IPL 2025 RCB Vs CSK: ಸಿಎಸ್‌ಕೆಗೆ ಬೃಹತ್‌ ರನ್‌ಗಳ ಗುರಿ ನೀಡಿದ ಆರ್‌ಸಿಬಿ

RCB Vs CSK: ಐಪಿಎಲ್ 2025ರ ಆವೃತ್ತಿಯ 8ನೇ ಪಂದ್ಯ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ ಇಂದು (ಮಾರ್ಚ್‌ 28) ನಡೆಯುತ್ತಿದೆ. ಮೊದಲು ಬ್ಯಾಟ್‌ ಮಾಡಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 196 ರನ್‌ಗಳನ್ನು ಕಲೆಹಾಕಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್‌ಗೆ 197 ಬೃಹತ್‌ ಮೊತ್ತದ ರನ್‌ಗಳ ಗುರಿ ನೀಡಿದೆ. ಹಾಗಾದ್ರೆ ಆರ್‌ಸಿಬಿ ಪರ ಯಾರೆಲ್ಲಾ ಎಷ್ಟು ರನ್‌ಗಳನ್ನು ಚಚ್ಚಿದರು ಎಂದು ತಿಳಿಯಿರಿ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದ ಸಿಎಸ್‌ಕೆ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 196 ಬೃಹತ್‌ ರನ್‌ಗಳನ್ನು ಕಲೆಹಾಕಿತು. ಕೊನೆಯ ಓವರ್ ಬೌಲಿಂಗ್ ಮಾಡಿದ ಸ್ಯಾಮ್ ಕರನ್ ಅವರ ಎಸೆತದಲ್ಲಿ ಟಿಮ್ ಡೇವಿಡ್ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ 196 ರನ್‌ಗಳನ್ನು ಮುಟ್ಟಿಸಿದರು.

IPL 2025 RCB bat first and target of 197 runs for CSK Team

ಆರ್‌ಸಿಬಿ ಪರ ನಾಯಕ ರಜತ್ ಪಾಟಿದಾರ್ 51 ರನ್‌ಗಳ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಫಿಲಿಫ್‌ ಸಾಲ್ಟ್ 32 ಮತ್ತು ವಿರಾಟ್ ಕೊಹ್ಲಿ 31 ರನ್, ದೇವದತ್ ಪಡಿಕ್ಕಲ್ 27 ರನ್‌, ಲಿವಿಗ್‌ಸ್ಟನ್‌ 10, ಜಿತೇಶ್ ಶರ್ಮಾ 12, ಟೀಮ್‌ ಡೆವಿಡ್‌ 22 ರನ್‌ಗಳನ್ನು ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 196ಕ್ಕೆ ಏರಿಸಿದರು.

ಮತ್ತೊಂದೆಡೆ ಚೆನ್ನೈ ಪರ ನೂರ್ ಅಹ್ಮದ್ 3 ವಿಕೆಟ್ ಪಡೆದರು. ಮಥೀಶ್ ಪತಿರಾನಾ 2 ವಿಕೆಟ್ ಪಡೆದರು. ಖಲೀಲ್ ಅಹ್ಮದ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಒಂದು ವಿಕೆಟ್ ಕಬಳಿಸಿದರು.

ಆರ್‌ಸಿಬಿ ಬಾರಿಸಿದ 196 ರನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿರುದ್ಧ ಚೆಪಾಕ್‌ ಮೈದಾನದಲ್ಲಿ 2ನೇ ಗರಿಷ್ಠ ಮೊತ್ತ ಇದಾಗಿದೆ. ಇದಕ್ಕೂ ಮುನ್ನ 2012ರಲ್ಲಿ ಆರ್‌ಸಿಬಿ 205 ರನ್‌ಗಳನ್ನು ಬಾರಿಸಿತ್ತು. ಈ ಮೊತ್ತವನ್ನು ಚೆನ್ನೈ ಕೊನೇ ಎಸೆತದಲ್ಲಿ ಬೆನ್ನಟ್ಟಿ ಗೆಲುವು ಕಂಡಿತ್ತು. ಇದು ಈವರೆಗೂ ಚೆನ್ನೈನಲ್ಲಿ ತಂಡವೊಂದು ಚೇಸ್‌ ಮಾಡಿದ ಗರಿಷ್ಠ ಮೊತ್ತ ಆಗಿದೆ.

ಸಿಎಸ್‌ಕೆ ತಂಡ: ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ಸ್ಯಾಮ್ ಕರನ್, ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ಮಥಿಶಾ ಪತಿರಾನ, ಖಲೀಲ್ ಅಹ್ಮದ್.

ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+