RCB Vs CSK: ಟಾಸ್ ಗೆದ್ದ ತಂಡ ಪಂದ್ಯ ಗೆದ್ದಿಲ್ಲ; ಸಿಎಸ್‌ಕೆಗೆ ಮಣ್ಣು ಮುಕ್ಕಿಸಲು ಆರ್‌ಸಿಬಿ ಸಜ್ಜು
RCB Vs CSK: ಆರ್‌ಸಿಬಿ ಹಾಗೂ ಆರ್‌ಸಿಬಿ ತಂಡಗಳ ನಡುವೆ 2022ರಿಂದಲೂ 2024ರವರೆಗೆ ಮೋಡಿಯೇ ನಡೆದಿದೆ. ಇದೀಗ ಇಂದು ಮತ್ತೆ ಮಹಾ ಮೋಡಿ ನಡೆಯುವ ಸಾಧ್ಯತೆ ಹೆಚ್ಚಿದೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಿಎಸ್‌ಕೆ vs ಆರ್‌ಸಿಬಿ 5 ಪಂದ್ಯಗಳ ಮೋಡಿ
2022 - RCB ಟಾಸ್ ಗೆದ್ದಿತು & CSK ಪಂದ್ಯ ಗೆದ್ದಿತು
2022 - CSK ಟಾಸ್ ಗೆದ್ದಿತು & RCB ಪಂದ್ಯ ಗೆದ್ದಿತು
2023 - RCB ಟಾಸ್ ಗೆದ್ದಿತು & CSK ಪಂದ್ಯ ಗೆದ್ದಿತು
2024 - RCB ಟಾಸ್ ಗೆದ್ದಿತು & CSK ಪಂದ್ಯ ಗೆದ್ದಿತು
2024 - CSK ಟಾಸ್ ಗೆದ್ದಿತು & CSK ಪಂದ್ಯ ಗೆದ್ದಿತು
2025 - CSK ಟಾಸ್ ಗೆದ್ದಿತು & RCB ಪಂದ್ಯ ಗೆದ್ದಿತು

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 196 ಬೃಹತ್ ರನ್‌ಗಳನ್ನು ಕಲೆಹಾಕಿತು. ಕೊನೆಯ ಓವರ್ ಬೌಲಿಂಗ್ ಮಾಡಿದ ಸ್ಯಾಮ್ ಕರನ್ ಅವರ ಎಸೆತದಲ್ಲಿ ಟಿಮ್ ಡೇವಿಡ್ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ 196 ರನ್‌ಗಳನ್ನು ಮುಟ್ಟಿಸಿದರು.
ಆರ್‌ಸಿಬಿ ಪರ ನಾಯಕ ರಜತ್ ಪಾಟಿದಾರ್ 51 ರನ್‌ಗಳ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಫಿಲಿಫ್ ಸಾಲ್ಟ್ 32 ಮತ್ತು ವಿರಾಟ್ ಕೊಹ್ಲಿ 31 ರನ್, ದೇವದತ್ ಪಡಿಕ್ಕಲ್ 27 ರನ್, ಲಿವಿಗ್‌ಸ್ಟನ್ 10, ಜಿತೇಶ್ ಶರ್ಮಾ 12, ಟೀಮ್ ಡೆವಿಡ್ 22 ರನ್‌ಗಳನ್ನು ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 196ಕ್ಕೆ ಏರಿಸಿದರು.
ಸಿಎಸ್‌ಕೆ ತಂಡ: ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ಸ್ಯಾಮ್ ಕರನ್, ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ಮಥಿಶಾ ಪತಿರಾನ, ಖಲೀಲ್ ಅಹ್ಮದ್.
ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್.












Click it and Unblock the Notifications