CSK vs MI: ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್‌ ನಾಯಕ ಯಾರು? ಪ್ಲೇಯಿಂಗ್ ಇಲೆವೆನ್, ಪಿಚ್ ವರದಿ

ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಆವೃತ್ತಿಗೆ ಶನಿವಾರ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಆರ್ ಸಿಬಿ ವಿರುದ್ಧ ಸೆಣೆಸಲು ಸಜ್ಜಾಗಿದೆ. ಭಾನುವಾರ ಎರಡು ಪಂದ್ಯ ನಡೆಯಲಿದ್ದು ಮಧ್ಯಾಹ್ನ ನಡೆಯುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಆಡಲಿದೆ. ಎರಡನೇ ಪಂದ್ಯದಲ್ಲಿ ಐಪಿಎಲ್‌ನ ಎರಡು ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ.

2024ರ ಐಪಿಎಲ್‌ನಲ್ಲಿ ನಿಧಾನಗತಿಯ ಓವರ್ ರೇಟ್‌ಗಾಗಿ ನಾಯಕ ಹಾರ್ದಿಕ್‌ ಪಾಂಡ್ಯಗೆ ಒಂದು ಪಂದ್ಯದಿಂದ ನಿಷೇಧ ಹೇರಲಾಗಿದ್ದು ಅವರು ಮೊದಲ ಪಂದ್ಯದಲ್ಲಿ ಅನಿವಾರ್ಯವಾಗಿ ಹೊರಗುಳಿಯಲಿದ್ದಾರೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ.

ipl 2025 mi vs csk match suryakumar lead mumbai indians fans waiting dhoni playing xi

ಮುಂಬೈ ಇಂಡಿಯನ್ಸ್ ತಂಡಕ್ಕೆ ಹಿನ್ನಡೆ

ಮೊದಲ ಪಂದ್ಯದಲ್ಲೇ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಆಡದಿರುವುದು, ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಫಿಟ್ ಆಗದೇ ಇರುವುದು ದೊಡ್ಡ ಹಿನ್ನಡೆಯಾಗಿದೆ. ಆದರೂ ತಂಡದಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ವಿಲ್ ಜ್ಯಾಕ್ಸ್‌ರಂತಹ ಸ್ಪೋಟಕ ಬ್ಯಾಟರ್ ಗಳಿದ್ದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೋರಾಟ ಕೊಡುವ ವಿಶ್ವಾಸದಲ್ಲಿದೆ.

ಧೋನಿ ನೋಡಲು ಕಾಯ್ತಿದ್ದಾರೆ ಫ್ಯಾನ್ಸ್

ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್‌ಕೆ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುತ್ತಿದ್ದು ಅಭಿಮಾನಿಗಳ ಬೆಂಬಲವನ್ನು ಪಡೆಯಲಿದೆ. ಎಂಎಸ್ ಧೋನಿ ಬ್ಯಾಟಿಂಗ್ ನೋಡಲು ಅವರ ಕೋಟ್ಯಂತರ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಎಂಎಸ್ ಧೋನಿ ನೆಟ್ಸ್‌ನಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದು ಪೂರ್ತಿಯಾಗಿ ಫಿಟ್ ಆಗಿದ್ದಾರೆ.

ನಾಯಕ ರುತುರಾಜ್ ಗಾಯಕ್ವಾಡ್‌ಗೆ ತಂಡದ ಆಯ್ಕೆಯಲ್ಲಿ ಹೆಚ್ಚಿನ ಸಮಸ್ಯೆ ಏನೂ ಆಗುವುದಿಲ್ಲ. ಕಳೆದ ವರ್ಷ ಇದ್ದ ತಂಡವನ್ನೇ ಬಹುತೇಕ ಉಳಿಸಿಕೊಂಡಿದ್ದು ಕೆಲವೇ ಕೆಲವು ಬದಲಾವಣೆ ಮಾಡಲಾಗಿದೆ. ಡೆವೋನ್ ಕಾನ್ವೆ ಅಥವಾ ರಚಿನ್ ರವೀಂದ್ರ ಇಬ್ಬರಲ್ಲಿ ಯಾರು ಇನ್ನಿಂಗ್ಸ್ ಆರಂಭಿಸುತ್ತಾರೆ ನೋಡಬೇಕಿದೆ.

ಚೆನ್ನೈನಲ್ಲಿ ಸ್ಪಿನ್ ಮತ್ತು ವೇಗಿಗಳಿಗೆ ಅನುಕೂಲವಾಗುವ ಎರಡೂ ಮಾದರಿಯ ಪಿಚ್ ಇದೆ. ಚೆನ್ನೈನಲ್ಲಿ ಮತೀಶ ಪತಿರಾನ, ಸ್ಯಾಮ್ ಕರನ್, ಖಲೀಲ್ ಅಹ್ಮದ್‌ರಂತಹ ವೇಗದ ಬೌಲರ್ ಇದ್ದು, ವೇಗಿಗಳಿಗೆ ಅನುಕೂಲವಾಗುವಂತೆ ಪಿಚ್‌ ನಿರ್ಮಿಸುವ ಸಾಧ್ಯತೆ ಇದೆ. ಮಾರ್ಚ್ 23ರಂದು ಭಾನುವಾರ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ.

ಸಂಭಾವ್ಯ ಆಡುವ ಬಳಗ

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ವಿಲ್ ಜ್ಯಾಕ್ಸ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ರಾಬಿನ್ ಮಿಂಜ್‌ (ವಿಕೆಟ್ ಕೀಪರ್), ದೀಪಕ್ ಚಾಹರ್, ಕರಣ್ ಶರ್ಮಾ, ಮುಜೀಬ್ ಉರ್ ರೆಹಮಾನ್, ಟ್ರೆಂಟ್ ಬೌಲ್ಟ್.

ಇಂಪ್ಯಾಕ್ಟ್ ಪ್ಲೇಯರ್: ರಾಜ್ ಬಾವ, ಸತ್ಯನಾರಾಯಣ ರಾಜು, ಅಶ್ವನಿ ಕುಮಾರ್.

ಸಿಎಸ್‌ಕೆ: ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಶಿವಂ ದುಬೆ, ಡೆವೋನ್ ಕಾನ್ವೆ, ದೀಪಕ್ ಹೂಡಾ, ರವೀಂದ್ರ ಜಡೇಜಾ, ಎಂಎಸ್ ಧೋನಿ, ಮತೀಶ ಪತಿರಾನ, ನೂರ್ ಅಹ್ಮದ್, ಖಲೀಲ್ ಅಹ್ಮದ್, ಮುಖೇಶ್ ಚೌಧರಿ.

ಇಂಪ್ಯಾಕ್ಟ್ ಪ್ಲೇಯರ್: ಶ್ರೇಯಸ್ ಗೋಪಾಲ್, ಕಮಲೇಶ್ ನಾಗರಕೋಟಿ, ರವಿಚಂದ್ರನ್ ಅಶ್ವಿನ್, ವಿಜಯ್ ಶಂಕರ್, ರಾಹುಲ್ ತ್ರಿಪಾಠಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+