RCB Vs RR: ಪಿಂಕ್ ಸಿಟಿಯಲ್ಲಿ ಗ್ರೀನ್‌ ಜೆರ್ಸಿ ಹವಾ; ಆರ್‌ಆರ್ ವಿರುದ್ಧ ಗೆಲುವಿಗೆ ಆರ್‌ಸಿಬಿ ಭರ್ಜರಿ ಸಿದ್ಧತೆ

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು (ಏಪ್ರಿಲ್‌ 13) ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಸೆಣಸಲಿದೆ. ಅದರಲ್ಲೂ ಆರ್‌ಸಿಬಿ ಜೆರ್ಸಿ ಕಲರ್ ಬಲದಲಾವಣೆ ಮೂಲಕ ಆರ್‌ಆರ್ ಹೋಂ ಗ್ರೌಂಡ್‌ನಲ್ಲಿ ಕಾದಾಟ ನಡೆಸಿ ಗೆಲುವು ಸಾಧಿಸಲು ಭರ್ಜರಿ ತಯಾರಿ ನಡೆದಿದೆ.

ಐಪಿಎಲ್‌ 2025ರ 28ನೇ ಪಂದ್ಯ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಆರ್‌ಆರ್ ನಡುವೆ ನಡೆಯಲಿದೆ. ಹಾಗಾದ್ರೆ ಸಮಯ, ನೇರಪ್ರಸಾರ ಪ್ಲೇಯಿಂಗ್‌ 11 ಹೇಗಿರಲಿದೆ ಎಂದು ಇಲ್ಲಿ ತಿಳಿಯಿರಿ.

IPL 2025 RCB Players to Wear Green Jersey in Match Against RR

ಜೈಪುರದ ಸವಾಯ್‌ ಮಾನ್ಸಿಂಗ್‌ ಕ್ರೀಡಾಂಗಣದಲ್ಲಿ ಇಂದು ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದೆ. ಇದಕ್ಕೂ ಮುಂಚೆ 3 ಗಂಟೆಗೆ ಟಾಸ್‌ ನಡೆಯಲಿದ್ದು, ಇಂದಾದ್ರೂ ಆರ್‌ಸಿಬಿ ಟಾಸ್‌ ಗೆಲ್ಲುತ್ತದೆಯಾ ಎಂದು ಕಾದುನೋಡಬೇಕಿದೆ. ಆರ್​ಸಿಬಿ ಆಟಗಾರರು ತಮ್ಮ ಕೆಂಪು ಮತ್ತು ಕಪ್ಪು ಮಿಶ್ರಿತ ಜೆರ್ಸಿ ಬದಲಿಗೆ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

ಹಸಿರು ಜೆರ್ಸಿ ಧರಿಸುವ ಉದ್ದೇಶವೇನು?: 2011ರ ಆವೃತ್ತಿಯಿಂದಲೂ ಪ್ರತಿ ಆವೃತ್ತಿಯ ಒಂದು ಪಂದ್ಯದಲ್ಲಿ ಆರ್‌ಸಿಬಿ ಹಸಿರು ಜೆರ್ಸಿ ತೊಟ್ಟು ಪಂದ್ಯ ಆಡಲು ಆರಂಭಿಸಿತು. ನಮ್ಮ ಸುತ್ತಲಿನ ಹಸಿರು ಪರಿಸರವನ್ನು ಸಂರಕ್ಷಣೆ ಮಾಡುವಂತೆ ಜಾಗೃತಿ ಮೂಡಿಸುವ ಉದ್ದೇಶ ಆಗಿದೆ. ಹಾಗಾದ್ರೆ ಈ ಜೆರ್ಸಿಯಲ್ಲಿ ಆಡಿದ ಆರ್‌ಸಿಬಿ ಇತಿಹಾಸ ಏನೆಂದು ಇಲ್ಲಿ ತಿಳಿಯಿರಿ.

