RCB: ಆರ್‌ಸಿಬಿಗೆ ಇಬ್ಬರು ಹೊಸ ಸ್ಫೋಟಕ ಬ್ಯಾಟರ್‌ಗಳು..
IPL 2025 RCB: ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಟೀಂ ಅಂದ್ರೆ ಅದು ಆರ್‌ಸಿಬಿ. ಅದರಲ್ಲೂಈ ಬಾರಿ ಅಂದರೆ 2025ನೇ ಆವೃತ್ತಿಯಲ್ಲಿ ಸ್ಫೋಟಕ ಆಲ್‌ರೌಂಡರ್‌ಗಳನ್ನೇ ಒಳಗೊಂಡಿದೆ. ಒಬ್ಬರು ಗಾಯದಿಂದ ಹೊರಗುಳಿದರೆ, ಆ ಸ್ಥಾನವನ್ನು ತುಂಬಬಲ್ಲ ಮತ್ತೊಬ್ಬರು ಎಂಟ್ರಿ ಕೊಡಲಿದ್ದಾರೆ. ಅಂತಹ ತಂಡವನ್ನು ಆರ್‌ಸಿಬಿ ಹೊಂದಿದೆ. ಹಾಗಾದ್ರೆ ಆ ಆಟಗಾರರು ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಐಪಿಎಲ್ ಹರಾಜಿನ ವೇಳೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸ್ಟ್ರಾಂಗ್ ಆಟಗಾರರನ್ನ ಕೈಬಿಟ್ಟು ಎಂತಹ ಕಳಪೆ ಟೀಂ ಖರೀದಿ ಮಾಡಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ, ಇದೀಗ ಬಹುತೇಕ ಕ್ರಿಕೆಟ್ ದಿಗ್ಗಜಿಗರು ಕೂಡ ಆರ್‌ಸಿಬಿಯನ್ನು ಹೊಗಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಉತ್ತಮವಾಗಿದೆ.

ಆರ್‌ಸಿಬಿಯಲ್ಲಿರುವ ಎಲ್ಲಾ ಆಟಗಾರರು ಕೂಡ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದು, ಎಲ್ಲಾ ತಂಡಗಳ ಆಟಗಾರರು ಬೆದರುತ್ತಿದ್ದಾರೆ. ಅಷ್ಟರ ಮಟ್ಟಿಗೆ ಬ್ಯಾಟಿಂಗ್, ಬೌಲಿಂಗ್ ಲೈನ್ ಅಪ್ ಅನ್ನು ಹೊಂದಿದೆ. ಅದರಲ್ಲೂ ಈ ಬಾರಿ ಎಂಟ್ರಿ ಕೊಟ್ಟಿರುವ ಇಬ್ಬರು ಸ್ಫೋಟಕ ಬ್ಯಾಟರ್‌ಗಳು ಉಳಿದ ತಂಡಗಳನ್ನು ಬೆಚ್ಚಿಬೀಳುವಂತೆ ಮಾಡಿದ್ದಾರೆ. ಆ ಆಟಗಾರರು ಯಾರು ಎನ್ನುವ ಕುತೂಹಲ ಬಹುತೇಕ ಮಂದಿಗೆ ಕಾಡತೊಡಗಿರುತ್ತದೆ.
ಬೇಬಿ ಎಬಿಡಿ: ಫಿಲಿಪ್ ಸಾಲ್ಟ್ ಗಾಯದಿಂದ ಬಳಲುತ್ತಿರುವ ಹಿನ್ನೆಲೆ ಆರ್‌ಸಿಬಿ ಈ ಸ್ಥಾನಕ್ಕೆ ಯಾರನ್ನೂ ಆಡಿಸಬೇಕೆನ್ನುವ ಚಿಂತೆಯಲ್ಲಿತ್ತು. ಕೊನೆಗೆ 21 ವರ್ಷದ ಜಾಕೋಬ್ ಬೆಥೆಲ್ ಅವರನ್ನು ಫಿಲ್ ಸಾಲ್ಟ್ ಸ್ಥಾನಕ್ಕೆ ವಿರಾಟ್ ಕೊಹ್ಲಿ ಜೊತೆ ಆರಂಭಿಕರಾಗಿ ಕಳೆದ ಎರಡು ಪಂದ್ಯಗಳನ್ನು ಆಡಿಸಲಾಗಿತ್ತು. ಮೊದಲ ಪಂದ್ಯದಲ್ಲಿ ಮುಗ್ಗರಿಸಿದ್ದರು. ಆದರೆ, ಎರಡನೇ ಪಂದ್ಯ ಸಿಎಸ್‌ಕೆ ವಿರುದ್ಧ ಚಿನ್ನಸ್ವಾಮಿಯಲ್ಲಿ ಆಡಿದ ಅವರು (33 ಎಸೆತಗಳಲ್ಲಿ 55) ಆಕರ್ಷಕ ಅರ್ಧ ಶತಕ ಸಿಡಿಸಿ ಮಿಂಚಿದರು. ಆಗ ಇವರ ಸಾಮರ್ಥ್ಯ ಏನೆಂದು ಎಲ್ಲಾ ತಂಡಗಳಿಗೂ ಅರ್ಥವಾಯಿತು.
