ಆಡಿದ್ದು, ಒಟ್ಟಾರೆ 8,004 ರನ್‌ಗಳನ್ನು ಸಿಡಿಸಿದ್ದಾರೆ. ಅಲ್ಲದೆ, ಅವರು ಐಪಿಎಲ್‌ನಲ್ಲಿ 8 ಶತಕ ಹಾಗೂ 55 ಅರ್ಧಶಕತಗಳನ್ನು ಸಿಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.












Click it and Unblock the Notifications