ಹಸಿರುವ ಜೆರ್ಸಿ ತೊಟ್ಟ ಹೆಚ್ಚು ಪಂದ್ಯಗಳಲ್ಲಿ ಆರ್‌ಸಿಬಿ ಸೋಲು ಕಂಡಿದೆ. ಹಸಿರು ಜೆರ್ಸಿಯಲ್ಲಿ ಆರ್‌ಸಿಬಿ 2011ರಲ್ಲಿ ಗೆದ್ದಿತ್ತು. 2012, 2013, 2014ರಲ್ಲಿ ಸೋಲನುಭವಿಸಿದೆ. 2015ರಲ್ಲಿ ಯಾವುದೇ ಫಲಿತಾಂಶ ಇಲ್ಲದೇ ಪಂದ್ಯ ರದ್ದಾಯಿತು. 2016ರಲ್ಲಿ ಗೆಲುವು, ನಂತರ 2017, 2018, 2019, 2020ರಲ್ಲಿ ಸೋಲು ಕಂಡಿದೆ. 2021ರಲ್ಲಿ ನೀಲಿ ಜೆರ್ಸಿ ಧರಿಸಿ ಕಣಕ್ಕಿಳಿದು ಸೋಲುಂಡಿತ್ತು.

ಹಸಿರು ಜೆರ್ಸಿ ಇತಿಹಾಸ: 2023ರಲ್ಲಿ ಆರ್‌ಆರ್ ವಿರುದ್ಧ ತವರು ಕ್ರೀಡಾಂಗಣದಲ್ಲೇ ಗೆಲುವು ಸಾಧಿಸಿತ್ತು. ಆದರೆ ಕಳೆದ ಅಂದರೆ 2024ರ ಆವೃತ್ತಿಯಲ್ಲಿ ಕೆಕೆಆರ್‌ ವಿರುದ್ಧ ಸೋಲನುಭವಿಸಿತ್ತು. ಇದುವರೆಗೆ 14 ಪಂದ್ಯಗಳ ಪೈಕಿ 9ರಲ್ಲಿ ಸೋಲು ಕಂಡಿದ್ದು, 4ರಲ್ಲಿ ಮಾತ್ರ ಗೆದ್ದಿದೆ. 1 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇನ್ನು ಇಂದು (ಏಪ್ರಿಲ್‌ 13, 2025) ಆರ್‌ಆರ್ ವಿರುದ್ಧ ಹಸಿರು ಜೆರ್ಸಿಯಲ್ಲೇ ಕಣಕ್ಕಿಯಲು ಸಜ್ಜಾಗಿದ್ದು, ಇಂದಿನ ಪಂದ್ಯ ಏನಾಗಲಿದೆ ಎಂದು ಕಾದುನೋಡಬೇಕಿದೆ.

ಹಸಿರು ಜೆರ್ಸಿಯಲ್ಲಿ ಗೆಲುವು ಹಾಗೂ ಸೋಲುಗಳು

2011 - ಗೆಲುವು
2012 - ಸೋಲು
2013 - ಸೋಲು
2014 - ಸೋಲು
2015 - ಪಂದ್ಯ ರದ್ದು
2016 - ಗೆಲುವು
2017- ಸೋಲು
2018 - ಸೋಲು
2019 - ಸೋಲು
2020 - ಸೋಲು
2021 - ಸೋಲು
2022 - ಗೆಲುವು
2023 - ಗೆಲುವು
2024 - ಸೋಲು

ಆರ್‌ಸಿಬಿ ಹಾಗೂ ಆರ್‌ಆರ್ ಸ್ಥಾನ ಏನು?: ಈ ಆವೃತ್ತಿಯಲ್ಲಿ ಇದುವರೆಗೂ ಆಡಿದ 5 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 6 ಅಂಕಗಳೊಂದಿಗೆ ಆರ್‌ಸಿಬಿಯು ಪಾಯಿಂಟ್ಸ್‌ ಟೇಬಲ್‌ನಲ್ಲಿ 5ನೇ ಸ್ಥಾನದಲ್ಲಿ. ಹಾಗೆಯೇ ಆರ್‌ಆರ್ ತಂಡ 5 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 4 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ 7ನೇ ಸ್ಥಾನದಲ್ಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+