ಜಾಕೋಬ್ ಬರೀ ಸ್ಫೋಟಕ ಬ್ಯಾಟರ್ ಅಷ್ಟೇ ಅಲ್ಲ, ಬೌಲಿಂಗ್, ಉತ್ತಮ ಫೀಲ್ಡಿಂಗ್ ಕೂಡ ಮಾಡುತ್ತಾರೆ. ಒಟ್ಟಿನಲ್ಲಿ ಆರ್‌ಸಿಬಿಗೆ ಸಿಕ್ಕ ಸ್ಫೋಟಕ ಆಲ್‌ರೌಂಡರ್‌ಗಳಲ್ಲಿ ಇವರೊಬ್ಬರಾಗಿದ್ದಾರೆ. ಇತ್ತೀಚೆಗಷ್ಟೇ ಸಿಎಸ್‌ಕೆ ವಿರುದ್ಧ ಬೆಂಗಳೂರಿನಲ್ಲಿ ಯುವ ಆಟಗಾರ ಜಾಕೋಬ್ ಬೆಥೆಲ್ ಅಬ್ಬರದ ಬ್ಯಾಟಿಂಗ್ ಕಂಡು ಎಂಎಸ್ ಧೋನಿ ಕೂಡ ದಂಗಾದ ಘಟನೆ ನಡೆದಿದೆ. ಅವರು ಅಂದು ಯೋಚನೆ ಮಾಡುವ ರೀತಿ ಹೇಗಿತೆಂದರೆ, ಆರ್‌ಸಿಬಿಯಲ್ಲಿ ಇಂತಹ ಆಟಗಾರರು ಇದ್ದಾರಾ ಎನ್ನುವಂತಿತ್ತು.
ಬ್ಲ್ಯಾಕ್ ಡ್ರ್ಯಾಗನ್: ಮತ್ತೊಂದೆಡೆ, ಅಂದೇ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಪರ ಬ್ಯಾಟಿಂಗ್‌ಗಿಳಿದ ರೊಮ್ಯಾರಿಯೋ ಶೆಫರ್ಡ್ ಕೂಡ ಸಿಡಿಲಬ್ಬರದ ಅರ್ಧ ಶಕತ ಸಿಡಿಸಿ ಇಡೀ ಕ್ರೀಡಾಂಗಣವೇ ತನ್ನತ್ತ ತಿರುಗುವಂತೆ ಮಾಡಿದರು. ಸಿಎಸ್‌ಕೆ ಬೌಲರ್‌ಗಳು ಯಾವ ಬಾಲ್ ಹಾಕಿದರೂ ಬ್ಯಾಕ್ ಟು ಬ್ಯಾಕ್ ಬೌಂಡರಿ, ಸಿಕ್ಸರ್‌ಗಳನ್ನು ಚಚ್ಚಿದ್ದರು. ಅಂದಿನಿಂದ ಅವರಿಗೆ ಆರ್‌ಸಿಬಿ ಅಭಿಮಾನಿಗಳು ಬ್ಲಾಕ್ ಡ್ರ್ಯಾಗನ್ ಅಂತಲೇ ಹೆಸರಿನಿಂದ ಕರೆಯುತ್ತಿದ್ದಾರೆ. ಅಲ್ಲದೆ, ಕ್ರಿಗ್ ಗೇಲ್‌ಗೆ ಹೋಲಿಕೆ ಮಾಡಿದ್ದಾರೆ.
ಸಿಎಸ್‌ಕೆ ವಿರುದ್ಧ ಪಂದ್ಯದಲ್ಲಿ ಆರ್‌ಸಿಬಿ ಪರ ಬ್ಯಾಟಿಂಗ್‌ಗಿಳಿದ ಶೆಫರ್ಡ್ ಬರೀ 14 ಎಸೆತಗಳಲ್ಲಿ 53 ರನ್ ಬಾರಿಸಿ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಹೀಗೆ ಅಂದು ಕಿಂಗ್ ಕೊಹ್ಲಿ 33 ಎಸೆತಗಳಲ್ಲಿ 62, ಜಾಕೋಬ್ ಬೆಥೆಲ್ 33 ಎಸೆತಗಳಲ್ಲಿ 55, ಹಾಗೂ ರೊಮ್ಯಾರಿಯೋ ಶೆಫರ್ಡ್ 4 ಎಸೆತಗಳಲ್ಲಿ 53 ರನ್‌ಗಳನ್ನು ಸಿಡಿಸಿ ಬೃಹತ್ ಮೊತ್ತ ಕಲೆಹಾಕುವಲ್ಲಿ ನೆರವಾದರು.
ಅಂದು ಮಧ್ಯಮ ಕ್ರಮಾಂಕದಲ್ಲಿ ಬಂದ ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್, ಜಿತೇಶ್ ಶರ್ಮಾ ತಂಡಕ್ಕೆ ರನ್ ಕದಿಯಲು ವಿಫಲರಾದರು. ಇವರು ಮಾಡಬೇಕಿದ್ದ ಕೆಲಸವನ್ನು ಅಂದು ಬೆಥೆಲ್ ಹಾಗೂ ಶೆಫರ್ಡ್ ಮಾಡಿ ತೋರಿಸಿದರು. ಈ ಮೂಲಕ ಆರ್‌ಸಿಬಿಯಲ್ಲಿ ಒಬ್ಬ ಕೈಕೊಟ್ಟರೆ, ಮತ್ತೊಬ್ಬರು ನೆರವಿಗೆ ಬರಲಿದ್ದಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೆ, ಆರ್‌ಸಿಬಿಯಲ್ಲಿ ಬೌಲಿಂಗ್, ಬ್ಯಾಟಿಂಗ್ ಎರಡು ವಿಭಾಗದಲ್ಲಿ ಯಾವುದೇ ಕೊರತೆ ಇಲ್ಲ ಎನ್ನುವುದನ್ನೂ ತೋರಿಸಿದ್ದಾರೆ.












Click it and Unblock the Notifications